ಕಂಗನಾ ಹೇಳಿದಂತೆ ಆಲಿಯಾ ರಣಬೀರ್ ಬೇರೆ ಬೇರೆ ಮನೆಯಲ್ಲಿರುವುದಾ? ಏನಿದು ನೀತು ಕಪೂರ್ ಪೋಸ್ಟ್?
First Published | Jul 20, 2023, 6:13 PM ISTಮಂಗಳವಾರ, ಕಂಗನಾ ರಣಾವತ್ (Kangana Ranaut) ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Alia Bhatt- Ranbir Kapoor) ಮದುವೆ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು ಪೋಸ್ಟ್‌ನಲ್ಲಿ, ನಟಿ ರಣಬೀರ್ 'ಮಾಫಿಯಾ ಡ್ಯಾಡಿ ಒತ್ತಡದಲ್ಲಿದ್ದಾರೆ ಮತ್ತು ಅವರ ಮದುವೆ ಫೇಕ್ ಎಂದು ಹೇಳಿಕೊಂಡಿದ್ದಾರೆ. ಅದರ ನಂತರ ನೀತು ಕಪೂರ್ (Neetu Kapoor) Instagramನಲ್ಲಿ ಕುಟುಂಬದ ಬಗ್ಗೆ ನಿಗೂಢ ಟಿಪ್ಪಣಿ ಪೋಸ್ಟ್ ಮಾಡಿದ್ದಾರೆ. ನೀತು ಅವರ ಈ ಪೋಸ್ಟ್ ರಣಬೀರ್ ಮತ್ತು ಆಲಿಯಾ ನಡುವೆ ಎಲ್ಲಾ ಸರಿಯಿಲ್ಲ ಎಂಬ ಅನುಮಾನವನ್ನು ಹುಟ್ಟುಹಾಕಿದೆ.