ಮಂಗಳಸೂತ್ರ ಧರಿಸಿದ ರೇಖಾ: ಡಿನ್ನರ್‌ಗೆ ಮನೆಗೆ ಕರೆದು ಜಯಾ ಬಚ್ಚನ್ ಹೀಗನ್ನಬಾರದಿತ್ತು

First Published | Jan 21, 2021, 4:02 PM IST

ಬಾಲಿವುಡ್‌ನ ಅತ್ಯಂತ ಕಂಟ್ರವರ್ಶಿಯಲ್‌ ಲವ್‌ಸ್ಟೋರಿ ಅಂದರೆ ನಟಿ ರೇಖಾ ಹಾಗೂ ಅಮಿತಾಬ್‌ ಬಚ್ಚನ್‌ರದು. ಹಲವು ದಶಕಗಳ ನಂತರವೂ ಈ ವಿಷಯ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಆ ದಿನಗಳಲ್ಲಿ ಅಮಿತಾಭ್ ಮತ್ತು ರೇಖಾ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಖತ್‌ ಸದ್ದು ಮಾಡಿತು. ಅವರ ಮ್ಯಾರೀಡ್‌ ಲುಕ್‌ ನೋಡಿ ರೇಖಾರನ್ನು ಡಿನ್ನರ್‌ಗೆ ಆಹ್ವಾನಿಸಿ ಜಯಬಚ್ಚನ್‌ ಏನು ಹೇಳಿದ್ದರು ಗೊತ್ತಾ?

ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ ಅನೇಕ ಅಭಿಮಾನಿಗಳು ಮತ್ತು ಬಾಯ್‌ಫ್ರೆಂಡ್ ಹೊಂದಿದ್ದರು. ಹಲವು ದಶಕಗಳಿಂದ ಬಾಲಿವುಡ್‌ನ ತನ್ನದೇ ಆದ ಛಾಫು ಮೂಡಿಸಿರುವ ನಟಿ ಇವರು.
ಇಂದಿಗೂ ಹಿರಿಯರಿಂದ ಯುವಕರವರೆಗೆ ಎಲ್ಲಾ ಜನೆರೇಶನ್‌ನ ಫ್ಯಾನ್ಸ್‌ ಹೊಂದಿದ್ದಾರೆ. ಆದರೆ ನೀಜ ಜೀವನದಲ್ಲಿ ರೇಖಾಗೆ ನಿಜವಾದ ಪ್ರೀತಿಯ ದಕ್ಕಲಿಲ್ಲ. ಅವರು ಯಾವಾಗಲೂ ಏಕಾಂಗಿಯಾಗಿ ಕಳೆದರು.
Tap to resize

