ಎದ್ದೇಳಿ ಹಿಂದೂಗಳೇ, ಇದು ನಟಿ ಕಾಜಲ್ ಅಗರ್ವಾಲ್ ಸನಾತನಿಗಳಿಗೆ ನೀಡಿದ ಕರೆ.ನೀವು ಮೌನವಾಗಿದ್ದರೆ ಅದರಿಂದ ರಕ್ಷಣೆ ಸಿಗುವುದಿಲ್ಲ. ಬಾಂಗ್ಲಾದೇಶ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ನಟಿ ಮಹತ್ವದ ಎಚ್ಚರಿಕೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಸತತ ದಾಳಿಯಾಗುತ್ತಿದೆ. ದೀಪು ಚಂದ್ರದಾಸ್ ಮೇಲೆ ಉದ್ರಿಕ್ತರ ಗುಂಪು ದಾಳಿ ಮಾಡಿ ಹತ್ಯೆಗೈದಿದೆ. ಮತ್ತೋರ್ವ ಹಿಂದೂವಿನ ಮೇಲೆ ದಾಳಿಯಾಗಿದೆ, ಸುಲಿಗೆ ಆರೋಪದಲ್ಲಿ ಅಮೃತ್ ಮೊಂಡಲ್ ಅನ್ನೋ ಹಿಂದೂವಿನ ಮೇಲೆ ದಾಳಿಯಾಗಿದೆ. ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿಗೆ ಜಾಗತಿಕ ಮಟ್ಟದಲ್ಲಿ ಯಾವುದೇ ಖಂಡನೆ, ಆಕ್ರೋಶ ವ್ಯಕ್ತವಾಗುತ್ತಿಲ್ಲ. ಇತ್ತ ಭಾರತದಲ್ಲೂ ಅಲ್ಲೊಂದು ಇಲ್ಲೊಂದು ಪ್ರತಿಭಟನೆ, ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದೀಗ ನಟಿ ಕಾಜಲ್ ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ.
26
ಎದ್ದೇಳಿ ಹಿಂದೂಗಳು, ಮೌನ ನಿಮ್ಮನ್ನು ರಕ್ಷಿಸುವುದಿಲ್ಲ
ಎದ್ದೇಳಿ ಹಿಂದೂಗಳೇ ಎಂದು ನಟಿ ಕಾಜಲ್ ಅಗರ್ವಾಲ್ ಹಿಂದೂಗಳ ಬಡಿದೆಬ್ಬಿಸಿದ್ದಾರೆ. ನೀವು ಮೌನವಾಗಿ ಕುಳಿತರೆ ಯಾರು ನಿಮ್ಮನ್ನ ರಕ್ಷಿಸುವುದಿಲ್ಲ ಎಂದು ಕಾಜಲ್ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಹಾಕಿದ್ದಾರೆ. ಬಾಂಗ್ಲಾದೇಶ ಹಿಂದೂಗಳ ಮೇಲಿನ ದಾಳಿಗೆ ವಿಶ್ವ ಮೌನವಾಗಿದೆ. ಕನಿಷ್ಠ ಭಾರತೀಯ ಹಿಂದೂಗಳೇ ಎದ್ದೇಳಿ ಎಂದು ನಟಿ ಕರೆ ನೀಡಿದ್ದಾರೆ.
36
ಆಲ್ ಐಯ್ಸ್ ಆನ್ ಬಾಂಗ್ಲಾದೇಶ
ಗಾಜಾ ಮೇಲಿನ ದಾಳಿ, ರಾಫಾ ಮೇಲಿನ ದಾಳಿ ಸೇರದಂತೆ ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವ ಯುದ್ಧಕ್ಕೆ ಭಾರತದಲ್ಲಿ ಭಾರಿ ಪ್ರತಿಕ್ರಿಯೆ, ಖಂಡನೆ ವ್ಯಕ್ತವಾಗಿತ್ತು. ಆಲ್ ಐಯ್ಸ್ ಆನ್ ಗಾಜಾ, ಆಲ್ ಐಯ್ಸ್ ಆನ್ ರಾಫಾ ಎಂದು ಬಾಲಿವುಡ್ ಸೆಲೆಬ್ರೆಟಿಗಳಿಂದ ಹಿಡಿದು ಎಲ್ಲರೂ ಟ್ವೀಟ್, ಪೋಸ್ಟ್ ಮಾಡಿದ್ದರು. ಆದರೆ ಬಾಂಗ್ಲಾದೇಶ ಹಿಂದೂಗಳ ಮೇಲೆ ಯಾರ ಕಣ್ಣು ಇಲ್ಲ. ಇದಕ್ಕೆ ನಟಿ ಕಾಜಲ್ ಅಗರ್ವಾಲ್, ಎಲ್ಲರ ಕಣ್ಣು ಬಾಂಗ್ಲಾದೇಶ ಹಿಂದೂ ಮೇಲೆ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಭೀಕರ ದಾಳಿ ಚಿತ್ರವನ್ನು ಕಾಜಲ್ ಅಗರ್ವಾಲ್ ಪೋಸ್ಟ್ ಮೂಲಕ ಹೇಳಿದ್ದಾರೆ. ಫೋಟೋ ಪೋಸ್ಟ್ ಮಾಡಿರುವ ಕಾಜಲ್, ನಾವು ಸುಮ್ಮನ್ನಿದ್ದರೆ ಘನಘೋರ ದುರಂತ ಸಂಭವಿಸಲಿದೆ ಎಂದು ಭಾರತೀಯರನ್ನು ಬಡಿದೆಬ್ಬಿಸಿದ್ದಾರೆ.
56
ಕೆಲ ನಟಿ ನಟಿಯರಿಂದ ಖಂಡನೆ
ಗಾಜಾ, ರಾಫಾ ಮೇಲೆ ಎಲ್ಲರು ಕಣ್ಣಿಟ್ಟಿದ್ದರೆ, ಬಾಂಗ್ಲಾ ಮೇಲೆ ಯಾರೂ ಇಲ್ಲ. ಈ ಪೈಕಿ ನಟಿ ಕಾಜಲ್ ಅಗರ್ವಾಲ್ ಸೇರಿದಂತೆ ಕೆಲ ಸೆಲೆಬ್ರೆಟಿಗಳು ಘಟನೆ ಖಂಡಿಸಿದ್ದಾರೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸೇರಿದಂತೆ ಕೆಲ ಸೆಲೆಬ್ರೆಟಿಗಳು ಹಿಂದೂಗಳ ಮೇಲಿನ ದಾಳಿ ಖಂಡಿಸಿದ್ದಾರೆ.
ಕೆಲ ನಟಿ ನಟಿಯರಿಂದ ಖಂಡನೆ
66
ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಗಂಭೀರ
ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಕೈಮೀರಿದೆ. ಮೊಹಮ್ಮದ್ ಯೂನಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ನಿರಂತರವಾಗಿ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಹಿಂದೂಗಳ ಮೇಲಿನ ದಾಳಿ, ಹತ್ಯೆ ಒಂದಡೆಯಾದರೆ , ಇದೀಗ ಹಿಂದೂಗಳ ಶ್ರದ್ಧಾಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿ ಶತಮಾನಗಳಿಂದ ಪೂಜಿಸಿಕೊಂಡು ಬರುತ್ತಿದ್ದ ಆಲದ ಮರವನ್ನೇ ಕಡಿದು ಹಾಕಿದ್ದಾರೆ.
ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಗಂಭೀರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.