1998 ರಲ್ಲಿ ಬಿಡುಗಡೆಯಾದ ದಿಲ್ ಸೆ ಸಿನಿಮಾದ ಜಿಯಾಜೇಲ್. ಪ್ರೀತಿ ಜಿಂಟಾ ಅಭಿನಯದ ಈ ಹಾಡು ಭರ್ಜರಿ ಹಿಟ್ ಆಯಿತು. ಪ್ರತಿ ಬಾರಿ ನೀವು ಇದನ್ನು ಕೇಳಿದಾಗಲೂ ಲತಾರ ಧ್ವನಿ ಒಂದು ರೀತಿ ಸ್ಲೋ ಪಾಯಿಸನ್‌ಅನಿಸುತ್ತದೆ. ರೆಹಮಾನ್‌ರ ಪ್ರತಿ ಲೈವ್ ಕನ್ಸರ್ಟ್‌ನಲ್ಲಿ, ಈ ಹಾಡು ಇದ್ದೇ ಇರುತ್ತದೆ.
ಖಮೋಶಿಯಾನ್ ಗುಂಗುನಾನೆ ಲಗಿ: ಖಮೋಶಿಯಾನ್ ಗುಂಗುನೆನೆ ಲಗಿ 2001ರಲ್ಲಿ ಬಿಡುಗಡೆಯಾದ ಥ್ರಿಲ್ಲರ್ ಒನ್ ಟು ಕಾ ಫೋರ್ ಸಿನಿಮಾದ ಹಾಡು. ಜುಹಿ ಚಾವ್ಲಾ ಮತ್ತು ಶಾರುಖ್ ಖಾನ್ ನಟಿಸಿರುವ ಈ ಸಿನಿಮಾ ಅಷ್ಟು ಹೆಸರು ಮಾಡಲಿಲ್ಲ. ಆದರೆ ಎ.ಆರ್.ರೆಹಮಾನ್‌ರ ಸಂಗೀತ ಮತ್ತು ಲತಾ ಅವರ ಧ್ವನಿ ಮಾತ್ರ ಸಖತ್ ಸದ್ದು ಮಾಡಿತ್ತು.
ರಾಷ್ಟ್ರ ಪ್ರಶಸ್ತಿ ವಿಜೇತ ಪುಕಾರ್ ಸಿನಿಮಾದ ಏಕ್ ತು ಹಿ ಭರೋಸಾ. ಈ ಹಾಡು ಕೇಳುಗರನ್ನು ಮೆಡಿಟೇಷನ್ ಮೋಡ್‌ಗೆ ಕರೆದೊಯ್ಯುತ್ತದೆ. ಈ ಹಾಡು ಬಾಲಿವುಡ್‌ನಎವರ್‌ಗ್ರೀನ್ ಸಾಂಗ್ಸ್ ಪಟ್ಟಿಯಲ್ಲಿದೆ.
ಕರಿಷ್ಮಾ ಕಪೂರ್ ಅಭಿನಯದ ಜುಬೇದಾ ಪ್ಯಾರಾ ಸಾ ಗಾಂವ್ ಹಾಡು ಎ.ಆರ್.ರೆಹಮಾನ್ ಕೆರಿಯರ್‌ನ ಮತ್ತೊಂದು ಹೆಗ್ಗುರುತು. ಈ ಹಾಡು ಜನರಿಗೆ ಹಳ್ಳಿಯ ಜೀವನ ಮತ್ತು ಅದರ ಸೌಂದರ್ಯವನ್ನು ನೀಡುತ್ತದೆ. ಲತಾರ ಧ್ವನಿ ಬೇರೆ ಲೋಕಕ್ಕೆ ನಮ್ಮನ್ನು ಕರೆದೊಯ್ಯವುದು ಸುಳ್ಳಲ್ಲ.
ರಂಗ್ ದೇ ಬಸಂತಿ ಸಿನಿಮಾದಿಂದ ಲುಕ್ಕಾ ಚುಪ್ಪಿ ಹಾಡು. 2006ರ ಚಿತ್ರ ರಂಗ್ ದೇ ಬಸಂತಿ ದೇಶಭಕ್ತಿ ಭಾವನೆಯನ್ನು ಹುಟ್ಟುಹಾಕಿತು. ಈ ಸಿನಮಾದ ಸಂಗೀತವೂ ಚಿತ್ರದ ಹೈಲೈಟ್ಸ್‌ನಲ್ಲಿ ಮುಖ್ಯವಾದದ್ದು.ಲತಾ ಮಂಗೇಶ್ಕರ್ ಅವರ ಲುಕ್ಕಾ ಚುಪ್ಪಿ ಹಾಡು ಎ.ಆರ್.ರೆಹಮಾನ್ ಅವರ ಫೇವರೇಟ್.
ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಲತಾಜೀಗೆ ಜನ್ಮದಿನದ ಶುಭ ಹಾರೈಸಿದ್ದಾರೆ.
ಪಿಎಂ ಮೋದಿ ಅವರ ಸಂಭಾಷಣೆಯ ಬಗ್ಗೆ ವಿವರಗಳನ್ನು ಟ್ಟೀಟರ್ ಮೂಲಕ ಜನತೆಯ ಜೊತೆ ಹಂಚಿಕೊಂಡಿದ್ದಾರೆ ದೇಶದ ಪ್ರಧಾನಿ.
'ಗೌರವಾನ್ವಿತ ಲತಾ ದೀದಿ ಅವರೊಂದಿಗೆ ಮಾತನಾಡಿದೆ ಮತ್ತು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದೆ. ಅವರದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ. ಲತಾ ದೀದಿ ರಾಷ್ಟ್ರದಾದ್ಯಂತ ಚಿರಪರಿಚಿತ ಹೆಸರು. ನಾನು ಯಾವಾಗಲೂ ಅವರ ವಾತ್ಸಲ್ಯ ಮತ್ತು ಆಶೀರ್ವಾದಗಳನ್ನು ಪಡೆದಿರುವುದು ನನ್ನ ಅದೃಷ್ಟ,' ಮೋದಿ ಅವರು ಟ್ವೀಟ್ ಮಾಡಿದ್ದಾರೆ.