ರೇಖಾರನ್ನು ಮನೆಗೆ ಊಟಕ್ಕೆ ಕರೆದು, ಅಮಿತಾಬ್ ಎಂದೆಂದಿಗೂ ನನ್ನವನೇ ಎಂದು ವಾರ್ನಿಂಗ್ ಕೊಟ್ಟಿದ್ದ ಜಯಾ ಬಚ್ಚನ್!

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ತನ್ನ ಪತಿಯನ್ನು ಪ್ರೀತಿಸುತ್ತಿದ್ದ ರೇಖಾರನ್ನು ಮನೆಗೆ ಊಟಕ್ಕೆ ಕರೆದು ಅಮಿತಾಬ್ ಎಂದೆಂದಿಗೂ ನನ್ನವನೇ ಎಂದಿದ್ದರಂತೆ. 
 

What Jaya Bachchan told to Rekha about Amitabh Bachchan pav

ಅಮಿತಾಬ್ ಬಚ್ಚನ್ (Amitabh Bachchan), ಜಯಾ ಬಚ್ಚನ್ ಮತ್ತು ರೇಖಾ ನಡುವಿನ ತ್ರಿಕೋನ ಪ್ರೇಮಕಥೆ ಬಾಲಿವುಡ್‌ನ ಅತ್ಯಂತ ಚರ್ಚಿತ ವಿವಾದಗಳಲ್ಲಿ ಒಂದಾಗಿದೆ. ಇವತ್ತಿಗೂ ಕೂಡ ಇವರ ಪ್ರೇಮಕಥೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಇವತ್ತಿಗೂ ರೇಖಾ ಅವರು ಅಮಿತಾಬ್ ಪ್ರೀತಿಯಲ್ಲಿಯೇ ಜೀವಿಸುತ್ತಿದ್ದಾರೆ ಎಂದು ಸಹ ಹೇಳಲಾಗುತ್ತೆ. 
 

ಮೇರಿ ಸಹೇಲಿ ಪಾಡ್‌ಕ್ಯಾಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಸಂಭಾಷಣೆಯಲ್ಲಿ, ಹಿರಿಯ ಲೇಖಕ ಮತ್ತು ಚಲನಚಿತ್ರ ಇತಿಹಾಸಕಾರ ಹನೀಫ್ ಜವೇರಿ (Hanif Zavri), ರೇಖಾ ಅಮಿತಾಬ್ ಅವರ ಜೀವನವನ್ನು ಹೇಗೆ ಪ್ರವೇಶಿಸಿದರು, ಜಯಾ ಅವರ ಅಚಲ ನಿಲುವು ಮತ್ತು ಅದರ ಪರಿಣಾಮಗಳ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡರು.
 


ಹನೀಫ್ ಜವೇರಿಯವರ ಪ್ರಕಾರ, ದೋ ಅಂಜಾನೆ ಚಿತ್ರೀಕರಣದ ಸಮಯದಲ್ಲಿ ರೇಖಾ (Rekha) ಮತ್ತು ಅಮಿತಾಬ್ ಬಚ್ಚನ್ ಅವರ ನಡುವೆ ಸ್ನೇಹ ಮೂಡಿತ್ತಂತೆ.  ಅವರು ಹೇಗೆ ಪ್ರೀತಿಯಲ್ಲಿ ಬಿದ್ದರೋ ನನಗೆ ತಿಳಿದಿಲ್ಲ, ಆದರೆ ಅವರು ಪ್ರೀತಿಯಲ್ಲಿದ್ದರು ಎಂಬುದು 100% ಖಚಿತ" ಎಂದು ಹನೀಫ್ ಹೇಳಿದ್ದಾರೆ. 
 

