ಸುಶಾಂತ್ ಸಾವಿನ ನಂತರ ಮಾಜಿ ಗೆಳತಿ ಆಡಿದ ಮಾತುಗಳಿವು!

First Published | Jun 14, 2020, 10:42 PM IST

 ಧೋನಿ ಅನ್ ಟೋಲ್ಡ್ ಸ್ಟೋರಿ ಮೂಲಕ ಮನೆಮಾತಾಗಿದ್ದ ಸುಶಾಂತ್ ಭಾನುವಾರ ಶಾಕ್ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಈ ಲೋಕದ ಪ್ರಯಾಣ ಮುಗಿಸಿದ್ದಾರೆ. ಒಂದು ಕಾಲದ ಗರ್ಲ್ ಫ್ರೆಂಡ್ ಅಂಕಿತಾ ಲೋಕಂಡೆ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಮಾಜಿ ಗೆಳತಿ ಏನು  ಹೇಳಿದ್ದಾರೆ.

ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಸೀರಿಯಲ್ ಮೂಲಕ ಕಿರುತೆರೆಗೆ ಸುಶಾಂತ್‍ಗೆ ಜೊತೆಯಾಗಿದ್ದು ನಟಿ ಅಂಕಿತಾ ಲೋಕಂಡೆ.
ಮಾನವ್ ಮತ್ತು ಅರ್ಚನಾ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ ಮನಗೆದ್ದಿತ್ತು.
Tap to resize

ತೆರೆಯ ಮೇಲೆ ಒಂದಾಗಿದ್ದ ಸುಶಾಂತ್ ಮತ್ತು ಅರ್ಚನಾ ರಿಯಲ್ ಲೈಫ್‍ನಲ್ಲಿಯೂ ಪಾರ್ಟನರ್ ಆಗುವತ್ತ ಹೆಜ್ಜೆ ಇಟ್ಟಿದ್ದರು.
ರಿಯಾಲಿಟಿ ಶೋ ವೇದಿಕೆಯಲ್ಲಿ ಎಲ್ಲರೆದುರೇ ಅಂಕಿತಾಗೆ ಸುಶಾಂತ್ ಪ್ರಪೋಸ್ ಮಾಡಿದ್ದು ವೈರಲ್ ಆಗಿತ್ತು.
ಆದರೆ ನಂತರ ಕಾಲ ಬದಲಾಯಿತು. ಸುಶಾಂತ್ ಬಾಲಿವುಡ್ ಗೆ ಬಂದ ಕಾರಣ ಇಬ್ಬರು ದೂರ ದೂರ ಆದರು.
ನನ್ನನ್ನು ಸುಶಾಂತ್ ಮಾಜಿ ಗೆಳತಿ ಎಂದು ಕರೆಯಬೇಡಿ ಎಂದು ಅಂಕಿತಾ ಮನವಿ ಮಾಡಿಕೊಂಡಿದ್ದರು.
ಸುಶಾಂತ್ ಆತ್ಮಹತ್ಯೆ ಸುದ್ದಿ ಗೊತ್ತಾಗುತ್ತಿದ್ದಂತೆ ಅಂಕಿತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿ ನಂತರ ಡಿಲೀಟ್ ಮಾಡಿದ್ದಾರೆ.
ನನಗೆ ಈ ಸುದ್ದಿ ನಿಜಕ್ಕೂ ಆಘಾತ ತಂದಿದೆ ಎಂದು ನಟಿ ಪ್ರತಿಕ್ರಿಯೆ ನೀಡಿದ್ದಾರೆ.
ಅವನ ಎದೆಯಾಳದ ಮಾತುಗಳನ್ನು ಕೇಳಿಸಿಕೊಳ್ಳಲು ನಂಗೆ ಆಗಲೇ ಇಲ್ಲ,ಓ ದೇವರೇ ಸಾಧ್ಯವಾದರೆ ಕ್ಷಮಿಸು.. ಎಂಬ ಅರ್ಥದಲ್ಲಿ ಬರೆದಿದ್ದಾರೆ.

Latest Videos

click me!