ಸ್ಕೂಲಲ್ಲಿ ಜೂನಿಯರ್, ಭೇಟಿಯಾದಾಗ ಕೆಮಿಸ್ಟ್ರಿ ವರ್ಕ್ ಔಟ್ ಆಯ್ತು: ದುಲ್ಖರ್ ಸಲ್ಮಾನ್ ಲವ್ ಸ್ಟೋರಿ!

First Published Jul 27, 2023, 5:47 PM IST

ಮಾಲಿವುಡ್‌ ಸ್ಟಾರ್‌ ದುಲ್ಕರ್ ಸಲ್ಮಾನ್ (Dulquer Salmaan )  ತನ್ನ ಪತ್ನಿ ಅಮಲ್ ಸೂಫಿಯಾಳನ್ನು ಮದುವೆಯಾಗಿ ಒಂದು ದಶಕ ಕಳೆದಿದೆ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ, ನಟ-ನಿರ್ಮಾಪಕರು ತಮ್ಮ ಪ್ರೇಮಕಥೆಯ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ. ಅವರಿಬ್ಬರೂ ಒಂದೇ ಶಾಲೆಗೆ ಹೋಗಿದ್ದರಿಂದ ಅವರ ಶಾಲಾ ದಿನಗಳಿಂದಲೂ ಅವರ ಬಗ್ಗೆ ತಿಳಿದಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ.

ಅಮಲ್ ತನಗಿಂತ ಐದು ವರ್ಷ ಜೂನಿಯರ್. ಇಬ್ಬರೂ ಶಾಲೆಯಲ್ಲಿದ್ದಾಗ ಅವರ ಬಗ್ಗೆ ಯೋಚಿಸಲೇ ಇಲ್ಲ ಎಂದು ದುಲ್ಕರ್ ಹೇಳಿದ್ದಾರೆ. ಆದಾಗ್ಯೂ, ವರ್ಷಗಳ ನಂತರ ಅವರು ಆಕೆಯನ್ನು ಭೇಟಿಯಾದಾಗ, ಮದುವೆಯಾಗುವ ಸಾಧ್ಯತೆ ಬಗ್ಗೆ ಯೋಚಿಸಿದರು ಎಂದಿದ್ದಾರೆ.

.'ಅವಳು ನನಗಿಂತ ಐದು ವರ್ಷ ಕಿರಿಯಳು, ನಾನು 12ನೇ ತರಗತಿಯಲ್ಲಿದ್ದಾಗ 7ನೇ ತರಗತಿಯಲ್ಲಿ ಮಗುವಿನಂತೆ ಇದ್ದಳು' ಎಂದು ಅವರು ಹೇಳಿದರು. 

Latest Videos


ವರ್ಷಗಳ ನಂತರ, ದುಲ್ಕರ್ ಮನೆಯವರು ಅವರಿಗೆ ಮದುವೆ ಮಾಡಲು ಯೋಚಿಸಿದ್ದರು. ಆದರೆ ಅವರು ಯಾರನ್ನೂ ಒಪ್ಪಿಕೊಳ್ಳಲು ಅಥವಾ ತಿರಸ್ಕರಿಸಲು ಸಾಧ್ಯವಾಗದ ಕಾರಣ ಅವರು ಅರೇಂಜ್ಡ್ ಮ್ಯಾರೇಜ್‌ನ ಕಲ್ಪನೆಯನ್ನು ವಿರೋಧಿಸಿದ್ದರಂತೆ. 

ಕೆಲವು ವಿಚಿತ್ರ ಕಾರಣಗಳಿಗಾಗಿ, ನಾನು ನನ್ನ ಹೆಂಡತಿ ಅಮಲ್ ಅನ್ನು ಚೆನ್ನೈನಲ್ಲಿ ನೋಡಿದ್ದೆ. ಎರಡು ವಾರಗಳ ಕಾಲ ನಾನು ಅವಳನ್ನು ಪದೇ ಪದೇ ಭೇಟಿಯಾಗುತ್ತಿದ್ದೆ ಎಂದಿದ್ರು. 

