ವಿಚ್ಛೇದನದ ನಂತರ ಇನ್ನೂ ಹತ್ತಿರವಾದ್ರಾ ಆಮೀರ್ ಖಾನ್- ಕಿರಣ್ ರಾವ್ ?

Suvarna News   | Asianet News
Published : Aug 13, 2021, 02:29 PM ISTUpdated : Aug 13, 2021, 02:48 PM IST

ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮೀರ್ ಖಾನ್ ಮತ್ತು ಕಿರಣ್ ರಾವ್ ದಂಪತಿ ಬೇರೆಯಾಗುತ್ತಿರುವ ಬಗ್ಗೆ  ಜುಲೈನಲ್ಲಿ ಅಧಿಕೃತ ಘೋಷಣೆ ಮಾಡಿದರು. ದಂಪತಿಯ 15 ವರ್ಷಗಳ ವೈವಾಹಿಕ ಜೀವನವನ್ನು ಮುರಿದುಕೊಂಡರು. ಆದರೆ ಡಿವೋರ್ಸ್‌ ನಂತರವೂ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ವಿಚ್ಛೇದನದ ನಂತರ ಇಬ್ಬರೂ ಹತ್ತಿರವಾಗಿದ್ದಾರಾ ಎಂದು ಫ್ಯಾನ್ಸ್‌ ಆಶ್ಚರ್ಯ ಪಡುತ್ತಿದ್ದಾರೆ. 

PREV
110
ವಿಚ್ಛೇದನದ ನಂತರ ಇನ್ನೂ ಹತ್ತಿರವಾದ್ರಾ ಆಮೀರ್ ಖಾನ್- ಕಿರಣ್ ರಾವ್ ?

ಇತ್ತಿಚೀಗೆ  ಹೊರ ಬಿದ್ದ  ಕೆಲವು ಫೋಟೋಗಳಿಂದ ಆಮೀರ್‌ ಮತ್ತು ಕಿರಣ್‌ ರಾವ್‌ ನಡುವಿನ ಕ್ಲೋಸ್‌ನೆಸ್‌ ಕಡಿವೆಯಾಗಿಲ್ಲ ಬದಲಾಗಿ ಹೆಚ್ಚಾಗಿರುವಂತೆ ಕಾಣುತ್ತಿದೆ. ಹೃತಿಕ ರೋಷನ್ ತಮ್ಮ ಪತ್ನಿ ಸುಸೇನ್‍‌ಗೆ ಡಿವೋರ್ಸ್ ನೀಡಿದರೂ, ಅತ್ಯುತ್ತಮ ಸ್ನೇಹಿತರಾಗಿಯೇ ಮುಂದುವರಿದಿದ್ದಾರೆ. ಅದೇ ಸಾಲಿಗೆ ಆಮೀರ್-ಕಿರಣ್ ಸೇರ್ಪಡೆಯಾದಂತೆ ಕಾಣಿಸುತ್ತದೆ. 

210

ಆಮೀರ್ ಖಾನ್  ತಮ್ಮ ಮುಂದಿನ ಸಿನಿಮಾ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣವನ್ನು ಮುಗಿಸಿ ಮಗನ ಜೊತೆ ಮುಂಬೈಗೆ ಮರಳಿದಾಗ, ಕಿರಣ್ ಅವರನ್ನು ರಿಸೀವ್‌ ಮಾಡಲು  ವಿಮಾನ ನಿಲ್ದಾಣದ ಹೊರಗೆ ಕಾಣಿಸಿಕೊಂಡರು. 

310

ಆಮೀರ್ ಖಾನ್-ಕಿರಣ್ ರಾವ್ ಮತ್ತು ಮಗ ಆಜಾದ್  ಜೊತೆಯಾಗಿರುವ  ಫೋಟೋಗಳು ಸಖತ್‌ ವೈರಲ್‌ ಆಗಿವೆ.ಆಮೀರ್ ಮತ್ತು ಮಗ ಆಜಾದ್‌ಗಾಗಿ ಕಿರಣ್ ಟರ್ಮಿನಲ್‌ನಲ್ಲಿ ಕಾಯುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದು. 

