ದಾಂಪತ್ಯ ಕಲಹವನ್ನು ಐಶ್ವರ್ಯಾ, ಅಭಿಷೇಕ್ ನಿಭಾಯಿಸೋದು ಹೇಗೆ?

First Published | Jun 15, 2020, 5:00 PM IST

ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯಗಳು ಬರುವುದು ಸಾಮಾನ್ಯ ಆದರೆ ಅಹಂಕಾರವನ್ನು ಬಿಟ್ಟು ಜಗಳವನ್ನು ಕೊನೆಗೊಳಿಸುವುದು ಮುಖ್ಯ. ಬಾಲಿವುಡ್‌ನ ಮೋಸ್ಟ್‌ ಪವರ್‌ಫುಲ್‌ ಕಪಲ್‌ ಅಭಿ‍ಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ರೈ ನಡುವೆಯೂ ಆಗಾಗ ಜಗಳ ನೆಡೆಯುತ್ತದಂತೆ. ಈ ವಿಷಯ ಟಿವಿ ಶೋನಲ್ಲಿ ಹೊರಬಂದಿದೆ. ಐಶ್ವರ್ಯಾ  ತಮ್ಮ ಸಿನಿಮಾದ ಪ್ರಮೋ‍ಷನ್‌ನ ವೇಳೆ ಕಪಿಲ್‌ ಶರ್ಮಾ ಶೋನಲ್ಲಿ ಒಪ್ಪಿಕೊಂಡಿದ್ದಾರೆ. ಹಾಗೂ ಐಶ್ವರ್ಯಾ ರೈ ಬಚ್ಚನ್ ಯಾರು ಮೊದಲು ಸಾರಿ ಕೇಳಿ ಜಗಳವನ್ನು ಕೊನೆಗೊಳಿಸುತ್ತಾರೆ ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್‌ ಬಾಲಿವುಡ್‌ನ ಮಾದರಿ ಕಪಲ್‌.
ಎಲ್ಲ ದಾಂಪತ್ಯದಂತೆ ಈ ಜೋಡಿನಡುವೆಯೂ ಭಿನ್ನಭಿಪ್ರಾಯಗಳು ಬರುತ್ತವೆ ಎಂದು ಪತ್ನಿ ಐಶ್ವರ್ಯಾ ಒಪ್ಪಿಕೊಂಡಿದ್ದಾರೆ.
Tap to resize

