ವಿಜಯ್ ದೇವರಕೊಂಡ ಬರ್ತ್‌ಡೇ: ಸೂಪರ್‌ಸ್ಟಾರ್‌ ಒಟ್ಚು ಆಸ್ತಿ ಎಷ್ಟಿದೆ?

First Published May 9, 2023, 6:30 PM IST

ಡಿಯರ್ ಕಾಮ್ರೇಡ್,ಗೀತಾ ಗೋವಿಂದಂ ಮತ್ತು ಅರ್ಜುನ್ ರೆಡ್ಡಿ ಮುಂತಾದ ಹಿಟ್ ಚಿತ್ರಗಳಲ್ಲಿ ಪಾತ್ರಗಳಿಗೆ ಹೆಸರುವಾಸಿಯಾಗಿರುವ  ದಕ್ಷಿಣದ ಸೂಪರ್‌ಸ್ಟಾರ್‌ ವಿಜಯ್ ದೇವರಕೊಂಡ (Vijay Devarkonda)  33 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅವರ ನಿವ್ವಳ ಮೌಲ್ಯ, ಐಷಾರಾಮಿ ಕಾರುಗಳು, ಅದ್ದೂರಿ ಮನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ತಮ್ಮ ಸಿನಿಮಾಗಳಲ್ಲಿನ  ಅಸಾಧಾರಣ ಪ್ರದರ್ಶನಗಳೊಂದಿಗೆ ಟಾಲಿವುಡ್‌ನಲ್ಲಿ ಹೆಸರುವಾಸಿಯಾಗಿರುವ ವಿಜಯ್‌ ದೇವರಕೊಂಡ ಅವರ ಖ್ಯಾತಿ ಬಾಲಿವುಡ್‌ನಲ್ಲೂ ಕಡಿಮೆ ಇಲ್ಲ

ದಕ್ಷಿಣ ಸಿನಿಮಾದ ಈ ಸೂಪರ್‌ಸ್ಟಾರ್‌ ಕಾರುಗಳ ಮೇಲೆ ವಿಶೇಷವಾದ ಒಲವು ಹೊಂದಿದ್ದಾರೆ ಮತ್ತು ಅವರ ಗ್ಯಾರೇಜ್‌ನಲ್ಲಿ ಐದು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 

Latest Videos


ಫೋರ್ಡ್ ಮುಸ್ತಾಂಗ್ ಅವರ ಫೇವರೇಟ್‌ ಕಾರಾಗಿದೆ. ಅದರ ವೆಚ್ಚ ಸುಮಾರು 75 ಲಕ್ಷ. ಹೈದರಾಬಾದ್‌ನಲ್ಲಿ ಶೂಟ್‌ ಸಮಯದಲ್ಲಿ  ಮತ್ತು ಸುತ್ತಲೂ ಓಡಾಡಲು ದೇವರಕೊಂಡ ಹೆಚ್ಚಾಗಿ ಸುಮಾರು 60 ಲಕ್ಷ ರೂ ಬೆಲೆಯ  ಮರ್ಸಿಡಿಸ್ ಬೆಂಜ್ ಜಿಎಲ್‌ಸಿ ಕ್ಲಾಸ್ ಕಾರು ಬಳಸುತ್ತಾರೆ 

ಬಿಎಂಡಬ್ಲ್ಯು 5 ಸರಣಿಯು  ವಿಜಯ್‌ ದೇವರಕೊಂಡ ಅವರು ಹೊಂದಿರುವ ಇನ್ನೊಂದು ಲಕ್ಷುರಿಯಸ್‌ ಕಾರು . ಇದು ಬಿಎಂಡಬ್ಲ್ಯು 5 ಸರಣಿಯ ಡಿಲಕ್ಸ್ ಸೆಡಾನ್ ಆಗಿದೆ. ಚಲನಚಿತ್ರೋದ್ಯಮದ ಅತ್ಯಂತ ಆದ್ಯತೆಯ ವಾಹನಗಳಲ್ಲಿ ಒಂದಾದ ಇದರ ಬೆಲೆ ಸುಮಾರು 65 ಲಕ್ಷಕ್ಕಿಂತಲೂ ಹೆಚ್ಚು ಎಂದು ವರದಿಯಾಗಿದೆ.