ಆದಾಗ್ಯೂ, 1982 ರಲ್ಲಿ ಕೂಲಿ ಚಿತ್ರೀಕರಣದ ಸಮಯದಲ್ಲಿ ಅಮಿತಾಬ್ ಭೀಕರ ಅಪಘಾತಕ್ಕೆ  (accident)ಒಳಗಾಗಿದ್ದರು. ಈ ಸಂದರ್ಭದಲ್ಲಿ ಅಮಿತಾಬ್ ಅವರ ಜೀವನವು ಮಹತ್ವದ ತಿರುವು ಪಡೆದುಕೊಂಡಿತು. ಜಯಾ ಬಚ್ಚನ್ ಆಸ್ಪತ್ರೆಯಲ್ಲಿ ಅವರ ಪಕ್ಕದಲ್ಲಿಯೇ ಇದ್ದು ಸೇವೆ ಸಲ್ಲಿಸಿದರು, ಹಗಲು ರಾತ್ರಿ ಅವರ ಜೊತೆಗಿದ್ದು, ನೋಡಿಕೊಳ್ಳುತ್ತಿದ್ದರು ಮತ್ತು ವೈದ್ಯರೊಂದಿಗೆ ಮಾತುಕತೆ ನಡೆಸಿದ್ದು ಸಹ ಪತ್ನಿ ಜಯಾ ಬಚ್ಚನ್.
 

ಅಮಿತಾಬ್ ಬಚ್ಚನ್ ಅವರಿಗೆ ಪ್ರಜ್ಞೆ ಮರಳಿ ಬಂದಾಗ, ಅವರಿಗೆ ಪತ್ನಿ ಜಯ (Jaya Bachchan) ಅವರ ನಿಷ್ಕಲ್ಮಷ ಪ್ರೀತಿ, ಇಷ್ಟು ದಿನ ಮಾಡಿದ ಸೇವೆ ಎಲ್ಲವೂ ಅವರಿಗೆ ಜಯಾ ಮೇಲಿದ್ದ ಪ್ರೀತಿ ಹೆಚ್ಚುವಂತೆ ಮಾಡಿರು. ಬಚ್ಚನ್ ತಮ್ಮ ಹೆಂಡತಿಯ ಕಡೆಗೆ ಹೆಚ್ಚು ಒಲವು ತೋರಲು ಪ್ರಾರಂಭಿಸಿದರು ಮತ್ತು ಬಳಿಕ ಎಲ್ಲವೂ ಬದಲಾಗಲು ಪ್ರಾರಂಭಿಸಿದವು" ಎಂದು ಜವೇರಿ ಹೇಳಿದ್ದಾರೆ.
 

ಅಮಿತಾಬ್ ಮತ್ತು ರೇಖಾ ನಡುವಿನ ಉದ್ವಿಗ್ನತೆ ಹೆಚ್ಚಾದಾಗ, ಜಯಾ ಬಚ್ಚನ್ ನಿರ್ಣಾಯಕ ಹೆಜ್ಜೆ ಇಟ್ಟರು ಎನ್ನಲಾಗಿದೆ. ಜವೇರಿ ಪ್ರಕಾರ, ಅಮಿತಾಬ್ ಮನೆಯಲ್ಲಿ ಇಲ್ಲದಿದ್ದಾಗ ಜಯಾ ಬಚ್ಚನ್ ರೇಖಾ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದರು.
 

ರೇಖಾಗೆ ಜಯಾ ಬಗೆ ಬಗೆಯ ಊಟಗಳನ್ನು ಬಡಿಸಿ, ಆತಿಥ್ಯ ನೀಡಿದರು, ಅಷ್ಟೇ ಅಲ್ಲ ರೇಖಾ ಜೊತೆ ಜಯಾ ಬಹಳಷ್ಟು ಹರಟೆ ಕೂಡ ಹೊಡೆದಿದ್ದರಂತೆ, ಕೊನೆಗೆ ಸಂಜೆ ರೇಖಾ ಮನೆಯಿಂದ ಹೊರಟಾಗ,  ಜಯಾ ರೇಖಾಳನ್ನು ನೋಡಿ ಹೇಳಿದರಂತೆ, 'ಅಮಿತಾಭ್ ನನ್ನವನು. ಅವನು ನನ್ನವನಾಗಿದ್ದ ಮತ್ತು ಯಾವಾಗಲೂ ನನ್ನವನಾಗಿರುತ್ತಾನೆ' ಎಂದು". ಈ ಹೇಳಿಕೆಯು ರೇಖಾ ಮೇಲೆ ಶಾಶ್ವತವಾದ ಪ್ರಭಾವ ಬೀರಿತು, ಇದರಿಂದಾಗಿ ಅವರು ಅಮಿತಾಬ್ ಮೇಲಿನ ಪ್ರೀತಿಯಿಂದ ಹಿಂದೆ ಸರಿದರು ಎಂದು ಜವೇರಿ ಹೇಳಿದ್ದಾರೆ. 
 

Latest Videos

vuukle one pixel image
click me!