ಅನಿಲ್ ಅಂಬಾನಿ ಪತ್ನಿ‌ ಜೊತೆಗಿನ ಅಫೇರ್‌ ಬಗ್ಗೆ ಬಾಯಿ ಬಿಟ್ಟ ಸಂಜಯ್‌ ದತ್

First Published | Jun 17, 2020, 6:10 PM IST

ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಸಂಜಯ್‌ ದತ್ ಬಾಲಿವುಡ್‌ನ ಹಲವು ಪ್ರಮುಖ ನಟರಲ್ಲಿ ಒಬ್ಬರು. ಹಿಂದಿ ಸಿನಿಮಾ ರಂಗದ ಹಿರಿಯ ನಟ ಸುನೀಲ್‌ ದತ್‌ ಮಗನಾದ ಸಂಜಯ್‌ ಅದ್ಭುತ ನಟನಾ ಕೌಶ್ಯಲ್ಯ ಹೊಂದಿರುವ ಬಗ್ಗೆ ಅನುಮಾನವೇ ಇಲ್ಲ. ಆದರೆ ಅವರು ಹಲವು ಕಾರಣಗಳಿಂದ ಕುಖ್ಯಾತಿ ಪಡೆದಿದ್ದಾರೆ. ಹಾಗೆ ಅವರ ಲವ್‌ ಅಫೇರ್‌ಗಳು ಲೆಕ್ಕಕ್ಕೆ ಸಿಗದಷ್ಟು. ಸಂಜಯ್‌ರ ಹಳೆಯ ಇಂಟರ್‌ವ್ಯೂ ಒಂದು ವೈರಲ್‌ ಆಗಿದ್ದು, ಅದರಲ್ಲಿ ನಟಿ ಟೀನಾ ಮುನಿಮ್‌ ಜೊತೆಯ ಸಿಕ್ರೇಟ್‌ ಅಫೇರ್‌ ಬಗ್ಗೆ ಸ್ವತಹ ನಟ ಬಾಯಿಬಿಟ್ಟಿದ್ದಾರೆ. ಟೀನಾ ಮುನಿಮ್‌ ಫೇಮಸ್‌ ಬ್ಯುಸ್ನೇಸ್‌ಮ್ಯಾನ್‌ ಅನಿಲ್‌ ಅಂಬಾನಿಯವರ ಪತ್ನಿ.

ಬಾಲಿವುಡ್‌ನ ಮುನ್ನಬಾಯಿ ಫೇಮ್‌ನ ಸಂಜಯ್‌ದತ್ ಭಾರತದ‌ ಪ್ರಮುಖ ನಟರಲ್ಲಿ ಒಬ್ಬರು.
ನಟಿ ಟೀನಾ ಮುನಿಮ್‌ ಜೊತೆಯ ರಿಲೆಷನ್‌ಶಿಪ್‌ ಬಗ್ಗೆ ಬಹಿರಂಗಪಡಿಸಿದ್ದ ಸಂಜಯ್‌ರ ಹಳೆಯ ಇಂಟರ್‌ವ್ಯೂವ್‌ ಈಗ ವೈರಲ್‌ ಆಗಿದೆ.
Tap to resize

