ಶಾರೂಖ್ ಪುತ್ರ ಆರ್ಯನ್ ಖಾನ್‌ನ ಗರ್ಲ್‌ಫ್ರೆಂಡ್ ಸಿಕ್ಕಾಪಟ್ಟೆ ಹಾಟ್!

First Published | Apr 2, 2024, 3:14 PM IST

ಶಾರುಖ್ ಖಾನ್ ಅವರ ಹಿರಿಯ ಮಗ ಆರ್ಯನ್ ಖಾನ್ ಬಾಲಿವುಡ್‌ನಲ್ಲಿ ಕೆರಿಯರ್ ಶುರು ಮಾಡುವ ಮುನ್ನವೇ ಸದಾ ಸುದ್ದಿಯಲ್ಲಿರುತ್ತಾನೆ. ಈತನ ಗರ್ಲ್‌ಫ್ರೆಂಡ್ ಬಗ್ಗೆ ಆಗಾಗ್ಗೆ ಗಾಸಿಪ್ ಹರಿದಾಡ್ತಿರುತ್ತೆ. ಈತನ ಸದ್ಯದ ಗರ್ಲ್‌ಫ್ರೆಂಡ್ ಯಾರು?

ಶಾರುಖ್ ಖಾನ್ ಅವರ ಹಿರಿಯ ಮಗ ಆರ್ಯನ್ ಖಾನ್ ಬಾಲಿವುಡ್‌ನಲ್ಲಿ ಕೆರಿಯರ್ ಶುರು ಮಾಡುವ ಮುನ್ನವೇ ಸದಾ ಸುದ್ದಿಯಲ್ಲಿರುತ್ತಾನೆ. ಈತನ ಗರ್ಲ್‌ಫ್ರೆಂಡ್ ಬಗ್ಗೆ ಆಗಾಗ್ಗೆ ಗಾಸಿಪ್ ಹರಿದಾಡ್ತಿರುತ್ತೆ. 

ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಜೊತೆ ಈ ಹಿಂದೆ ಹೆಸರು ಕೇಳಿ ಬರುತ್ತಿತ್ತು. ಅದಕ್ಕೂ ಮುನ್ನ ನೋರಾ ಫತೇಹಿ, ಪಾಲಕ್ ತಿವಾರಿ, ಎಲ್ನಾಜ್, ಸಾದಿಯಾ ಖಾನ್ ಮುಂತಾದವರೊಂದಿಗೆ ಡೇಟಿಂಗ್ ನಡೆಸುತ್ತಿದ್ದ. 

Tap to resize

ಆದರೆ, ಈಗ ಹೊಸ ವರ್ಷದಲ್ಲಿ ಆರ್ಯನ್ ಖಾನ್ ಹಳೆಯ ಗರ್ಲ್‌ಫ್ರೆಂಡ್‌ಗಳಿಗೆಲ್ಲ ಬೈಬೈ ಹೇಳಿ ಇಂಟರ್‌ನ್ಯಾಶನಲ್ ಮಾಡೆಲ್ ಬ್ರೆಜಿಲ್‌ನ ನಟಿ-ರೂಪದರ್ಶಿ ಲಾರಿಸ್ಸಾ ಬೊನೆಸಿ ಜೊತೆ ಡೇಟಿಂಗ್ ನಡೆಸುತ್ತಿದ್ದಾನೆ ಎನ್ನಲಾಗಿದೆ. 

ಯಾರಪ್ಪಾ ಈಕೆ, ಇವಳಿಗೂ ಬಾಲಿವುಡ್‌ಗೂ ಎಲ್ಲಿಯ ಲಿಂಕ್ ಎಂದು ನೋಡಿದ್ರೆ ಈಕೆ ಬಾಲಿವುಡ್ ಚಿತ್ರಗಳಲ್ಲಿ ಸೈಫ್ ಅಲಿ ಖಾನ್ ಅವರೊಂದಿಗೆ 'ಗೋ ಗೋವಾ ಗಾನ್' ಮತ್ತು ಅಕ್ಷಯ್ ಕುಮಾರ್ ಮತ್ತು ಜಾನ್ ಅಬ್ರಹಾಂ 'ದೇಸಿ ಬಾಯ್ಜ್' ನಲ್ಲಿ ಕೆಲಸ ಮಾಡಿದ್ದಾಳೆ.

ಇದಲ್ಲದೆ, ಅವಳು ಟೈಗರ್ ಶ್ರಾಫ್ ಮತ್ತು ಸೂರಜ್ ಪಾಂಚೋಲಿ ಜೊತೆ ಕೆಲವು ಮ್ಯೂಸಿಕ್ ವಿಡಿಯೋ ಆಲ್ಬಂಗಳನ್ನು ಸಹ ಮಾಡಿದ್ದಾಳೆ.

ಆಕೆ ಟಾಲಿವುಡ್‌ನಲ್ಲಿ ಕೂಡಾ 'ನೆಕ್ಸ್ಟ್ ಅನ್ನಿ' ಮತ್ತು 'ತಿಕ್ಕ' ಚಿತ್ರಗಳಲ್ಲಿ ಕೆಲಸ ಮಾಡಿದ್ದಾಳೆ. ನಟನೆ ಹೊರತಾಗಿ ಈಕೆ ಉತ್ತಮ ಡ್ಯಾನ್ಸರ್ ಕೂಡಾ ಹೌದು. 

ಸಧ್ಯ ಆರ್ಯನ್ ಖಾನ್ ಗರ್ಲ್‌ಫ್ರೆಂಡ್ ಎಂದು ಸುದ್ದಿಯಲ್ಲಿರುವ ಲಾರಿಸ್ಸಾ, ಹಲವು ಬಾರಿ ಆತನೊಂದಿಗೆ ಡೇಟಿಂಗ್ ನಡೆಸುವಾಗ ಪಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದಾಳೆ. 

ಆರ್ಯನ್ ಖಾನ್ ಮತ್ತು ಲಾರಿಸ್ಸಾ ಬೊನೆಸಿ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರನ್ನೊಬ್ಬರು ಅನುಸರಿಸುತ್ತಾರೆ ಅಷ್ಟೇ ಅಲ್ಲ, ಪರಸ್ಪರರ ಕುಟುಂಬ ಸದಸ್ಯರನ್ನು ಸಹ ಅನುಸರಿಸುತ್ತಾರೆ.

ಇನ್ನು ಲಾರಿಸ್ಸಾ ಬೊನೆಸಿ, ಆರ್ಯನ್ ಖಾನ್ ಆರಂಭಿಸಿರುವ ಉಡುಪು ಬ್ರಾಂಡ್ ಡಿ'ಯಾವೊಲ್ ಎಕ್ಸ್‌ಗೆ ಮಾಡೆಲ್ ಕೂಡಾ ಆಗಿದ್ದಾಳೆ.  

34 ವರ್ಷದ ಲಾರಿಸ್ಸಾ 26 ವರ್ಷದ ಶಾರೂಖ್ ಪುತ್ರ ಆರ್ಯನ್ ಜೊತೆ ಎಷ್ಟು ಕಾಲ ಸಂಬಂಧದಲ್ಲಿ ಮುಂದುವರಿಯುವರೆಂಬುದನ್ನು ಕಾದು ನೋಡಬೇಕಿದೆ. 

Latest Videos

click me!