410

ವಿಮಾನ ನಿಲ್ದಾಣದಿಂದ ಹೊರಬಂದ ಆಮೀರ್-ಆಜಾದ್ ಅವರನ್ನು ನೋಡಿದ ತಕ್ಷಣ ಕಿರಣ್‌ ಅವರಿಗೆ ಕೈ ನೀಡಿದರು. ಈ ಸಮಯದಲ್ಲಿ, ಕಿರಣ್ ರಾವ್ ಟೀ ಶರ್ಟ್ ಮತ್ತು ನೀಲಿ ಜೀನ್ಸ್ ನಲ್ಲಿ ಕಾಣಿಸಿಕೊಂಡರು.   

510
610

ಕಿರಣ್ ಮಗನ ಕೈ ಹಿಡಿದ್ದಿದ್ದರೆ, ಆಮೀರ್ ಕೈಯಲ್ಲಿ ನೀಲಿ ದಿಂಬಿನೊಂದಿಗೆ ಕಾಣಿಸಿಕೊಂಡರು. ಕೆಲವು ಫೋಟೋಗಳಲ್ಲಿ, ಅವರ ಮಗ ಆಜಾದ್ ಕ್ಯಾಮರಾದ ಫ್ಲಾಶ್ ಬೆಳಕಿನಿಂದ ಕಣ್ಣು ಮುಚ್ಚಿದ್ದಾನೆ. ಒಟ್ಟಿನಲ್ಲಿ ಈ ಜೋಡಿ ಖುಷಿಯಾಗಿರೋದು ಸುಳ್ಳಲ್ಲ.

710

ಡಿವೋರ್ಸ್‌  ನಂತರವೂ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ವಿಚ್ಛೇದನದ ನಂತರ ಇಬ್ಬರೂ ಹತ್ತಿರವಾಗಿದ್ದಾರಾ ಎಂದು ಫ್ಯಾನ್ಸ್‌ ಆಶ್ಚರ್ಯ ಪಡುತ್ತಿದ್ದಾರೆ. ಲಾಲ್ ಚಡ್ಡಾ ಶೂಟಿಂಗ್‌ಗಾಗಿ ಕಾಶ್ಮೀರದಲ್ಲಿರುವ ಆಮೀರಿ ಹಾಗೂ ಕಿರಣ್‌ಗೆ ಅವರ ಪೋಷಕರೂ ಸಾಥ್ ನೀಡಿದ್ದಾರೆ. 

810

ಆಮೀರ್-ಕಿರಣ್ ತಮ್ಮ ವಿಚ್ಛೇದನವನ್ನು ಘೋಷಿಸಿದಾಗ, ಅವರು ಲಡಾಖ್‌ನಲ್ಲಿ ಲಾಲಸಿಂಗ್ ಚಡ್ಡಾ ಸಿನಿಮಾ ಶೂಟಿಂಗ್‌ನಲ್ಲಿದ್ದರು. ವಿಚ್ಛೇದನದ ನಂತರವೂ ಇಬ್ಬರು ಜೊತೆಯಾಗಿ ಕಾಲ ಕಳೆಯುತ್ತಿರುವ ಹಲವು ಫೋಟೋಗಳು ಕಾಣಿಸಿಕೊಂಡಿವೆ.

910

ಈ ಸಮಯದಲ್ಲಿ ಲಡಾಖ್‌ನ ಸ್ಥಳೀಯ ಕಲಾವಿದರೊಂದಿಗೆ ಸಾಂಪ್ರದಾಯಿಕ ಉಡುಗೆ ಧರಿಸಿ ನೃತ್ಯ ಮಾಡುತ್ತಿರುವ ಇಬ್ಬರ ವೀಡಿಯೋ ಕೂಡ ತುಂಬಾ ವೈರಲ್ ಆಗಿತ್ತು. ಅರೆ, ಡಿವೋರ್ಸ್ ಆದ್ಮೇಲೆ ಇದು ಹೇಗೆ ಸಾಧ್ಯ ಎಂಬುವುದು ನೆಟ್ಟಿಗರ

1010

ಕರೀನಾ ಕಪೂರ್‌ ನಟಿಸುತ್ತಿರುವ ಲಾಲ್‌ಸಿಂಗ್ ಚಡ್ಡಾವನ್ನು ಅಮೀರ್ ಖಾನ್, ಕಿರಣ್ ರಾವ್ ಮತ್ತು ವಯಕಾಮ್ 18 ಮೋಷನ್ ಪಿಕ್ಚರ್ಸ್ ನಿರ್ಮಿಸಿದ್ದಾರೆ. ಈ ವರ್ಷ ಕ್ರಿಸ್‌ಮಸ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
 

click me!

Recommended Stories