ಯಾವುದೇ ಸಮಾರಂಭ, ಅವಾರ್ಡ್ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿಗಳು ವಿಭಿನ್ನವಾಗಿ ಡ್ರೆಸಪ್ ಮಾಡಿಕೊಂಡು ಎಂಟ್ರಿ ಕೊಡುತ್ತಾರೆ. ಅದರಲ್ಲೂ ನಟಿಯರ ವಿಭಿನ್ನ ಡ್ರೆಸ್‌ಗಳು ಅಭಿಮಾನಿಗಳ ಗಮನ ಸೆಳೆಯುತ್ತದೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಫ್ಯಾಷನ್ ಈವೆಂಟ್ ನಲ್ಲಿ ಬಾಲಿವುಡ್ ನ ಅನೇಕ ನಟಿಯರು ಭಾಗಿಯಾಗಿದ್ದರು. ಅವರಲ್ಲಿ ನಟಿ ಅನನ್ಯಾ ಪಾಂಡೆ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಅನನ್ಯಾ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ.
ನಟಿ ಅನನ್ಯಾ ಪಿಂಕ್ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದರು. ಆದರೆ ಕೈಯಲ್ಲಿ ಬಕೆಟ್ ಸ್ಟೈಲ್ ಬ್ಯಾಗ್ ಹಿಡಿದು ಬಂದಿದ್ದರು. ಅನನ್ಯಾ ಕೈಯಲ್ಲಿ ಬಕೆಟ್ ಬ್ಯಾಗ್ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
ಕಾರ್ಯಕ್ರಮಕ್ಕೆ ದಾಲ್ ಬಡಿಸಲು ಬಂದಿದ್ದೀರಾ, ಇಷ್ಟು ದೊಡ್ಡ ಸಮಾರಂಭಕ್ಕೆ ಬಕೆಟ್ ಹಿಡಿದು ಬರೋದಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅನನ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅನನ್ಯಾ ಪಾಂಡೆ ತನ್ನ ಫ್ಯಾಷನ್ ಸೆನ್ಸ್‌ನಿಂದನೇ ಸದಾ ಗಮನ ಸೆಳೆಯುತ್ತಿದ್ದಾರೆ. ಸಿನಿಮಾರಂಗದಲ್ಲಿ ದೊಡ್ಡ ಹಿಟ್ ಕಾಣದಿದ್ದರೂ ಅನನ್ಯಾ ಸದಾ ಸುದ್ದಿಯಲ್ಲಿರುತ್ತಾರೆ.
ಅನನ್ಯಾ ಸದಾ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಹಾಟ್ ಫೋಟೋ ಶೇರ್ ಮಾಡುತ್ತಿರುತ್ತಾರೆ. ಎಷ್ಟೇ ಟ್ರೋಲ್ ಆದರೂ ತಲೆಕೆಡಿಸಿಕೊಳ್ಳದ ಅನನ್ಯಾ ಫೋಟೋಶೂಟ್ ಮಾಡಿಸಿ ಹರಿಬಿಡುತ್ತಾರೆ.
ಅನನ್ಯಾ ಪಾಂಡೆ ಸದ್ಯ ಖೋ ಗಯೇ ಹಮ್ ಕಹಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಫರ್ಹಾನ್ ಅಖ್ತರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಯುಷ್ಮಾನ್ ಖುರಾನಾ ಜೊತೆ ನಟಿಸಿರುವ ಡ್ರೀಮ್ ಗರ್ಲ್ 2 ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಕಂಟ್ರೋಲ್ ಸಿನಿಮಾ ಕೂಡ ಅವರ ಕೈಯಲ್ಲಿದೆ.