ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಉರ್ಫಿ ತನ್ನ ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ. ಕಷ್ಟದ ದಿನಗಳನ್ನು ನೆನೆದು ಉರ್ಫಿ ಭಾವುಕರಾಗಿದ್ದಾರೆ. ಒಂದು ಸಮಯದಲ್ಲಿ ನನಗೆ ವಾಸಿಸಲು ಮನೆ ಕೂಡ ಇರಲಿಲ್ಲ. ಕೆಲವು ಸರಿ ನಾನು ಪಾರ್ಕ್‌ನಲ್ಲಿ ವಾಸಿಸುತ್ತಿದ್ದೆ. ಸ್ನೇಹಿತರ ಮನೆಯಲ್ಲಿ ಕೆಲವು ದಿನ ಇದ್ದೆ. ಚಳಿಗಾಲದಲ್ಲಿ, ನಾನು ಹಾಸಿಗೆಯಿಲ್ಲದೆ ಹಾಗೆ ನೆಲದ ಮೇಲೆ ಮಲಗಿದ್ದೇನೆ' ಎಂದು ಹೇಳಿದ್ದಾರೆ.