90ರ ದಶಕದ ಖ್ಯಾತ ನಟಿ ಕಮಲ್ ಹಾಸನ್ ಮಾಜಿ ಪತ್ನಿ ಸಾರಿಕಾ ಮುಂಬೈನ ಜುಹುನಲ್ಲಿರುವ ತಮ್ಮ ಆಸ್ತಿಗಾಗಿ ಹೋರಾಡುತ್ತಿದ್ದಾರೆ. ಮನೆಯಿಲ್ಲದೇ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ.
ಆಕೆಯ ತಾಯಿ ಕಮಲ್ ಠಾಕೂರ್ ಸಾವಿನ ನಂತರ ಸಾರಿಕಾಗೆ ಇರಲು ಮನೆಯಿಲ್ಲ.
ಕಮಲ್ ಠಾಕೂರ್ ಮರಣದ ನಂತರ ಸಾರಿಕಾಳ ಫ್ಲಾಟ್‌ನ ಕಾನೂನು ವ್ಯಾಜ್ಯ ನಡೆಯುತ್ತಿದೆ.ಅವರ ತಾಯಿವಿಲ್‌ನಲ್ಲಿ ಫ್ಲಾಟ್ ಅನ್ನು ಡಾ. ವಿಕಾಸ್ ಠಕ್ಕರ್ ಅವರಿಗೆ ಬರೆದಿದ್ದಾರೆ.
ಈಗ, ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಈ ಸಮಸ್ಯೆಯನ್ನು ಪರಿಹರಿಸಲು ಸಾರಿಕಾಗೆ ಸಹಾಯ ಮಾಡಲಿದ್ದಾರೆ.
ಕಮಲ್ ಅವರು ಸಾರಿಕಾರ ಸಂಪಾದನೆಯಿಂದ ಖರೀದಿಸಿದ ಫ್ಲ್ಯಾಟ್ ಇದು. ಆಕೆಯ ತಾಯಿ ಪವರ್ ಅಫ್ ಅಟಾರ್ನಿ ಹೊಂದಿದ್ದರು (ಟಿಲ್ ಡೆತ್). ಈ ಅಧಿಕಾರವನ್ನು ಬಳಸಿಕೊಂಡು, ಮಗಳನ್ನು ಕಡೆಗಡೆಗಣಿಸಿ,ಎಲ್ಲಾ ಆಸ್ತಿಯನ್ನು ಡಾ. ಠಕ್ಕರ್‌ಗೆ ವಿಲ್ ಮಾಡಿದ್ದಾರೆ ಕಮಲ್ ಠಾಕೂರ್.
'ಸಾರಿಕಾ ಅವರಿಗೆ ಸ್ವಂತ ಮನೆ ಇಲ್ಲ. ಮಗಳು ಅಕ್ಷರಾತಂದೆ ಕಮಲ್ ಹಾಸನ್ ಜೊತೆ ಚೆನ್ನೈನಲ್ಲಿ ವಾಸಿಸುತ್ತಾಳೆ. ಆದರೆ ಅವಳು ರೆಗ್ಯುಲರ್ ಆಗಿ ತಾಯಿ ಸಂಪರ್ಕದಲ್ಲಿದ್ದಾಳಂತೆ.
ಆಮೀರ್ ಅವರ ಕಸಿನ್ ನುಜಾತ್ ಸಾರಿಕಾಳ ಕ್ಲೋಸ್ ಫ್ರೆಂಡ್‌ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ .
ಸಾರಿಕಾ ಆಮೀರ್ ಕಸಿನ್ ನುಜಾತ್ ಕ್ಲೋಸ್ ಫ್ರೆಂಡ್. ನಟಿಗೆ ಸಹಾಯ ಮಾಡಲು ಸುಜಾತ್ಆಮೀರ್‌ನನ್ನು ಸಂಪರ್ಕಿಸಿದಾಗ, ಈ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ನೋಡಲು ಆಮೀರ್ ಖಾನ್ ಮುಂದೆ ಬಂದಿದ್ದಾರೆಂದು ಹೇಳಲಾಗುತ್ತದೆ.
ಸಾರಿಕಾ ಮತ್ತು ಕಮಲ್ ಹಾಸನ್ 2004ರಲ್ಲಿ ಬೇರೆಯಾಗಿದ್ದಾರೆ. ಹಿರಿಯ ಮಗಳುನಟಿ ಶೃತಿ ಹಾಸನ್ ಮುಂಬೈನಲ್ಲಿ ಅಪಾರ್ಟ್ಮೆಂಟ್ ಹೊಂದಿದ್ದಾರೆ.