ನಿಕ್ ಭಾರತದ ಹುಡಗೀನ ಮದ್ವೆಯಾಗ್ಬಾರ್ದಿತ್ತು: ಪಿಗ್ಗಿ ವಿರುದ್ಧ ಪಾಕಿಗಳ ವಾಗ್ದಾಳಿ

First Published | Aug 18, 2020, 2:56 PM IST

ಅಂತಾರಾಷ್ಟ್ರೀಯ ಪಾಕ್ ಸಿಂಗರ್ ಭಾರತದಿಂದ ಮದುವೆಯಾಗಬಾರದಿತ್ತು ಎಂಬುದು ಪಾಕಿಗಳ ನಿಲುವು. ನಿಕ್ ಜೋನಸ್ ಪ್ರಿಯಾಂಕ ಷೋಪ್ರಾಳನ್ನು ಮದುವೆಯಾದಾಗ ಪಾಕಿಗಳು ಪಿಗ್ಗಿ ವಿರುದ್ದ ವಾಗ್ದಾಳಿ ನಡೆಸಿದ್ದರು.

ಅಂತಾರಾಷ್ಟ್ರೀಯ ಪಾಕ್ ಸಿಂಗರ್ ಭಾರತದಿಂದ ಮದುವೆಯಾಗಬಾರದಿತ್ತು ಎಂಬುದು ಪಾಕಿಗಳ ನಿಲುವು. ನಿಕ್ ಜೋನಸ್ ಪ್ರಿಯಾಂಕ ಷೋಪ್ರಾಳನ್ನು ಮದುವೆಯಾದಾಗ ಪಾಕಿಗಳು ಪಿಗ್ಗಿ ವಿರುದ್ದ ವಾಗ್ದಾಳಿನಡೆಸಿದ್ದರು.
ಪ್ರಿಯಾಂಕ ಹಾಗೂ ನಿಕ್ ವಿವಾಹಿತರಾದಾಗ ಪಾಕಿಸ್ತಾನಿಗರು ಇಂಟರ್‌ನೆಟ್‌ನಲ್ಲಿ ಕೆಟ್ಟದಾಗಿ ಕಮೆಂಟ್ ಹಾಕಿದ್ದರು.
Tap to resize

ಪಾಕಿಸ್ತಾನಿ ನಟಿ ಮೇವಿಶ್ ಹಾಯತ್ ನಿಕ್ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾ ಶೇರ್ ಮಾಡಿದ್ದರು. ಅವರಿಬ್ಬರನ್ನೂ ಒಂದೇ ಫ್ರೇಮ್‌ನಲ್ಲಿ ನೋಡೋಕೆ ಪಾಕಿಸ್ತಾನಿಗಳು ಕಾತುರರಾಗಿದ್ದರು.
ಈ ಫೋಟೋ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮೆನ್ಸ್ ಸೆಮಿ ಫೈನಲ್ ಮ್ಯಾಚ್ ವೀಕ್ಷಿಸಲು ಹೋದಾಗ ತೆಗೆದಿದ್ದರು.
ಮೆನ್ಸ್ ಸೆಮಿ ಫೈನಲ್ ಮ್ಯಾಚ್ ನೋಡಲು ನಾನ್ಯಾರ ಜೊತೆ ಬಂದಿದ್ದೇನೆ ನೋಡಿ ಎಂದು ಕ್ಯಾಪ್ಶನ್ ಕೊಟ್ಟು ನಿಕ್ ಜೋನಸ್‌ನನ್ನು ಟ್ಯಾಗ್ ಮಾಡಿದ್ದಳು
ಈ ಫೋಟೋಗೆ ಕೆಟ್ಟದಾಗಿ ಕಮೆಂಟ್ ಮಾಡಿದ ನೆಟ್ಟಿಗರು ನಿಕ್ ತಪ್ಪಾದ ದೇಶದಿಂದ ಮದುವೆಯಾಗಿದ್ದಾನೆ ಎಂದಿದ್ದಾರೆ.
ಮೇವಿಶ್ ಹಾಯತ್ ಮೊದಲನಿಂದಲೂ ಪಿಗ್ಗಿಯನ್ನು ಇಷ್ಟ ಪಡುವುದಿಲ್ಲ. ಪ್ರಿಯಾಂಖ ಪಾಕ್ ವಿರುದ್ಧ ಅಣುಯುದ್ಧ ಮಾಡಲು ಪ್ರೇರೇಪಿಸುತ್ತಾಳೆ ಎಂದು ಮೇವಿಶ್ ಆರೋಪಿಸಿದ್ದಳು.
ಬಾಲ್‌ಕೋಟ್‌ನಲ್ಲಿ ಜೈಷ್ ಇ ಮೊಹಮ್ಮದ್ ಉಗ್ರರ ಶಿಬಿರವನ್ನು ವಾಯುಸೇನೆ ಹೊಡೆದುರುಳಿಸಿದಾಗ ಪ್ರಿಯಾಂಕ ಜೈ ಹಿಂದ್ ಎಂದು ಟ್ವಿಟ್ ಮಾಡಿದ್ದರು.
ಮೇವಿಶ್ ಪ್ರಿಯಾಂಕಳನ್ನು ಟೀಕಿಸುತ್ತಾ ಹಿಂದಿ ಸಿನಿಮಾಗಳಲ್ಲಿ ಪಾಕಿಸ್ತಾನವನ್ನು ಕೆಟ್ಟದಾಗಿ ಚಿತ್ರಿಸಿದ್ದೀರಿ ಎಂದು ಆರೋಪಿಸುತ್ತಲೇ ಇರುತ್ತಾಳೆ.

Latest Videos

click me!