'ಚಲನಚಿತ್ರ ಅಥವಾ ಸಲೂನ್‌ನಲ್ಲಿ ಮುಂತಾದ ಸ್ಥಳಗಳಲ್ಲಿ ಸಿಗುತ್ತಿದ್ದವು.  ಯಾವುದೋ ಜನ್ಮದ ಋಣಾನುಬಂಧದ ಸೂಚನೆ ಇದು ಎಂದು ಭಾವಿಸಿದ್ದೆ. ಹಾಗಾಗಿ ನಾನು ಅವಳನ್ನು ಫೇಸ್‌ಬುಕ್‌ನಲ್ಲಿ ಅಥವಾ ಇನ್ಯಾವುದೋ ಮಾಧ್ಯಮದ ಮೂಲಕ ಸಂಪರ್ಕಿಸಿದೆ. ಕಾಫಿಗಾಗಿ ಭೇಟಿಯಾಗಲು ನಿರ್ಧರಿಸಿದ್ದೆವು. ಆದರೆ, ಎಲ್ಲವೂ ಪೋಷಕರ ಸಹಮತಿಯೊಂದಿಗೇ ನಡೆದಿದ್ದು ವಿಶೇಷ, ಎಂದಿದ್ದರು. 

'ನನ್ನ ಶಾಲೆಯ ಈ ಹುಡುಗಿಯಾದ್ದರಿಂದ ಸಂಬಂಧ ಮಾಡಬಹುದು ಎಂದೆನಿಸಿತು. ಆದರೆ ಮೊದಲು ಅವಳನ್ನು ಭೇಟಿಯಾಗಲು ಬಯಸಿದ್ದೆ. ನಮ್ಮಿಬ್ಬರ ನಡುವೆ ಏನಾದರೂ ಬಂಧ ಇದೆಯೇ ಎಂದು ನೋಡಲು ಬಯಸಿದ್ದೆ, ಎಂದು ಪೋಷಕರಲ್ಲಿ ಹೇಳಿದೆ. ಅಧಿಕೃತವಾಗಿ ಕಾಫಿಗಾಗಿ ಭೇಟಿಯಾಗಳು ಆರಂಭಿಸಿದವು. ನಮ್ಮ ನಡುವೆ ಏನೂ ಇಲ್ಲ .ಶಾಲಾ ಸಹಪಾಠಿಗಳು ಕಾಫಿಗೆ ಭೇಟಿಯಾಗುತ್ತೇವೆ ಎಂದು ನಿನ್ನ ತಂದೆ ತಾಯಿಗೂ ಹೇಳು ಎಂದು ನಾನು ಅವಳಿಗೂ  ಹೇಳಿದ್ದೆ' ಎಂದು ನಟ ಬಹಿರಂಗ ಪಡೆಸಿದ್ದಾರೆ
 

ದುಲ್ಕರ್ ಅವರು  ಅತ್ಯಂತ ರೋಮ್ಯಾಂಟಿಕ್ ವಿಷಯವನ್ನು ನೆನಪಿಸಿಕೊಂಡರು ಮತ್ತು ಆ ಮೊದಲ ಕಾಫಿ ಡೇಟ್‌ಗೆ ಭೇಟಿಯಾದ ನಂತರ, ಮರುದಿನವೂ ಭೇಟಿಯಾದರು ಮತ್ತು ಅವರಿಬ್ಬರು ಚೆನ್ನೈನಿಂದ ಪಾಂಡಿಚೇರಿಗೆ ಹೋದ ವಿಷಯ ಬಿಚ್ಚಿಟ್ಟರು.

ನನ್ನ ಹೆಂಡತಿಯೊಂದಿಗೆ ನನ್ನ ಮೊದಲ ಡೇಟ್‌, ನಾನು ಅವಳನ್ನು ಚೆನ್ನೈನಿಂದ ಪಾಂಡಿಚೇರಿಗೆ ಒಂದೂವರೆ ಗಂಟೆಯಲ್ಲಿ ಕಾರನಲ್ಲಿ ಕರೆದು ಕೊಂಡು ಹೋದೆ. ನಾವು ನಾಲ್ಕು ಗಂಟೆಗಳ ಕಾಲ ಮಾತನಾಡಿದೆವು, ನಾನು ಹಿಂದಿರುಗಿದೆ' ಎಂದು ನೆನಪಿಸಿಕೊಂಡರು.

click me!