ವಡಿವೇಲು ಈ ದೇವಸ್ಥಾನದ ವಿಸ್ತರಣೆ ಮತ್ತು ಇತರ ಕೆಲಸಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಊರಿನ ಜನರೇ ನಿರ್ವಹಿಸುತ್ತಿರುವ ಈ ದೇವಸ್ಥಾನವನ್ನು ವಡಿವೇಲು ಅವರ ಆಪ್ತ ಮತ್ತು ಬೆಂಬಲಿಗ ಭಾಗ್ಯರಾಜ್ ಎಂಬವರು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಈಗ ಆ ಗ್ರಾಮದ ಜನರು ಆರೋಪಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಈ ದೇವಸ್ಥಾನದಲ್ಲಿ ಇಲ್ಲದ, ಈಗ ವಡಿವೇಲು ಪರಂಪರೆ ಅರೈಕಾವಲರ್ ಎಂಬ ಒಂದು ಹುದ್ದೆಯನ್ನು ಊರಿನ ಜನರ ಸಲಹೆ ಪಡೆಯದೆ ಸೃಷ್ಟಿಸಿದ್ದಾರೆ. ಮತ್ತು ಈ ಹುದ್ದೆ ಭಾಗ್ಯರಾಜ್ ಎಂಬವರಿಗೆ ನೀಡಲಾಗುವುದು ಎಂದು ಊರಿನ ಜನರು ಆರೋಪಿಸುತ್ತಿದ್ದಾರೆ.
ಯಾರನ್ನೂ ಚರ್ಚಿಸದೆ ವಡಿವೇಲು ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಆ ಊರಿನ ಜನರು ಈಗ ವಿರೋಧ ವ್ಯಕ್ತಪಡಿಸಿದ್ದಾರೆ. ಈ ದೇವಸ್ಥಾನದ ಹುದ್ದೆಗಳಿಗೆ ಹೊಸ ವ್ಯಕ್ತಿಗಳನ್ನು ವಡಿವೇಲು ಅವರೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಾರ ಈಗ ಸ್ಥಳೀಯವಾಗಿ ಭಾರೀ ಸಂಚಲನ ಮೂಡಿಸಿದೆ.