ವೋಲ್ವೋ ಎಕ್ಸ್‌ಸಿ 90 ಅವರ ಗ್ಯಾರೇಜ್‌ನಲ್ಲಿನ ದುಬಾರಿ ವಾಹನಗಳಲ್ಲಿ ಒಂದಾಗಿದೆ. ಸುಮಾರು 85 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಬೆಲೆ ನಿ ಈ ಎಸ್‌ಯುವಿ ವಿಜಯ್ ದೇವರಕೊಂಡರ ಕಾರುಗಳಲ್ಲಿ ಸೇರಿದೆ

ಇದಲ್ಲದೆ ಇವರು  ಹೆಚ್ಚು ಬೇಡಿಕೆಯಿರುವ ವಾಹನಗಳಲ್ಲಿ ಒಂದಾದ  ರೇಂಜ್ ರೋವರ್ ಕಾರಿನ ಮಾಲೀಕ ಕೂಡ ಹೌದು  ವರದಿಗಳ ಪ್ರಕಾರ ಸುಮಾರು 65 ಲಕ್ಷ ಬೆಲೆ. 

ವಿಜಯ್  ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ರಿಯಲ್ ಎಸ್ಟೇಟ್ ಆಸ್ತಿಯ ಅಂದಾಜು ಮೌಲ್ಯ ಸುಮಾರು 15 ಕೋಟಿ ರೂ. ಅರಮನೆ ಶೈಲಿಯರುವ ಈ ಮನೆ ವೆಚ್ಚವು  ರೂ. 15-20 ಕೋಟಿ.

ದೇವರಕೊಂಡರ ಒಟ್ಟು ನಿವ್ವಳ ಮೌಲ್ಯವು 7 ಮಿಲಿಯನ್ ಯುಎಸ್‌ಡಿ ಎಂದು ಅಂದಾಜಿಸಲಾಗಿದೆ, ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 55 ಕೋಟಿ ರೂ.ಗಳಿಗೆ ಸಮಾನ.
 

ಹಲವಾರು ದುಬಾರಿ ಕಾರುಗಳಲ್ಲದೆ ಭವ್ಯ ಮತ್ತು ಐಷಾರಾಮಿ ಬಂಗಲೆ ಹೊಂದಿದ್ದಾರೆ. ಅದಲ್ಲದೆ  ದೇವರಕೊಂಡ ಅವರು ಅವರದೇ ಆದ ಖಾಸಗಿ ಜೆಟ್‌ಗಳನ್ನು ಸಹ ಹೊಂದಿದ್ದಾರೆ.

ವಿಜಯ್ ದೇವರಕೊಂಡ ಒಬ್ಬ ನಟ  ಮಾತ್ರವಲ್ಲದೆ ಉದ್ಯಮಿ ಕೂಡ. ಅವರು ರೌಡಿ ಕ್ಲಬ್‌ನ ಕ್ಲೋಡಿಂಗ್ ಲೈನ್ ಮಾಲೀಕರಾಗಿದ್ದಾರೆ ಮತ್ತು 
ವಿಜಯ್  ಜಾಹೀರಾತುಗಳ ಮೂಲಕ ಭಾರಿ ಗಳಿಸುತ್ತಾರೆ.

ಬ್ರಾಂಡ್ ಅನುಮೋದನೆಗಾಗಿ ಅವರು ದೊಡ್ಡ ಮೊತ್ತವನ್ನು ತೆಗೆದುಕೊಳ್ಳುತ್ತಾರೆ. ನಟನಾಗಿ ಅವರ ಮಾಸಿಕ ಆದಾಯವು 1 ಕೋಟಿ ರೂ.ಗಿಂತ ಹೆಚ್ಚಿದ್ದರೆ, ಇಡೀ ವರ್ಷದ ಅವರ ಸಂಬಳ 12 ಕೋಟಿ ರೂ.

click me!