ಬಾಲಿವುಡ್ ವಿರುದ್ಧ ಡ್ರಗ್ಸ್ ಆರೋಪ ಚರ್ಚೆ ಹೆಚ್ಚಾಗುತ್ತಿರುವುದರ ಮಧ್ಯೆ ನಟಿ ಜಯಾ ಬಚ್ಚನ್ ಹೇಳಿಕೆಗೆ ಒಂದಷ್ಟು ಜನ ಬೆಂಬಲಿಸಿದ್ರೆ, ಬಹಳಷ್ಟು ಜನ ವಿರೋಧ ವ್ಯಕ್ತಪಡಿಸಿದ್ದಾರೆ.
ಮಗನ ಸಿನಿಮಾ ಟೀಕಿಸಿದ ನಟಿ: ಫರಾಹ್ ಖಾನ್ ಅವರ ಹ್ಯಾಪಿ ನ್ಯೂ ಇಯರ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಇದರಲ್ಲಿ ಕೀ ರೋಲ್ ಮಾಡಿದ್ದು, ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್.
ಜಯಾ ಬಚ್ಚನ್ ಹತ್ರ ಸಿನಿಮಾ ಹೇಗಿದೆ ಎಂದು ಕೇಳಿದಾಗ ನಾನ್‌ಸೆನ್ಸ್ ಫಿಲ್ಮ್ ಅಂದಿದ್ರು ನಟಿ. ಅಭಿಷೇಕ್ ಅಲ್ಲದೆ ಶಾರೂಖ್, ದೀಪಿಕಾ ಕೂಡಾ ನಟಿಸಿದ್ರು ಈ ಸಿನಿಮಾದಲ್ಲಿ.
ಶರೂಖ್‌ಗೆ ಹೊಡೆಯಬೇಕೆನಿಸಿತ್ತು: ಕತ್ರೀನಾ ಕೈಫ್ ಬರ್ತ್‌ಡೇ ಪಾರ್ಟಿಯಲ್ಲಿ ನಟ ಶಾರೂಖ್ ಖಾನ್ ಜಯಾ ಬಚ್ಚನ್ ಸೊಸೆ ಐಶ್ವರ್ಯಾ ರೈ ವಿರುದ್ಧ ಕಮೆಂಟ್ ಮಾಡಿದ್ರು. ಇದರ ಬಗ್ಗೆ ಮಾತಾಡೋಕೆ, ಶಾರೂಖ್ ಜೊತೆ ಚರ್ಚಿಸೋಕೆ ಅವಕಾಶ ಸಿಗಲಿಲ್ಲ ಎಂದಿದ್ದರು ಜಯಾ ಬಚ್ಚನ್.
ನನ್ನ ಮನೆಯಲ್ಲಿದ್ದಿದ್ದರೆ ಖಂಡಿತಾ ನನ್ನ ಮಗನಿಗೆ ಹೊಡೆದಂತೆ ಅವನಿಗೆ ಹೊಡೆಯುತ್ತಿದ್ದೆ ಎಂದಿದ್ದರು. ಸಿನಿಮಾ ಹೊರತುಪಡಿಸಿ ಶಾರೂಖ್ ಹಾಗೂ ಜಯಾ ಬಚ್ಚನ್ ಸಂಬಂಧ ಅತ್ಯಂತ ಕ್ಲೋಸ್ ಇರೋದ್ರಿಂದ ಇದು ನಂತರ ಹೆಚ್ಚು ದಿನ ಉಳಿಯಲಿಲ್ಲ.
ಅಮಿತಾಭ್-ರೇಖಾ ರಿಲೇಷನ್: ಆಗ ವರದಿಗಳು ರೇಖಾ ಮತ್ತು ಅಮಿತಾಭ್ ಸಂಬಂಧವನ್ನು ಸಿಕ್ಕಾಪಟ್ಟೆಯಾಗಿ ವರದಿ ಮಾಡುತ್ತಿದ್ದ ಸಮಯ.
ಆ ವರದಿ, ಗಾಸಿಪ್‌ಗಳಿಗೆ ಪ್ರತಿಕ್ರಿಯಿಸಿದ ಜಯಾ ಬಚ್ಚನ್, ಇದು ಬರೀ ಚೀಪ್. ನಾನು ಈ ಬಗ್ಗೆ ಪತಿಯನ್ನು ಕ್ವಶ್ಚನ್ ಮಾಡಲ್ಲ. ನಾನು ಮಾಧ್ಯಮಗಳ ಮುಂದೆ ಮಾತನಾಡುತ್ತಿರುವುದೇಕೆಂದರೆ ನನ್ನ ಮಗ, ಮಗಳು ಬೆಳೆಯುತ್ತಿದ್ದಾರೆ ಎಂದಿದ್ರು
ಬಿಗ್ ಬಿ ಕಂಡ್ರೆ ಭಯ: ಮೊದಲ ಭೇಟಿಯ ಸಂದರ್ಭ ನಿಜಕ್ಕೂ ಅಮಿತಾಭ್ ಅಂದ್ರೆ ತುಂಬಾ ಹೆದರಿಕೊಂಡಿದ್ರಂತೆ ನಟಿ ಜಯಾ ಬಚ್ಚನ್. ಇದನ್ನೂ ಅವರು ಮುಕ್ತವಾಗಿ ಹೇಳಿಕೊಂಡಿದ್ದರು.
ಹಿಂದಿ ಭಾಷೆ ಕುರಿತ ನಿಲುವು: ಡ್ರೋಣ ಸಿನಿಮಾ ಮ್ಯೂಸಿಕ್ ಭೋಜನ ಕೂಟದಲ್ಲಿ ನಾನು ಹಿಂದಿಯಲ್ಲಿ ಮಾತಾಡ್ತೀನಿ, ನಾನು ಉತ್ತರಪ್ರದೇಶದವಳು ಎಂದಿದ್ದರು. ಆದರೆ ನಂತರ ಅರಿವಿಲ್ಲದೆ ಹೇಳಿದೆ ಎಂದು ಕ್ಷಮೆ ಕೇಳಿದ್ದರು.ನಂತರ ತನಗೆ ಎಲ್ಲವನ್ನೂ ನೀಡಿದ ನಗರದ ಬಗ್ಗೆ ಕೆಟ್ಟದಾಗಿ ಮಾತಾಡಲ್ಲ. ಕೊನೆ ಉಸಿರಿನ ತನಕ ಮುಂಬೈಗೆ ಅಗೌರವ ತೋರಿಸಲ್ಲ ಎಂದಿದ್ದರು.