ಸಂಜಯ್ ಮತ್ತು ಟೀನಾ ಬಾಲ್ಯದಿಂದಲೂ ಸ್ನೇಹಿತರು. ಮೊದಲ ಚಿತ್ರ ರಾಕಿ ಯಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರು. ಆ ಸಮಯದಲ್ಲಿ ಅವರ ಸಂಬಂಧದ ಬಗ್ಗೆ ಸಿನಿ ಇಂಡಸ್ಟ್ರಿಯಲ್ಲಿ ಚರ್ಚೆಯಾಗಿತ್ತು.
'ನಾನು ಟೀನಾಳನ್ನು ಪ್ರೀತಿಸುತ್ತಿದ್ದೆ. ನನ್ನ ಅನ್‌ಸ್ಕ್ರೀನ್‌ ಕೆಮಿಸ್ಟ್ರಿಯನ್ನು ಬಹಿರಂಗಪಡಿಸಲು ನಾನು ಬಯಸಲಿಲ್ಲ. ನಾನು ತುಂಬಾ ಸ್ವಾರ್ಥಿಯಾಗಿದ್ದೆ. ಟೀನಾ ನನ್ನನ್ನು ಎಂದಿಗೂ ತನ್ನ ಕುಟುಂಬದಿಂದ ದೂರಮಾಡಲಿಲ್ಲ. ನನ್ನ ಪ್ರೀತಿಪಾತ್ರರೊಡನೆ ಯಾವಾಗಲೂ ಸಂಪರ್ಕ ಹೊಂದಲು ಮತ್ತು ಯಾವಾಗಲೂ ಕುಟುಂಬದೊಂದಿಗೆ ಇರಬೇಕೆಂದು ನನಗೆ ಕಲಿಸಿದವರಲ್ಲಿ ಅವಳು ಒಬ್ಬಳು' ಎಂದು ಹೇಳಿರುವ ಸಂಜಯ್‌ ದತ್‌ ಸಂದರ್ಶನ ವೈರಲ್‌ ಆಗಿದೆ
'ಟೀನಾ ಯಾವಾಗಲೂ ತನ್ನ ತಂದೆ ಮತ್ತು ಸಹೋದರಿಯ ಮನೆಗೆ ಹೋಗಬೇಕೆಂದು ನನಗೆ ಹೇಳುತ್ತಿದ್ದಳು. ತಾಯಿ ನರ್ಗಿಸ್‌ರ ನಿಧನದ ನಂತರ, ಟೀನಾ ನನಗೆ ಸಂಪೂರ್ಣ ಬೆಂಬಲ ನೀಡಿದಳು' ಎಂದಿದ್ದರು ಮುನ್ನಬಾಯಿ.
ನಾನು ನನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದೆ ಮತ್ತು ಅವಳಿಗೆ ತುಂಬಾ ಹತ್ತಿರವಾಗಿದ್ದೆ. ಅವಳ ಮರಣದ ನಂತರ, ಏಕಾಂಗಿಯಾಗಿದೆ ಮತ್ತು ಆ ಸಮಯದಲ್ಲಿ ಟೀನಾ ತನ್ನ ತಾಯಿಯ ಸ್ಥಾನ ತುಂಬಿದಳು.ಟೀನಾ ನನ್ನ ತಾಯಿಯಂತೆಯೇ ನನ್ನ ಮೇಲೆ ಒತ್ತಡವನ್ನೂ ಹೇರುತ್ತಿದ್ದಳು, ಎಂದಿದ್ದರು ಖಳ್ ನಾಯಕ್ ಖ್ಯಾತಿಯ ಸಂಜಯ್ ದತ್.
ನನ್ನ ವೃತ್ತಿ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕನ್ನು ನಾನು ಟೀನಾಕ್ಕೆ ಎಂದಿಗೂ ನೀಡಿರಲಿಲ್ಲ, ಹಾಗೂ ಟೀನಾ ಸಹ ಯಾವುದೇ ನಟಿ ಅಥವಾ ಯಾವುದೇ ನಿರ್ದೇಶಕರೊಂದಿಗೆ ಕೆಲಸ ಮಾಡಲು ನಿರಾಕರಿಸಲಿಲ್ಲ ಎಂದಿದ್ದಾರೆ ಸಂಜು.
ಇವರಿಬ್ಬರ ನಡುವೆ ಉತ್ತಮ ಸಂಬಂಧವಿದ್ದರೂ, ಮಾದಕ ವ್ಯಸನಿಯಾಗಿದ್ದರಿಂದ ಸಂಜಯ್‌ನಿಂದ ಟೀನಾ ದೂರವಾದರು ಎನ್ನಲಾಗಿದೆ. ಡ್ರಗ್ಸ್‌ ಕಾರಣದಿಂದ ಸಂಜಯ್ ಕುಟುಂಬವೂ ಚಿಂತೆಗೀಡಾಗಿತ್ತು. ಆಮೇಲೆ ಚಿಕಿತ್ಸೆಗಾಗಿ ನಟನನ್ನು ಯುಎಸ್‌ಗೆ ಕಳುಹಿಸಲಾಯಿತು.
ಸಂಜಯ್‌ನಿಂದ ಬೇರ್ಪಟ್ಟ ನಂತರ ಟೀನಾ ರಾಜೇಶ್ ಖನ್ನಾ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಳು. ಆದರೆ ಈ ಸಂಬಂಧವೂ ಹೆಚ್ಚು ದಿನ ಉಳಿಯಲಿಲ್ಲ.
ಅಂತಿಮವಾಗಿ ಟೀನಾ ರಿಲಯನ್ಸ್ ಉದ್ಯಮದ ಅನಿಲ್ ಅಂಬಾನಿಯನ್ನು ಮದುವೆಯಾಗಿ, ಪ್ರಸಿಷ್ಠಿತ ಅಂಬಾನಿ ಕುಟುಂಬದ ಸೊಸೆಯಾದರು.
ನಂತರ ಸಂಜಯ್ ಲೈಫ್‌ನಲ್ಲಿ ಮೂರು ಬಾರಿ ಮದುವೆಯಾದರು. ಮೊದಲ ಹೆಂಡತಿ ರಿಚಾ ಶರ್ಮಾ ಕ್ಯಾನ್ಸರ್‌ನಿಂದ ಮೃತಪಟ್ಟರು. ನಂತರ ಮದುವೆಯಾದ ರಿಯಾ ಪಿಳ್ಳೈಯಿಂದ ಬೇರೆಯಾದ ನಂತರ, ಮಾನ್ಯತಾಳನ್ನು ವಿವಾಹವಾದರು. ಈಗ ಸಂಜಯ್ ಮತ್ತು ಮಾನ್ಯತಾರಿಗೆ ಅವಳಿ ಮಕ್ಕಳಿದ್ದಾರೆ.

Latest Videos

click me!