ಬಾಲಿವುಟ್ ಸೆಲೆಬ್ರೆಟಿಗಳಾದ ಸನ್ನಿ ಲಿಯೋನ್ ಹಾಗೂ ಇಮ್ರಾನ್ ಹಶ್ಮಿ ಸತಿ ಪತಿಗಳಲ್ಲ. ಆದರೆ ಇವರಿಬ್ಬರಿಗೆ ಬಿಹಾರದಲ್ಲಿ ಮಗನಿದ್ದನಾ? ಇಂತದೊದ್ದು ಚರ್ಚ ಶುರುವಾಗಿದೆ. ಇದಕ್ಕೆ ಕಾರಣ ಬಿಹಾರದ 20 ವರ್ಷದ ವಿದ್ಯಾರ್ಥಿಯ ರೋಚಕ ಘಟನೆ. ಏನಿದು ಘಟನೆ, ಈ ವಿದ್ಯಾರ್ಥಿಗೂ ಬಾಲಿವುಡ್ ಸೆಲೆಬ್ರೆಟಿಗೂ ಏನು ಸಂಬಂಧ?
25
ವಿದ್ಯಾರ್ಥಿಯ ದಾಖಲಾತಿ
ಭೀಮ್ ರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದಲ್ಲಿ ಮೀನಾಪುರ ಬ್ಲಾಕ್ ಜಿಲ್ಲೆಯ ಧನರಾಜ್ ಮಹ್ತೋ ಪದವಿ ಕಾಲೇಜಿನ ವಿದ್ಯಾರ್ಥಿ ಕುಂದನ್ ಕುಮಾರ್ ತನ್ನ ತಂದೆ ಹಾಗೂ ತಾಯಿ ಇಮ್ರಾನ್ ಹಶ್ಮಿ ಹಾಗೂ ಸನ್ನಿ ಲಿಯೋನ್ ಎಂದು ಉಲ್ಲೇಖಿಸಿದ್ದಾನೆ. ತನ್ನ ಪ್ರವೇಶ ಪತ್ರದಲ್ಲಿ ಪೋಷಕರ ಹೆಸರು ಬರೆಯಬೇಕು, ಇಲ್ಲಿ ಇಮ್ರಾನ್ ಹಶ್ಮಿ ಹಾಗೂ ಸನ್ನಿ ಲಿಯೋನ್ ಹೆಸರು ಬರೆದಿದ್ದಾನೆ.
35
ಅಚ್ಚರಿಗೊಂಡ ಕಾಲೇಜು
ವಿದ್ಯಾರ್ಥಿದ ಪ್ರವೇಶ ಪತ್ರ ನೋಡಿದ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಿಗೆ ಅಚ್ಚರಿಯಾಗಿದೆ. ಒಂದು ಕ್ಷಣ ದಂಗಾಗಿದ್ದಾರೆ. ಇದರ ಬೆನ್ನಲ್ಲೇ ವಿದ್ಯಾರ್ಥಿಯ ಇತರ ಮಾಹಿತಿ ಕಲೆ ಹಾಕಲು ಆರಂಭಿಸಿದ್ದಾರೆ. ಅಷ್ಟರಲ್ಲೇ ಈ ಮಾಹಿತಿ ಸೋಶಿಯಲ್ ಮೀಡಿಯಾ ಮೂಲಕ ಭಾರಿ ಸದ್ದು ಮಾಡಲು ಆರಂಭಿಸಿದೆ.
45
ಇಮ್ರಾನ್ ಹಶ್ಮಿಗೆ ತಲುಪಿದ ಸುದ್ದಿ
ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಈ ಸುದ್ದಿ ಇಮ್ರಾನ್ ಹಶ್ಮಿಗೂ ತಲುಪಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಇಮ್ರಾನ್ ಹಶ್ಮಿ ತಮಾಷೆಯಾಗಿ ಕಮೆಂಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
55
ನಾನನವನಲ್ಲ
ನಾನು ಪ್ರಮಾಣ ಮಾಡಿ ಹೇಳುತ್ತೇನೆ, ನನ್ನವನ್ನಲ್ಲ ಎಂದು ಇಮ್ರಾನ್ ಹಶ್ಮಿ ಕಮೆಂಟ್ ಮಾಡಿದ್ದಾರೆ. ಇಮ್ರಾನ್ ಹಶ್ಮಿ ಕಮೆಂಟ್ ಬಳಿಕ ಇದೀಗ ಸನ್ನಿ ಲಿಯೋನ್ ಟ್ಯಾಗ್ ಮಾಡಿ ಪ್ರಶ್ನೆ ಕೇಳುತ್ತಿದ್ದಾರೆ.