ಫಸ್ಟ್ ಲುಕ್ ಬಿಡುಗಡೆ ವೇಳೆ ರಶ್ಮಿಕಾ, "ನಾನು ಯಾವಾಗಲೂ ಹೊಸತು, ವಿಭಿನ್ನ, ಆಸಕ್ತಿದಾಯಕ ಏನನ್ನಾದರೂ ಕೊಡಲು ಪ್ರಯತ್ನಿಸುತ್ತೇನೆ. ಮೈಸಾ ಅಂತಹದ್ದೇ ಒಂದು ಪ್ರಯೋಗ. ನಾನು ಹಿಂದೆಂದೂ ಮಾಡದ ಪಾತ್ರ, ಹೊಸ ಲೋಕಕ್ಕೆ ಕರೆದೊಯ್ದಿದೆ. ನನ್ನಲ್ಲಿ ನಾನೇ ನೋಡದ ಹೊಸ ರೂಪ ಕಂಡುಕೊಂಡೆ. ಇದು ಬಲಿಷ್ಠ, ತೀವ್ರ, ವಾಸ್ತವಿಕ. ನರ್ವಸ್ ಆಗಿದ್ದರೂ ಉತ್ಸುಕಳಾಗಿದ್ದೇನೆ" ಅಂದಿದ್ದಾರೆ.