ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಕಳೆದ ವರ್ಷ ತಮ್ಮ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ಸಾರ್ವಜನಿಕವಾಗಿ ಕೈ-ಕೈ ಹಿಡಿದು ನೆಡೆಯುವ ಮೂಲಕ ನಡೆಯುವ ಮೂಲಕ ತಮ್ಮ ಸಂಬಂಧವನ್ನು ಸಾರ್ವಜನಿಕಗೊಳಿಸಿದರು.
ಅವರ ಅಭಿಮಾನಿಗಳು ಈ ಜೋಡಿ ಯಾವಾಗ ಹಸೆಮಣೆ ಏರಲಿದೆ ಎಂದು ಕಾಯುತ್ತಿದ್ದಾರೆ.
ಮಲೈಕಾ ಆರೋರಾ ಜೊತೆ ಡೇಟಿಂಗ್ ಮಾಡುವ ಮೊದಲು ಅರ್ಜುನ್ ಕಪೂರ್ ಹೆಸರು ಅನೇಕ ನಟಿಯರೊಂದಿಗೆ ಕೇಳಿಬಂದಿತ್ತು.
ಪರಿಣಿತಿ ಚೋಪ್ರಾ ರಿಂದ ಹಿಡಿದು ಸೋನಾಕ್ಷಿ ಸಿನ್ಹಾ, ಅನುಷ್ಕಾ ಶರ್ಮಾ ಮತ್ತು ಅಥಿಯಾ ಶೆಟ್ಟಿ ಹೀಗೆ ಹಲವರು.
ಪರಿಣಿತಿ ಮತ್ತು ಅರ್ಜುನ್ ನಾವು ಒಳ್ಳೆಯ ಸ್ನೇಹಿತರು ಮಾತ್ರ ಏನೂ ಇಲ್ಲ ಎಂದು ಬಹಿರಂಗವಾಗಿ ಸ್ಪಷ್ಟಪಡಿಸಿದರು.
ಆದರೆ, ಅಥಿಯಾ ಮತ್ತು ಅರ್ಜುನ್ ಸಂಬಂಧ ಸ್ನೇಹಕ್ಕಿಂತ ಹೆಚ್ಚು ಎಂದು ಮೂಲಗಳು ಹೇಳುತ್ತವೆ.
ಮಲೈಕಾ ಅರ್ಜುನ್ ಜೀವನದಲ್ಲಿ ಪ್ರವೇಶಿಸಿದಾಗಿನಿಂದ, ಅಥಿಯಾ ಮತ್ತು ಅರ್ಜುನ್ ನಡುವೆ ಅಷ್ಟೊಂದು ಉತ್ತಮವಾಗಿಲ್ಲ.
'ಮುಬಾರಕನ್' ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಹತ್ತಿರ ವಾಗಿದ್ದರು. ಆದರೆ ಮಲೈಕಾ ಮತ್ತು ಅರ್ಜುನ್ ಅವರ ಬಂಧವು ಹೆಚ್ಚು ದೃಢವಾಗುತ್ತಿದ್ದಂತೆ, ಅಥಿಯಾ ಅವರನ್ನು ಹೊರಹಾಕಲಾಯಿತು ಎಂದು TOI ಯ ವರದಿ ಹೇಳುತ್ತದೆ.
ನಟನ ಮನೆಯಲ್ಲಿ ಅಥಿಯಾ ಮತ್ತು ಅರ್ಜುನ್ ನಡುವೆಯ ವಾದಗಳ ನಂತರ ಇಬ್ಬರೂ ಪರಸ್ಪರ ಮಾತನಾಡುವುದನ್ನು ನಿಲ್ಲಿಸಿದರು. ಮತ್ತು ಮಲೈಕಾ ಮತ್ತು ಅರ್ಜುನ್ ಹತ್ತಿರವಾಗಲು ಪ್ರಾರಂಭಿಸಿದಾಗ, ಅಥಿಯಾ ಹೆಚ್ಚು ಹೆಚ್ಚು ದೂರವಾದರು ಎಂದು TOI ವರದಿಯಲ್ಲಿ ಉಲ್ಲೇಖಿಸಲಾಗಿದೆ,
'ಇದುವರೆಗಿನ ನನ್ನ ಮೊದಲ ಮತ್ತು ಏಕೈಕ ಗಂಭೀರ ಸಂಬಂಧ ಅರ್ಪಿತಾ ಖಾನ್ ಅವರೊಂದಿಗೆ. ನಾನು 18 ವರ್ಷದವನಿದ್ದಾಗ ನಾವು ಡೇಟ್ ಮಾಡಲು ಪ್ರಾರಂಬಿಸಿದ್ದೇವು ಮತ್ತು ಅದು ಎರಡು ವರ್ಷಗಳ ಕಾಲ ನಡೆಯಿತು. ನಾನು ಆಗಲೇ ಸಲ್ಮಾನ್ ಭಾಯ್ ಜೊತೆ ಕ್ಲೋಸ್ ಇದೆ. ಆದರೆ 'ಮೈನೆ ಪ್ಯಾರ್ ಕ್ಯುನ್ ಕಿಯಾ' ಚಿತ್ರೀಕರಣದ ಸಮಯದಲ್ಲಿ ನಮ್ಮ ಸಂಬಂಧ ಪ್ರಾರಂಭವಾಯಿತು' ಎಂದು ಅರ್ಪಿತಾ ಜೊತೆ ಸಂಬಂಧದ ಬಗ್ಗೆ ಮಾತನಾಡುತ್ತಾ, ಅರ್ಜುನ್ ಒಮ್ಮೆ ಹೇಳಿದ್ದರು.
'ನಾನು ಸಲ್ಮಾನ್ ಭಾಯ್‌ಗೆ ಹೆದರುತ್ತಿದ್ದೆ ಮತ್ತು ನಾನು ಹೋಗಿ ಅವರಿಗೆ ಹೇಳಿದೆ ಮತ್ತು ಇಡೀ ಕುಟುಂಬ ಮೊದಲು ನನ್ನಿಂದ ತಿಳಿದುಕೊಳ್ಳಬೇಕೆಂದು ನಾನು ಬಯಸಿದ್ದೆ . ಅದರ ಬಗ್ಗೆ ತುಂಬಾ ಕೈಂಡ್ ಆಗಿದ್ದರು. ಅವರಿಗೆ ಶಾಕ್ ಆಯಿತು, ಆದರೆ ಅವರು ಜನರು ಮತ್ತು ಸಂಬಂಧಗಳನ್ನು ಗೌರವಿಸುತ್ತಾರೆ. ವಾಸ್ತವವಾಗಿ, ಆ ಸಂಬಂಧದಲ್ಲಿ ಅವರು ಯಾವಾಗಲೂ ನನ್ನ ಪರವಾಗಿದ್ದರು' ಎಂದು ಅರ್ಜುನ್ ಕಪೂರ್ ಹೇಳಿದರು.