ಕರಣ್ ಜೋಹರ್ ನಡೆಸಿಕೊಟ್ಟ ಬಿಗ್ ಬಾಸ್ ಒಟಿಟಿಯಲ್ಲಿ ಉರ್ಫಿ ಜಾವೇದ್ ಸ್ಪರ್ಧಿಸಿದ್ದರು. ಬಳಿಕ ಉರ್ಫಿ ತನ್ನ ವಿಚಿತ್ರ ಬಟ್ಟೆ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆದರು. ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಏರ್ಪೋಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ವಿಚಿತ್ರ ಬಟ್ಟೆಯ ಪ್ರದರ್ಶನಕ್ಕಾಗಿಯೇ ಉರ್ಫಿ ಮುಂಬೈ ಸುತ್ತಾಡುತ್ತಿರುತ್ತಾರೆ, ಕ್ಯಾಮರಾ ಮುಂದೆ ಬರುತ್ತಾರೆ ಹಾಗೂ ಏರ್ಪೋರ್ಟ್‌ಗೂ ಎಂಟ್ರಿ ಕೊಡುತ್ತಾರೆ.