ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡ ಉರ್ಫಿ ಜಾವೇದ್ ಟ್ರೋಲ್‌, ಕಾರಣ ಅದಲ್ಲ

Published : Mar 09, 2025, 10:00 PM ISTUpdated : Mar 09, 2025, 11:06 PM IST

ಫಿಲ್ಮ್ ಫೆಸ್ಟಿವಲ್‌ನಲ್ಲಿ ಉರ್ಫಿ ಜಾವೇದ್ ತಮ್ಮ ವಿಶೇಷ ಫ್ಯಾಶನ್ ಮೂಲಕ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಉರ್ಫಿಯನ್ನು ಟ್ರೋಲ್ ಮಾಡುತ್ತಿದ್ದಾರೆ.  ಉರ್ಫಿ ಟ್ರೋಲ್‌ಗೆ ಕಾರಣವೇನು? 

PREV
15
ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡ ಉರ್ಫಿ ಜಾವೇದ್ ಟ್ರೋಲ್‌, ಕಾರಣ ಅದಲ್ಲ

ಜೈಪುರದಲ್ಲಿ ನಡೆಯುತ್ದಿರುವ ಅಂತಾರಾಷ್ಟ್ರೀಯ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ಕಮ್ ಮಾಡೆಲ್ ಉರ್ಫಿ ಜಾವೇದ್ ಕಾಣಿಸಿಕೊಂಡಿದ್ದಾರೆ.  ಉರ್ಫಿ ಜಾವೇದ್ ಶನಿವಾರ ರಾತ್ರಿ ಜೈಪುರದಲ್ಲಿ IIFA 2025ರ ಗ್ರೀನ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರು. ಉರ್ಫಿಯ ವಿಶೇಷ ಉಡುಗೆ ಗಮನಸೆಳೆದಿದೆ. 

25

ಉರ್ಫಿ ಜಾವೇದ್ IIFA 2025ರಿಂದ ತಮ್ಮ ಅಪಿಯರೆನ್ಸ್‌ನ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆದರೆ ಅಷ್ಟೇ ವೇಗದಲ್ಲಿ ಉರ್ಫಿ ಟ್ರೋಲ್ ಆಗಿದ್ದಾರೆ. ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ ಉರ್ಫಿ ವಿಶೇಷ ಥೀಮ್ ಉಡುಪು ಧರಿಸಿ ಹಾಜರಾಗಿದ್ದರು. 

35

ಉರ್ಫಿ ತಮ್ಮ ಫೋಟೋಗಳ ಕ್ಯಾಪ್ಷನ್‌ನಲ್ಲಿ, 'ಕಳೆದ ರಾತ್ರಿ IIFAದ 25ನೇ ಆನಿವರ್ಸರಿಯಲ್ಲಿ ನಮ್ಮ ಶೋ ನಾಮಿನೇಟ್ ಆಗಿತ್ತು' ಅಂತ ಬರೆದಿದ್ದಾರೆ. IFAದಲ್ಲಿ ನಾನು ಹಾಕೊಂಡಿದ್ದ ಬ್ಲ್ಯಾಕ್ ಡ್ರೆಸ್ ಡಿಸೈನರ್ ರಾಹುಲ್ ಮಿಶ್ರಾ ಡಿಸೈನ್ ಮಾಡಿದ್ದು ಅಂತ ಉರ್ಫಿ ಹೇಳಿದ್ದಾರೆ.

45

IIFAದಲ್ಲಿ ಉರ್ಫಿ ಜಾವೇದ್ ಕರೀನಾ ಕಪೂರ್‌ನ ಭೇಟಿಯಾಗಿದ್ದಾರೆ. ಹಲವು ಸೆಲೆಬ್ರೆಟಿಗಳನ್ನು ಉರ್ಫಿ ಭೇಟಿಯಾಗಿದ್ದಾರೆ. ಆರಂಭದಲ್ಲಿ ಉರ್ಫಿ ಫ್ಯಾಶನ್ ಬಗ್ಗೆ ಮಾರುದ್ದ ದೂರ ಹೋಗುತ್ತಿದ್ದ ಸೆಲೆಬ್ರೆಟಿಗಳು ಇದೀಗ ಉರ್ಫಿ ಫ್ಯಾಶನ್ ಸೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

55

ಉರ್ಫಿ ಜಾವೇದ್ ಅವರ ವೈರಲ್ ಫೋಟೋಗಳನ್ನ ನೋಡಿದ ಮೇಲೆ ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ.  ಫಿಲ್ಮ್ ಅಕಾಡೆಮಿ ಅವಾರ್ಡ್ ಕಾರ್ಯಕ್ರಮಕ್ಕೂ ಉರ್ಫಿ ಬಂದಿದ್ದಾರೆ. ಇನ್ನು ಸಿನಿಮಾ ಸೆಲೆಬ್ರೆಟಿಗಳು ಫ್ಯಾಶನ್ ಮರೆತು ಬಿಡುತ್ತಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಉರ್ಫಿ ಸೋಶಿಯಲ್ ಮೀಡಿಯಾದಲ್ಲೇ ವಿಡಿಯೋ ಹಾಕಿದರೆ ಚಂದ, ಕಾರ್ಯಕ್ರಮ ಉರ್ಫಿಗೆ ಸೂಟ್ ಆಗಲ್ಲ ಎಂದು ಹಲವರು ಹೇಳಿದ್ದಾರೆ. ಈ ಬಾರಿ ಉರ್ಫಿಯನ್ನು ಉಡುಗೆಯಿಂದ ಟ್ರೋಲ್ ಮಾಡಿಲ್ಲ. ಆದರೆ ಇಲ್ಲಿ ಯಾಕೆ ಅನ್ನೋ ಪ್ರಶ್ನೆ ಮುಂದಿಟ್ಟಿದ್ದಾರೆ. 

Read more Photos on
click me!

Recommended Stories