ವ್ಯಾಲೆಂಟೈನ್ಸ್ ಡೇ ರೊಮ್ಯಾಂಟಿಕ್ ಬೈಕ್ ರೈಡ್‌ - ವಿವೇಕ್ ಒಬೆರಾಯ್‌ಗೆ ದಂಡ!

First Published | Feb 21, 2021, 11:04 AM IST

ಬಾಲಿವುಡ್‌ ನಟ ವಿವೇಕ್ ಒಬೆರಾಯ್ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಸಿನಿಮಾವಲ್ಲ. ವ್ಯಾಲೆಂಟೈನ್ಸ್ ಡೇ ಆಗಿದೆ. ಹೌದು ನಟ ವ್ಯಾಲೆಂಟೈನ್ಸ್ ಡೇ ರೊಮ್ಯಾಂಟಿಕ್ ಬೈಕ್ ರೈಡ್‌ನಿಂದ ತೊಂದರೆಗೆ ಒಳಾಗಿದ್ದಾರೆ. ವಿವರ ಇಲ್ಲಿದೆ. 

ಈ ಬಾರಿಯ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್ಕಾರಣದಿಂದ ನಟ ವಿವೇಕ್ ಒಬೆರಾಯ್ ದಂಡ ಕಟ್ಟುವ ಹಾಗಾಗಿದೆ.
ಫೆಬ್ರವರಿ 14ರಂದು ಒಬೆರಾಯ್ ಪತ್ನಿ ಜೊತೆಯ ಬೈಕ್ ರೈಡ್‌ನ ವಿಡಿಯೋ ಸಖತ್‌ ವೈರಲ್‌ ಆಗಿದೆ. ಹೆಲ್ಮೆಟ್ ಹಾಗೂ ಮಾಸ್ಕ್ ಇಲ್ಲದೇ ಓಡಿಸಿದ ಬೈಕ್ ಓಡಿಸಿದ್ದರಿಂದ ತೊಂದರೆಗೆ ಸಿಲುಕಿಸಿದೆ.
Tap to resize

ಪ್ರೇಮಿಗಳ ದಿನದಂದು ವಿವೇಕ್ ಒಬೆರಾಯ್ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹೊಸ ಹಾರ್ಲೆ-ಡೇವಿಡ್ಸನ್ ಬೈಕ್‌ನ ಲುಕ್‌ ಅನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಪತ್ನಿ ಪ್ರಿಯಾಂಕಾ ಅಳ್ವಾ ಅವರೊಂದಿಗೆ ಮುಂಬೈ ಬೀದಿಗಳಲ್ಲಿ ಬೈಕು ಸವಾರಿ ಮಾಡುತ್ತಿರುವ ವಿಡಿಯೋವೊಂದನ್ನು ನಟ ಪೋಸ್ಟ್ ಮಾಡಿದ್ದಾರೆ.
ವೀಡಿಯೊವನ್ನು ಹಂಚಿಕೊಂಡ ಅವರು, 'ಹ್ಯಾಪಿ ವ್ಯಾಲೆಂಟೈನ್ಸ್ ಡೇ ! ಮೇ ಮೇರಿ ಪತ್ನಿ ಔರ್ ವೊಹ್ ಜೊತೆ ಈ ಸುಂದರವಾದ ಪ್ರೇಮಿಗಳ ದಿನದ ಪ್ರಾರಂಭ! ನಿಜಕ್ಕೂ ರಿಫ್ರೆಶ್ ಜಾಯ್‌ರೈಡ್! ಎಂದು ಕ್ಯಾಪ್ಷನ್‌ ನೀಡಿದ್ದಾರೆ.
ನಗರದಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್‌ ಇಲ್ಲದೆ ಬೈಕು ಸವಾರಿ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರುನಟನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಈ ವಿಡಿಯೋ ಹಂಚಿಕೊಂಡ ನಂತರ ವಿವೇಕ್‌ಗೆ ಮುಂಬೈ ಟ್ರಾಫಿಕ್ ಪೊಲೀಸರು 500 ರೂ.ಗಳ ದಂಡ ವಿಧಿಸಿದ್ದಾರೆ ಎಂದು ವರದಿಯಾಗಿದೆ.
ಅವರ ವಿರುದ್ಧ ಐಪಿಸಿ ಸೆಕ್ಷನ್ 188 ಮತ್ತು 269ರ ಅಡಿಯಲ್ಲಿ ಮಹಾರಾಷ್ಟ್ರ ಕೋವಿಡ್ -19 ಮುನ್ನೆಚ್ಚರಿಕೆ ಕ್ರಮಗಳು 2020 ಮತ್ತು ಮೋಟಾರು ವೆಹಿಕಲ್‌ ಆ್ಯಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವಿವೇಕ್ ವಿಡಿಯೋ ಪೋಸ್ಟ್ ಮಾಡಿದ ಕೂಡಲೇ, ಹೆಲ್ಮೆಟ್ ಅಥವಾ ಮಾಸ್ಕ್‌ ಧರಿಸದ ಕಾರಣಕ್ಕಾಗಿ ನೆಟಿಜನ್‌ಗಳು ಆತನ ಮೇಲೆ ವಾಗ್ದಾಳಿ ನಡೆಸಿದರು.
'ಸರ್ ಹೆಲ್ಮೆಟ್ ಧರಸಿ, ಸುರಕ್ಷತೆ ಮೊದಲು' ಎಂದು ಒಬ್ಬರು ಹೇಳಿದರು. ಮತ್ತೊಬ್ಬರು 'ನೀವು ಮುಂದಿನ ಬಾರಿ ಸವಾರಿ ಮಾಡುವಾಗ ದಯವಿಟ್ಟು ಹೆಲ್ಮೆಟ್ ಧರಿಸಿ' ಎಂದು ಬರೆದಿದ್ದಾರೆ.

Latest Videos

click me!