ಸಲ್ಮಾನ್ ಖಾನ್ - ವಿಕ್ಕಿ ಕೌಶಲ್: ಕತ್ರಿನಾ ಕೈಫ್ ಡೇಟ್‌ ಮಾಡಿದ ನಟರು!

Suvarna News   | Asianet News
Published : Aug 14, 2021, 09:06 AM IST

ಈ ದಿನಗಳಲ್ಲಿ  ಕತ್ರಿನಾ ಕೈಫ್  ಉರಿ ನಟ ವಿಕ್ಕಿ ಕೌಶಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅಲ್ಲದೇ ಇವರಿಬ್ಬರು ಶೀಘ್ರವೇ ಹಸೆಮಣೆ ಏರಲಿದ್ದಾರೆಂಬ ಗಾಸಿಪ್ಪೂ ಉಂಟು. ಆದರೂ ಇಲ್ಲಿವರೆಗೂ ಈ ಜೋಡಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ. ಕತ್ರೀನಾರ ಹೆಸರು ಲಿಂಕ್‌ ಆಗಿರುವುದು ಇದೇ ಮೊದಲಲ್ಲ. ಕತ್ರೀನಾರ ಲವ್‌ ಲೈಫ್‌ ವಿವರ ಇಲ್ಲಿದೆ. 

PREV
111
ಸಲ್ಮಾನ್ ಖಾನ್ - ವಿಕ್ಕಿ ಕೌಶಲ್: ಕತ್ರಿನಾ ಕೈಫ್ ಡೇಟ್‌ ಮಾಡಿದ ನಟರು!

ಕೈಫ್‌ ಬೋಲ್ಡ್‌ ಹಾಗೂ ಫ್ರೆಂಡ್ಲಿ ಸ್ವಭಾವಕ್ಕೆ ಹೆಸರುವಾಸಿಯಾಗಿರುವ ಕತ್ರೀನಾ ಇದಕ್ಕೂ ಮೊದಲು ಕೋ ಸ್ಟಾರ್‌ಗಳ ಡೇಟ್‌ ಮಾಡುತ್ತಿದ್ದ ವರದಿಗಳು ಕಾಣಿಸಿಕೊಂಡಿವೆ. ಕತ್ರೀನಾ ಡೇಟ್ ಮಾಡುತ್ತಿದ್ದ ಬಾಲಿವುಡ್‌ ಸ್ಟಾರ್ಸ್‌ ವಿವರ ಇಲ್ಲಿದೆ.

211

ಪ್ರಸ್ತುತ ಕತ್ರೀನಾ  ನಟ ವಿಕ್ಕಿ ಕೌಶಲ್‌ ಜೊತೆ ಡೇಟ್‌ ಮಾಡುತ್ತಿರುವ ಸುದ್ದಿಯಿದೆ. ಆದರೆ ಇದಕ್ಕೂ ಮೊದಲು ಇವರ ಹೆಸರು ಅಕ್ಷಯ್‌ ಕುಮಾರ್‌, ರಣಬೀರ್‌ ಕಪೂರ್‌‌, ಸಲ್ಮಾನ್‌ ಖಾನ್‌ ಹಾಗೂ ಸಿದ್ಧಾರ್ಥ್‌ ಮಲ್ಯ ಜೊತೆ ಲಿಂಕ್‌ ಆಗಿ ಸಕ್ಕತ್‌ ಸುದ್ದಿಯಾಗಿತ್ತು. 

311

ಸಲ್ಮಾನ್ ಖಾನ್: 
ಕತ್ರಿನಾ ಮತ್ತು ಖಾನ್ ಸಂಬಂಧ ಇಂದಿಗೂ ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ತೆರೆಯ ಮೇಲೆ ಇಬ್ಬರ ಕೆಮಸ್ಟ್ರಿಗೆ ಫ್ಯಾನ್ಸ್ ಪುಲ್‌ ಫಿದಾ ಆಗಿದ್ದಾರೆ. ಈ ಜೋಡಿ  ಟೈಗರ್, ಟೈಗರ್ ಜಿಂದಾ ಹೈ, ಭರತ್, ಮೈನೆ ಪ್ಯಾರ್ ಕ್ಯುನ್ ಕಿಯಾ ಮುಂತಾದ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. 

411

ಬಾಲಿವುಡ್‌ನಲ್ಲಿ ಕತ್ರೀನಾ ನೆಲೆಕಂಡುಕೊಳ್ಳುವಲ್ಲಿ ಸಲ್ಮಾನ್‌ ಸಹಾಯ ಮಾಡಿದ್ದರು. ಕೈಫ್‌ ಕೆರಿಯರ್‌ ಬೆಳೆಯಲು ಖಾನ್‌ ತುಂಬಾ ಸಪೋರ್ಟ್ ಮಾಡಿದ್ದಾರೆ. ವರದಿಗಳ ಪ್ರಕಾರ, ಕ್ಯಾಟ್ ಮತ್ತು ಸಲ್ಲು 2005 ರಿಂದ ಡೇಟ್ ಮಾಡುತ್ತಿದ್ದರು. ಆದರೆ ಕತ್ರಿನಾ ರಣಬೀರ್ ಕಪೂರ್‌ಗಾಗಿ ಸಲ್ಮಾನ್‌ ಖಾನ್‌ಗೆ ಗುಡ್‌ ಬೈ ಹೇಳಿದರು.  

511

ರಣಬೀರ್ ಕಪೂರ್: 
ಕತ್ರಿನಾ ಮತ್ತು ಕಪೂರ್ ರಿಲೆಷನ್‌ಶಿಪ್‌ ಇಂದಿಗೂ ಬಿಟೌನ್‌ನಲ್ಲಿ ಚರ್ಚೆಯ ವಿಷಯ. ಹಲವು ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ಈ ಜೋಡಿ ದೂರವಾದರು. ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಕಪಲ್‌ ಲೀವ್‌ ಇನ್‌ ರಿಲೆಷನ್‌ಶಿಪ್‌‌ನಲ್ಲಿದ್ದರು. 