ದಾಂಪತ್ಯವೆನ್ನುವುದು ಗಾಡಿಯ ಎರಡು ಚಕ್ರಗಳಂತೆ ತಾನೇ. ಎಲ್ಲವೂ ಸರಿ ಇಲ್ಲದಿದ್ದರೂ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದು ಅನಿವಾರ್ಯ. ಜಗಳವೂ ಆಗುತ್ತಿರುತ್ತದೆ. ಒಬ್ಬರು ಸೋಲಲೇ ಬೇಕು. ಈ ಜೋಡಿಯಲ್ಲಿ ಯಾರು ಸೋತು, ಸಾರಿ ಕೇಳುತ್ತಾರಂತೆ ಗೊತ್ತಾ?
ನಟಿ ತನ್ನ ಚಲನಚಿತ್ರ ಸರ್ಬ್ಜಿತ್ ಪ್ರಚಾರಕ್ಕಾಗಿ ದಿ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿದ್ದಾಗ, ಕಪಿಲ್‌ ಅಭಿಷೇಕ್ ಅವರೊಂದಿಗೆ ಸ್ವಲ್ಪ ಜಗಳವಾಡುತ್ತಿರಾ ಎಂದು ನಟಿಗೆ ಪ್ರಶ್ನಿಸಿದರು. 'ಹೌದು ಅದು ನೆಡೆಯುತ್ತದೆ' ಎಂದು ಉತ್ತರಿಸಿದ್ದರು.
ಕಪಿಲ್ ಮತ್ತಷ್ಟು ಮುಂದುವರೆದು ,'ಜಗಳದ ನಂತರ ಯಾರು ಮೊದಲು ಕ್ಷಮೆಯಾಚಿಸುತ್ತಾರೆ?' ಎಂದು ಕೇಳಿದಾಗ ಕರಾವಳಿ ಬೆಡಗಿ ಜೋರಾಗಿ ನಕ್ಕರು.
'ಇದು ಯಾವ ರೀತಿಯ ಪ್ರಶ್ನೆ? ನಿಸ್ಸಂಶಯವಾಗಿ, ಅಭಿಷೇಕ್ ಮೊದಲು ಕ್ಷಮಿಸಿ ಎಂದು ಹೇಳಬೇಕು' ಎಂದು ನವಜೋತ್ ಸಿಂಗ್ ಸಿದ್ಧು ಕಪಿಲ್‌ ಐಶ್ವರ್ಯಾರ ಪ್ರಶ್ನೆಗೆ ಹೇಳಿದ್ದರು.
'ಇಲ್ಲ. ನಾನು ಮೊದಲು ಕ್ಷಮೆಯಾಚಿಸುತ್ತೇನೆ ಮತ್ತು ವಿಷಯವನ್ನು ಮುಗಿಸುತ್ತೇನೆ.' ಶೀಘ್ರವಾಗಿ ಪ್ರತಿಕ್ರಿಯಿಸಿದ್ದರು ಐಶ್ವರ್ಯಾ.
ಅಭಿಷೇಕ್ ಮತ್ತು ಐಶ್ವರ್ಯಾ ಓಪ್ರಾ ವಿನ್‌ಫ್ರೇ ಶೋನ ವಿಡಿಯೋವೊಂದರಲ್ಲಿ ಅಭಿಷೇಕ್, ಐಶ್ವರ್ಯಾಗೆ ಪ್ರಪೋಸ್ ಮಾಡಿದ ಪ್ರಸಂಗ ಹೇಗಿತ್ತೆಂದು ಹಂಚಿಕೊಂಡಿದ್ದರು.
'ನಾನು ಆ ಸಮಯದಲ್ಲಿ ನ್ಯೂಯಾರ್ಕ್‌ನಲ್ಲಿ ಚಿತ್ರದ ಚಿತ್ರೀಕರಣದಲ್ಲಿದ್ದೆ. ನನ್ನ ಹೋಟೆಲ್ ಕೋಣೆಯ ಬಾಲ್ಕನಿಯಲ್ಲಿ ನಿಂತು, ಒಂದು ದಿನ ಐಶ್ವರ್ಯಾಳನ್ನು ಮದುವೆಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ನಾನುಯೋಚಿಸುತ್ತಿದ್ದೆ. ನಂತರ ನಾನು ಐಶ್ವರ್ಯಾಳನ್ನು ಅದೇ ಬಾಲ್ಕನಿಗೆಕರೆತಂದೆ ಮತ್ತು ನನ್ನನ್ನು ಮದುವೆಯಾಗಲು ಕೇಳಿದೆ' ಎಂದು ಅಭಿಷೇಕ್‌ ಆ ರೋಮ್ಯಾಂಟಿಕ್‌ ಘಟನೆಯನ್ನು ಹಂಚಿಕೊಂಡಿದ್ದರು.
ಓಪ್ರಾ ಅಭಿಷೇಕ್ ಅವರನ್ನು, ತಮ್ಮ ಶೋನಲ್ಲಿ ವಿಶ್ವದ ಅತ್ಯಂತ ಸುಂದರ ಮಹಿಳೆಯನ್ನು ಮದುವೆಯಾಗಲು ಏನು ಅನಿಸುತ್ತದೆ ಎಂದು ಕೇಳಿದರು, ಅಭಿಷೇಕ್ 'ಇದು ಕಣ್ಣಿಗೆ ಆಹ್ಲಾದಕರವಾಗಿದೆ' ಎಂದಷ್ಟೇ ಹೇಳಿದ್ದರು.
33 ವರ್ಷದ ಐಶ್ವರ್ಯಾ ರೈ ಹಾಗೂ 31 ವರ್ಷದ ಅಭಿಷೇಕ್ 2007ರಲ್ಲಿ ವಿವಾಹವಾದರು. ಈ ಜೋಡಿಗೆ ಆರಾಧ್ಯ ಎಂಬ ಮಗಳು ಇದ್ದಾಳೆ.
ಮದುವೆ ಬಚ್ಚನ್ ಕುಟುಂಬ ಬಂಗಲೆ 'ಪ್ರತೀಕ್ಷ'ದಲ್ಲಿ ನಡೆದಿದ್ದು, ರಿಸೆಪ್ಷನ್‌ನ್ನು ತಾಜ್ ಹೋಟೆಲ್‌ನಲ್ಲಿ ನಡೆಸಲಾಗಿತ್ತು.
ಐಶ್ವರ್ಯಾ ಮತ್ತು ಅಭಿಷೇಕ್ 'ಧೈ ಅಕ್ಷರ್ ಪ್ರೇಮ್ ಕೆ', 'ಕುಚ್ ನಾ ಕಹೋ', 'ಬಂಟಿ ಔರ್ ಬಬ್ಲಿ', 'ಉಮ್ರಾವ್ ಜಾನ್', 'ಧೂಮ್ -2' ಮತ್ತು 'ಗುರು' ಸೇರಿದಂತೆ 6 ಚಿತ್ರಗಳಲ್ಲಿ ನಟಿಸಿದ್ದಾರೆ. 'ಸರ್ಕಾರ್ ರಾಜ್' (2008) ಮತ್ತು 'ರಾವನ್' (2010) ವಿವಾಹದ ನಂತರ ಬಿಡುಗಡೆಯಾದ ಸಿನಿಮಾಗಳು.

Latest Videos

click me!