ಆವಾಗ ಸಾಯಿ ಪಲ್ಲವಿ ಡ್ಯಾನ್ಸ್ ನೋಡಿ ಮೆಚ್ಚಿಕೊಂಡ್ರು ರಂಭಾ. ಐಶ್ವರ್ಯಾ ರೈ ತರಹದ ಅಂದ, ಮಾಧುರಿ ದೀಕ್ಷಿತ್ ತರಹದ ಗ್ರೇಸ್, ಸರೋಜ ಖಾನ್ ತರಹದ ಡ್ಯಾನ್ಸ್ ಟ್ಯಾಲೆಂಟ್ ಇರೋ ಹುಡುಗಿ ಅಂತ ಆ ಶೋನ ಹೋಸ್ಟ್ ಮಾಡ್ತಿದ್ದ ಉದಯಭಾನು, ಹಾಗೆಯೇ ರಂಭಾ, ಸಂಗೀತ ಕೂಡ ಹೇಳಿದ್ರು. ಅವಳನ್ನ ಅಭಿನಂದಿಸಿದ್ರು. ಕಟ್ ಮಾಡಿದ್ರೆ 15 ವರ್ಷಗಳಲ್ಲಿ ಸಾಯಿ ಪಲ್ಲವಿ ತುಂಬಾ ಬೆಳೆದಿದ್ದಾಳೆ. ತುಂಬಾ ಸಾಧಿಸಿದ್ದಾಳೆ. ಮಲಯಾಳಂ ಚಿತ್ರ `ಪ್ರೇಮಂ`ನಿಂದ ಹೀರೋಯಿನ್ ಆಗಿ ಪರಿಚಯವಾಗಿ ಈಗ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿದ್ದಾಳೆ.