ರೇಖಾರ ವೈಯಕ್ತಿಕ ಜೀವನ ಯಾವಾಗಲೂ ಉಹಾಪೋಹಗಳಿಂದ ಕೂಡಿದೆ. ಮುಖ್ಯವಾಗಿ ಅಮಿತಾಬ್ ಬಚ್ಚನ್, ವಿನೋದ್ ಮೆಹ್ರಾ ಮತ್ತು ಇತರರೊಂದಿಗಿನ ಸಂಬಂಧದಿಂದಾಗಿ ಅವರ ಜೀವನದ ಸುತ್ತ ಒಂದು ರಹಸ್ಯವಿದೆ.
‘ದೋ ಅಂಜಾನೆ’ ಸಹನಟ ಅಮಿತಾಬ್ ಬಚ್ಚನ್ ಅವರನ್ನು ಸೆಟ್‌ಗಳಲ್ಲಿ ಪ್ರೀತಿಸಿದರು ಮತ್ತು ಅದು ರೇಖಾರ ಜೀವನದ ಸಾರ್ವಕಾಲಿಕ ವಿವಾದಾತ್ಮಕ ವಿಷಯವಾಗಿದೆ.
ದೋ ಅಂಜಾನೆ ಸೆಟ್‌ನಲ್ಲಿ ರೋಮ್ಯಾನ್ಸ್‌ ಪ್ರಾರಂಭವಾಯಿತು ಮತ್ತು ಅವರು ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಗಳು ಹೇಳುತ್ತವೆ. ಆದರೆ ಅಮಿತಾಬ್ ಈಗಾಗಲೇ ಜಯಾರನ್ನು ಮದುವೆಯಾಗಿದ್ದರು.
ಚಿತ್ರದ ಸೆಟ್‌ಗಳಲ್ಲಿ ಅರಳಿದ ಪ್ರೀತಿ ಮತ್ತು ರೂಮರ್‌ಗಳು ಎಲ್ಲೆಡೆ ಹರಡಲು ಪ್ರಾರಂಭಿಸಿದವು.
ತಮ್ಮ ರಹಸ್ಯ ಸಂಬಂಧದ ಆರಂಭಿಕ ದಿನಗಳಲ್ಲಿ, ರೇಖಾ ಅವರ ಸ್ನೇಹಿತರಿಗೆ ಸೇರಿದ ಬಂಗಲೆಯಲ್ಲಿ ಭೇಟಿಯಾಗುತ್ತಿದ್ದರು ಈ ಕಪಲ್‌ಒಮ್ಮೆ ಗಂಗಾ ಕಿ ಸೌಗಂಧ್ (1978) ಚಿತ್ರೀಕರಣದ ಸಮಯದಲ್ಲಿ, ರೇಖಾರಜೊತೆ ಮಿಸ್‌ ಬೀಹೇವ್‌ ಮಾಡಿದ ಸಹನಟನೊಬ್ಬನ ಮೇಲೆ ಬಿಗ್‌ಬಿ ಕೋಪಗೊಂಡರು. ಅದರನಂತರ ರೇಖಾ ಜೊತೆಗಿನ ಅವರ ರಿಲೆಷನ್‌ಶಿಪ್‌ ಮತ್ತು ಪ್ರೀತಿ ಓಪನ್‌ ಸಿಕ್ರೇಟ್‌ ಆಯಿತು.
ನೀತೂ ಸಿಂಗ್ ಮತ್ತು ರಿಷಿ ಕಪೂರ್ ಅವರ ಮದುವೆಯಲ್ಲಿ ಸಿಂಧೂರ್ ಮತ್ತು ಮಂಗಳಸೂತ್ರ ಧರಿಸಿ ನಟಿ ಕಾಣಿಸಿಕೊಂಡಾಗ ಅಮಿತಾಭ್ ಮತ್ತು ರೇಖಾ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಖತ್‌ ಸದ್ದು ಮಾಡಿತು.
ಅವರ ಮ್ಯಾರೀಡ್‌ ಲುಕ್‌ ಬಿ ಟೌನ್‌ನ ಚರ್ಚೆಯ ವಿಷಯವಾಯಿತು. ಜಯಾ ದೀರ್ಘಕಾಲದವರೆಗೆ ಧೈರ್ಯವಾಗಿರಲು ಪ್ರಯತ್ನಿಸಿದರು, ಆದರೆ ಅಂತಿಮವಾಗಿ ಅವರುತಲೆಯನ್ನು ತಗ್ಗಿಸಿ ಕಣ್ಣೀರು ಸುರಿಸಬೇಕಾಯಿತು ಎಂದುವರದಿಗಳು ಹೇಳಿದವು.
ನಂತರ, ಜಯಾ ರೇಖಾರನ್ನು ತನ್ನ ಮನೆಗೆ ಡಿನ್ನರ್‌ಗೆ ಆಹ್ವಾನಿಸಿದರು ಮತ್ತು ತಾನು ಎಂದಿಗೂ ತನ್ನ ಗಂಡನನ್ನು ಬಿಡುವುದಿಲ್ಲ ಎಂದು ಹೇಳಿದರು.
ಅವರ ರಿಲೆಷನ್‌ಶಿಪ್‌ ಬಗ್ಗೆ ಅಮಿತಾಬ್‌ರ ನಿರಾಕರಣೆ ಬಗ್ಗೆ ರೇಖಾರನ್ನು ಕೇಳಿದಾಗ, ಅವನು ತನ್ನ ಕುಟುಂಬಕ್ಕಾಗಿ ಮಾಡಿದನು ಮತ್ತು ಅವನು ಒಬ್ಬ ಫ್ಯಾಮಿಲಿ ಮ್ಯಾನ್‌ ಮತ್ತು ಅವನು ಅವರನ್ನು ಎಂದಿಗೂ ಬಿಡುವುದಿಲ್ಲ. ನಾನು ಅವನನ್ನು ಪ್ರೀತಿಸುತ್ತೇನೆ ಅವನು ನನ್ನನ್ನು ಪ್ರೀತಿಸುತ್ತಾನೆ ಅಷ್ಟೆ ' ಎಂದು ಹೇಳಿದ್ದರು.
'ಮಿ. ಬಚ್ಚನ್ ಇನ್ನೂ ಹಳೆಯ ಕಾಲದವನು. ಅವನು ಯಾರನ್ನೂ ನೋಯಿಸಲು ಬಯಸುವುದಿಲ್ಲ, ಹಾಗಾದರೆ ಅವನ ಹೆಂಡತಿಯನ್ನು ಏಕೆ ನೋಯಿಸಬೇಕು? ' ಎಂದು ರೇಖಾ ಹೇಳಿದ್ದರು.
ಇವರಿಬ್ಬರು ಕಳೆದ ಬಾರಿ ಸಿಲ್ಸಿಲಾದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ಸಿನಿಮಾ ಅವರ ರಿಯಲ್‌ ಲವ್‌ಸ್ಟೋರಿಯನ್ನುಆಧರಿಸಿದೆ ಎಂದು ವರದಿಯಾಗಿದೆ.

Latest Videos

click me!