611

ಕತ್ರೀನಾ ಮತ್ತು ರಣಬೀರ್‌ ಮದುವೆಯಾಗಲು ಸಹ  ಯೋಜಿಸುತ್ತಿದ್ದರು, ಎಂದು ವರದಿಗಳು ಹೇಳುತ್ತವೆ .ಆದರೆ ನಂತರ ಎಲ್ಲವೂ ಬದಲಾಯಿತು. ರಣಬೀರ್  ಪ್ಲೇಬಾಯ್ ಸ್ವಭಾವ ಇವರ ಬ್ರೇಕಪ್‌ ಹಿಂದಿನ ಕಾರಣವೆಂದು ಉಲ್ಲೇಖಿಸಲಾಗಿದೆ.
 


 

711

ಅಕ್ಷಯ್ ಕುಮಾರ್:
ಕತ್ರಿನಾ ಕೈಫ್ ಮತ್ತು ಕುಮಾರ್ ಲಿಂಕ್ ಅಪ್ ರೂಮರ್‌ಗಳನ್ನು ವಿವಿಧ ಸಂದರ್ಭಗಳಲ್ಲಿ ಹೈಲೈಟ್ ಮಾಡಲಾಗಿದೆ. ಈಗಾಗಲೇ ಟ್ವಿಂಕಲ್ ಖನ್ನಾ ಅವರನ್ನು ವಿವಾಹವಾಗಿದ್ದರು ಸಹ ಅಕ್ಷಯ್ ಕುಮಾರ್‌ ನಟಿಯನ್ನು ಇಷ್ಟಪಟ್ಟರು ಎನ್ನಲಾಗಿದೆ. 

811

ಈ ಜೋಡಿ  ಸಿಂಗ್ ಈಸ್ ಕಿಂಗ್, ನಮಸ್ತೇ ಲಂಡನ್, ದೇ ದಾನಾ ಡಾನ್, ವೆಲ್ ಕಮ್ ಮೊದಲಾದ ಕೆಲವು ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಅವರ ಲಿಂಕ್ ರೂಮರ್‌ಗಳನ್ನು ನಟರಿಬ್ಬರು ತಳ್ಳಿ ಹಾಕಿದ್ದಾರೆ. ಚಲನಚಿತ್ರ ವೃತ್ತಿ ಜೀವನದಲ್ಲಿ ಅವಳನ್ನು ಬೆಂಬಲಿಸಿ, ಮಾರ್ಗದರ್ಶನ ಮಾಡಿದ್ದಕ್ಕಾಗಿ ಅಕ್ಷಯ್ ಅವರಿಗೆ ಧನ್ಯವಾದಗಳನ್ನು ಕ್ಯಾಟ್ ತಿಳಿಸಿದ್ದಾರೆ.

911

ಸಿದ್ಧಾರ್ಥ್ ಮಲ್ಯ: 
ಕತ್ರಿನಾ ಮತ್ತು ಸಿದ್ಧಾರ್ಥ್‌ ಮಲ್ಯ ಡೇಟಿಂಗ್ ಮಾಡುತ್ತಿದ್ದರು ಎಂದು ಹಲವು ವರದಿಗಳು ಹೇಳಿವೆ. ಬೆಂಗಳೂರಿನಲ್ಲಿ ನಡೆದ ಅನೇಕ ಆರ್‌ಸಿಬಿ ಐಪಿಎಲ್ ಪಂದ್ಯಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಸಾಕ್ಷಿಗಳು ಇಲ್ಲ.
 


 

1011

ವಿಕ್ಕಿ ಕೌಶಲ್: 
ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಉರಿ  ನಟ ವಿಕಿ ಕೌಶಲ್ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರು ತಮ್ಮ ಸಂಬಂಧವನ್ನು ಮುಚ್ಚಿಟ್ಟಿಲ್ಲ. ಆದರೆ ಆದರ ಬಗ್ಗೆ ಎಲ್ಲೂ ಬಾಯಿ ಸಹ ಬಿಟ್ಟಿಲ್ಲ . ಕಳೆದ ತಿಂಗಳು ಎರಡು ಬಾರಿ, ವಿಕಿ ಕತ್ರೀನಾರ ಮನೆ ಹೊರಗೆ ಕಾಣಿಸಿಕೊಂಡಿದ್ದರು.

1111

ಸೋನಂ ಕಪೂರ್ ಸಹೋದರ ಮತ್ತು ನಟ ಹರ್ಷ ವರ್ಧನ್ ಕಪೂರ್ ಒಮ್ಮೆ ಕತ್ರಿನಾ ಮತ್ತು ವಿಕ್ಕಿಯ ಸಂಬಂಧದ ಬಗ್ಗೆ ಮಾತನಾಡಿ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ದೃಢಪಡಿಸಿದರು. ಜೂಮ್‌ನ ‘ಬೈ ಇನ್ವಿಟ್ ಓನ್ಲಿ ಸೀಸನ್ 2ನ ಹೋಸ್ಟ್ ರೆನಿಲ್ ಅಬ್ರಹಾಂ ಜೊತೆಗಿನ ಸಂಭಾಷಣೆಯಲ್ಲಿ ಈ ವಿಷಯವನ್ನು ರೀವಿಲ್‌ ಮಾಡಿದ್ದರು ಅನಿಲ್‌ ಕಪೂರ್‌ ಪುತ್ರ. 

click me!

Recommended Stories