ಸೈಫ್ ಮತ್ತು ಅಮೃತಾ ಪುತ್ರಿ ಸಾರಾ ಅಲಿ ಖಾನ್ ಕರೀನಾ ಜೊತೆ ಉತ್ತಮ ಬಾಂಡಿಂಗ್ ಹೊಂದಿದ್ದಾರೆ.
ಕರೀನಾ ಮತ್ತು ಸಾರಾರ ಸಂಬಂಧದ ಬಗ್ಗೆ ಯಾವಾಗಲೂ ಸುದ್ದಿಯಾಗುತ್ತಿರುತ್ತದೆ. ಹಾಗೆಯೇ ಇವರಿಬ್ಬರ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಲಿವುಡ್ ನಟ ಸೈಫ್ ಆಲಿ ಖಾನ್ ಕರೀನಾಳನ್ನು ಮದುವೆಯಾಗುವ ಮೊದಲು ನಟಿ ಅಮೃತಾ ಸಿಂಗ್ ಜೊತೆ 13 ವರ್ಷ ಜೀವನ ನೆಡೆಸಿದ್ದಾರೆ. ನಟನ ಮಾಜಿ ಮತ್ತು ಹಾಲಿ ಪತ್ನಿಯರ ಸಂಬಂಧ ಹೇಗಿದೆ ಗೊತ್ತಾ?
ಕರಣ್ ಜೋಹರ್ ಚಾಟ್ ಶೋನಲ್ಲಿ ಪತಿ ಸೈಫ್‌ರ ಮಾಜಿ ಪತ್ನಿ ಅಮೃತಾ ಸಿಂಗ್ ಜೊತೆ ಸಂಬಂಧದ ಬಗ್ಗೆ ಕರೀನಾ ಬಹಿರಂಗವಾಗಿ ಮಾತನಾಡಿದರು.
ಅಮೃತಾ ಸಿಂಗ್ ಅವರೊಂದಿಗಿನ ಸಂಬಂಧದ ಬಗ್ಗೆ ಕರೀನಾಗೆ ಕೇಳಿದಾಗ, 'ಸೈಫ್ ಅವರನ್ನು ಮದುವೆಯಾದ ನಂತರ ನಾನು ಇನ್ನೂ ಅಮೃತಾಳನ್ನು ಭೇಟಿ ಮಾಡಿಲ್ಲ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ' ಎಂದು ಹೇಳಿದ್ದರು.
'ಕಭಿ ಖುಷಿ ಕಭಿ ಘಮ್ ಚಿತ್ರದ ಸಮಯದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಆಗ ಅಮೃತಾ ನನ್ನನ್ನು ಭೇಟಿಯಾಗಲು ಸಾರಾಳನ್ನು ಕರೆತಂದಿದ್ದರು. ನಾನು ಸೈಫ್ ಭೇಟಿಯಾಗುವ ಬಹಳ ಹಿಂದೆಯೇ ಅಮೃತಾರಿಂದ ಬೇರ್ಪಟ್ಟಿದ್ದರು. ನಂತರ ನಾನು ಎಂದಿಗೂ ಅಮೃತಾರನ್ನು ಭೇಟಿಯಾಗಿಲ್ಲ ಎಂದು ಕರೀನಾ ಹೇಳಿದ್ದರು.
ಅಮೃತಾ ನನ್ನ ಗಂಡನ ಇಬ್ಬರು ಮಕ್ಕಳನ್ನು ಬೆಳೆಸಿದ್ದಾರೆ ಮತ್ತು ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ನಾನು ಮತ್ತು ಸೈಫ್ ಸಂಬಂಧದಲ್ಲಿದ್ದಾಗ, ಮಕ್ಕಳು ನನ್ನ ಜೀವನದ ಭಾಗವೆಂದು ಸೈಫ್ ಹೇಳಿದ್ದರು. ಸಾರಾ-ಇಬ್ರಾಹಿಂ ಕೂಡ ನನಗೆ ತುಂಬಾ ಆಪ್ತರಾಗಿದ್ದಾರೆ' ಎಂದು ಹೇಳಿದ್ದ ಬೇಬೊ.
ಸೈಫ್ ಕರೀನಾಳನ್ನು ಮದುವೆಯಾಗುವ ಮೊದಲು ಅಮೃತಾ ಸಿಂಗ್ 1991 ರಲ್ಲಿ ವಿವಾಹವಾದರು ಮತ್ತು 2004 ರಲ್ಲಿ ವಿಚ್ಛೇದನ ಪಡೆದಿದ್ದರು.
ಸೈಫ್ ಮತ್ತು ಕರೀನಾ ಅವರ ಮದುವೆಯ ನಂತರ ಅವರ ನಡುವೆ ಯಾವುದೇ ಜಗಳವಾಗಿಲ್ಲ ಅಥವಾ ಜಗಳದ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.
ಲಾಲ್ ಸಿಂಗ್ ಚಾಧಾ ಚಿತ್ರದ ಶೂಟಿಂಗ್ ದೆಹಲಿಯಲ್ಲಿ ನಡೆಯುತ್ತಿದ್ದು, ಪತಿ ಸೈಫ್ ಅಲಿ ಖಾನ್ ಮತ್ತು ಮಗ ತೈಮೂರ್ ಜೊತೆ ಈ ದಿನಗಳಲ್ಲಿ ಕರೀನಾ ಪಟೌಡಿ ಅರಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.
ಕರೀನಾ 5 ತಿಂಗಳು ಗರ್ಭಿಣಿಯಾಗಿದ್ದು ಫೆಬ್ರವರಿ-ಮಾರ್ಚ್‌ನಲ್ಲಿ ಕರೀನಾರ ಎರಡನೇ ಮಗು ಹಾಗೂ ಸೈಫ್ ಅವರ ನಾಲ್ಕನೇ ಮಗು ಬರಲಿದೆ.