ಅಬ್ಬಬ್ಬಾ, ಒಬ್ರಿಗಿಂತ ಒಬ್ರು ಚೆಂದ.. ಇವ್ರೇ ನೋಡಿ ಸ್ಟೈಲಿಶ್ ಆ್ಯಂಡ್ ಬ್ಯೂಟಿಫುಲ್ ಉರ್ಫಿ ಸೋದರಿಯರು

First Published | Mar 27, 2024, 4:54 PM IST

ಉರ್ಫಿ ಜಾವೇದ್ ಬಗ್ಗೆ ತಿಳಿಯದವರು ಯಾರಿಲ್ಲ.. ಆದ್ರೆ ಉರ್ಫಿಗೆ ಆಕೆಯಂತೇ ಚೆಂದದ, ಆಕೆಯಂತೇ ಸ್ಟೈಲಿಶ್ ಆಗಿರೋ ಮೂವರು ಸಹೋದರಿಯರಿದ್ದು ಇವ್ರೆಲ್ಲ ಏನ್ ಮಾಡ್ಕೊಂಡಿದಾರೆ ಗೊತ್ತಾ?

ಇದೋ ನೋಡಿ ಉರ್ಫಿ ಜಾವೇದ್ ಕುಟುಂಬ. ಇವರ ಮನೆಯೊಳಗೇ ಸೌಂದರ್ಯ ಸ್ಪರ್ಧೆ ಏರ್ಪಡಿಸಬಹುದು.. ಉರ್ಫಿ ತಾಯಿಯಿಂದ ಹಿಡಿದು ಸೋದರಿಯರೆಲ್ಲರೂ ಸಖತ್ ಸುಂದರಿಯರೇ

ಸದಾ ಚಿತ್ರವಿಚಿತ್ರ ಉಡುಗೆಗಳಿಂದ ಗಮನ ಸೆಳೆಯುವ ಉರ್ಫಿ ಜಾವೇದ್‌ಗೆ ತಾಯಿ ಜೊತೆ ಮೂವರು ಸಹೋದರಿಯರು ಮತ್ತು ಓರ್ವ ತಮ್ಮ ಇದ್ದಾನೆ. 

Tap to resize

ಹಿರಿಯ ಸಹೋದರಿ ಉರುಸಾ ಜಾವೇದ್ ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ.

ಅವರು Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಉರುಸಾ ಅವರ ಇನ್‌ಸ್ಟಾ ಖಾತೆಯು ಅವರ ಸುಂದರವಾದ ಮತ್ತು ಆಕರ್ಷಕ ಚಿತ್ರಗಳು ಮತ್ತು ವೀಡಿಯೊಗಳಿಂದ ತುಂಬಿದೆ. ಅವರು Instagram ನಲ್ಲಿ 1.3 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. 

ಉರ್ಫಿ ಜಾವೇದ್ ಅವರ ಎರಡನೇ ಸಹೋದರಿಯ ಹೆಸರು ಅಸ್ಫಿ ಜಾವೇದ್. ಇಷ್ಟು ಮುದ್ದಾದ ನಗು ಹೊಂದಿರುವ ಆಸ್ಫಿ ಇನ್‌ಸ್ಟಾಗ್ರಾಮ್‌ನಲ್ಲೂ ಸಕ್ರಿಯರಾಗಿದ್ದಾರೆ.

ಅವರು ವೃತ್ತಿಯಲ್ಲಿ ಬ್ಲಾಗರ್ ಆಗಿದ್ದಾರೆ ಮತ್ತು ಸಾಕಷ್ಟು ಸ್ಟೈಲಿಶ್ ಆಗಿದ್ದಾರೆ. ಅಸ್ಫಿಯು ಉರ್ಫಿಯಂತೆ ತುಂಬಾ ಮುದ್ದಾಗಿ ಮತ್ತು ಸುಂದರವಾಗಿದ್ದಾರೆ. ಅವರು Instagram ನಲ್ಲಿ 192k ಅನುಯಾಯಿಗಳನ್ನು ಹೊಂದಿದ್ದಾರೆ.

ಕಂಟೆಂಟ್ ಕ್ರಿಯೇಟರ್ ಹಾಗೂ ಸೋಷ್ಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಡಾಲಿ ಜಾವೇದ್ ಉರ್ಫಿಯ ಮೂರನೇ ಸಹೋದರಿ. (ಈಕೆ ತೊಟ್ಟ ಈ ಡ್ರೆಸ್ ಉರ್ಫಿ ಧರಿಸಿದ್ದು ನೆನಪಿದೆಯೇ?)

ಉರ್ಫಿಗೆ ಸ್ಟೈಲ್ ಹಾಗೂ ಉಡುಗೆಗಳಲ್ಲಿ ಸ್ಪರ್ಧೆ ನೀಡುವ ಈಕೆ ಇನ್ಸ್ಟಾದಲ್ಲಿ 1.1 ಲಕ್ಷ ಬೆಂಬಲಿಗರನ್ನು ಹೊಂದಿದ್ದಾಳೆ ಮತ್ತು ತಾಯಿಯೊಂದಿಗೆ ಹೆಚ್ಚಿನ ರೀಲ್ಸ್ ಮಾಡಿ ಹಾಕುತ್ತಾಳೆ. 

ಉರ್ಫಿ ಜಾವೇದ್‌ಗೆ ಒಬ್ಬ ಸಹೋದರನಿದ್ದಾನೆ, ಅವರ ಹೆಸರು ಸಲೀಮ್. ಚಿತ್ರಗಳನ್ನು ನೋಡಿದರೆ ಸಲೀಂ ತಂಗಿಯರೆಲ್ಲರ ಅಚ್ಚುಮೆಚ್ಚಿನಂತಿದ್ದಾನೆ.

ಈ ಎಲ್ಲ ಸೌಂದರ್ಯವತಿಯರ ಹಿಂದಿನ ರಹಸ್ಯ ಏನೆಂದು ಅವರ ತಾಯಿಯನ್ನು ನೋಡಿದರೆ ತಿಳಿಯುತ್ತದೆ. ಉರ್ಫಿಯ ತಾಯಿ ಕೂಡಾ ಮಕ್ಕಳ ಜೊತೆ ರೀಲ್ಸ್ ಮಾಡುತ್ತಾರೆ. 

Latest Videos

click me!