ಲೇಡಿ ಖಿಲ್ಜಿ ರೂಪದಲ್ಲಿ ಉರ್ಫಿ, ಹೊಸ ಫ್ಯಾಶನ್‌ನಲ್ಲಿ ಮೋಡಿ ಮಾಡಿದ ನಟಿ

Published : Feb 20, 2025, 07:15 PM ISTUpdated : Feb 20, 2025, 07:17 PM IST

ಪದ್ಮಾವತ್' ಮತ್ತು 'ಹೀರಾಮಂಡಿ ಸಿನಿಮಾ ಪಾತ್ರಗಳಿಂದ ಪ್ರೇರಿತ ಲುಕ್‌ಗಳಲ್ಲಿ ಉರ್ಫಿ ಜಾವೇದ್ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಉರ್ಫಿಯ ಹೊಸ ಅವತಾರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 

PREV
19
ಲೇಡಿ ಖಿಲ್ಜಿ ರೂಪದಲ್ಲಿ ಉರ್ಫಿ, ಹೊಸ ಫ್ಯಾಶನ್‌ನಲ್ಲಿ ಮೋಡಿ ಮಾಡಿದ ನಟಿ

ಮಾಡೆಲ್ ಕಮ್ ನಟಿ ಊರ್ಫಿ ಜಾವೇದ್ ತಮ್ಮ ಭಿನ್ನಿ, ವಿಚಿತ್ರ ಫ್ಯಾಶನ್ ಸೆನ್ಸ್ ಮೂಲಕ ಭಾರಿ ಗಮನಸೆಳೆದಿದ್ದಾರೆ. ಜೊತೆಗೆ ಸಾಕಷ್ಟು ವಿವಾದಕ್ಕೂ ಕಾರಣವಾಗಿದ್ದಾರೆ. ಆದರೆ ಬೋಲ್ಡ್ ಲುಕ್ ಜೊತೆೆ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡು ಅಪಾರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ. ಇದೀಗ ಉರ್ಫಿ ತಮ್ಮ ಹೊಸ ಅವತಾರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  

29

ಊರ್ಫಿ ಜಾವೇದ್ ಹೊಸ ಫ್ಯಾಶನ್ ಲುಂಕ್ ಇದೀಗ ಸದ್ದು ಮಾಡುತ್ತಿದೆ. ವಿಶೇಷವಾಗಿ ಫ್ಯಾಷನ್ ಹೌಸ್ ರಿಂಪಲ್ ಮತ್ತು ಹರ್‌ಪ್ರೀತ್  ಹೊಸ ಕ್ಯಾಂಪೇನ್‌ ಭಾಗವಾಗಿ ಈ ಉಡುಗೆಯಲ್ಲಿ ಉರ್ಫಿ ಜಾವೇದ್ ಕಾಣಿಸಿಕೊಂಡಿದ್ದಾರೆ. ಉರ್ಫಿ ಫೋಟೋಗಳು ಭಾರಿ ವೈರಲ್ ಆಗಿದೆ.

39

ಬೋಲ್ಡ್ ಮತ್ತು ವಿಚಿತ್ರ ಫ್ಯಾಷನ್‌ಗೆ ಹೆಸರುವಾಸಿಯಾದ ಊರ್ಫಿ ಜಾವೇದ್ ಅವರ ಹೊಸ ಫೋಟೋಗಳು ಜನರ ಗಮನ ಸೆಳೆಯುತ್ತಿವೆ. ಹೊಸ ಡ್ರೆಸ್, ಅದಕ್ಕೆ ಬಳಸಿರುವ ಜ್ಯೂವೆಲ್ಲರಿ, ಮೇಕಅಪ್ ಸೇರಿದಂತೆ ಪ್ರತಿ ವಿಚಾರಗಳು ಚರ್ಚೆಯಾಗುತ್ತಿದೆ. ಇದೇ ರೀತಿ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳಿ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. 

49

ಕೆಲವು ಫೋಟೋಗಳಲ್ಲಿ ಊರ್ಫಿ ಜಾವೇದ್ 'ಹೀರಾಮಂಡಿ'ಯಿಂದ ಪ್ರೇರಿತ ಬ್ರೈಡಲ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಉರ್ಫಿಯ ಹೊಸ ಲುಕ್ ಹಲವರ ಕಣ್ಣು ತಂಪಾಗಿಸಿದೆ. ಸಾಂಪ್ರದಾಯಿಕ ಲುಕ್‌ನಲ್ಲಿ ಉರ್ಫಿ ಇದೀಗ ಟಾಕ್ ಆಪ್ ದಿ ಟೌನ್ ಆಗಿದ್ದಾರೆ. 

59

ಇನ್ನು ಕೆಲವು ಫೋಟೋಗಳು ಬಾಲಿವುಡ್ ಸಿನಿಮಾ 'ಪದ್ಮಾವತ್'ನಲ್ಲಿ ರಣವೀರ್ ಸಿಂಗ್ ನಿರ್ವಹಿಸಿದ ಅಲ್ಲಾವುದ್ದೀನ್ ಖಿಲ್ಜಿಯಿಂದ ಪ್ರೇರಿತವಾಗಿವೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. 

69

ಉರ್ಫಿ ಲುಕ್ ಅನ್ನು ಪೂರ್ಣಗೊಳಿಸಲು ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರದಂತಹ ಕಸೂತಿ ಟೋಪಿ ಧರಿಸಿದ್ದಾರೆ. ಉರ್ಫಿ ಹೊಸ ಅವತಾರ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. 

79

ಉರ್ಫಿ ಅವರ ಫೋಟೋಗಳನ್ನು ನೋಡಿ ಜನರು ತಮಾಷೆ ಮಾಡುತ್ತಿದ್ದಾರೆ.  ಕೆಲವರು 'ಉರ್ಫುದ್ದೀನ್ ಚಿಲ್ಜಿ' ಎಂದು ಕಮೆಂಟ್ ಮಾಡಿದ್ದಾರೆ. ಉರ್ಫಿ ಪರವಾಗಿ ಹಲವರು ಕಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ಉರ್ಫಿ ಪೋಟೋಗಳಿಗೆ ಪರ ವಿರೋಧ ಎರಡೂ ಇರುತ್ತದೆ. 

89

ಒಬ್ಬ ಬಳಕೆದಾರ 'ಔರಂಗಜೇಬ್‌ನ ಹೆಣ್ಣು ಆವೃತ್ತಿ' ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಉರ್ಫಿಗೆ ಎಂದಿನ ಫ್ಯಾಶನ್ ಒಪ್ಪುತ್ತೆ ಎಂದಿದ್ದಾರೆ. ಉರ್ಫಿಯಿಂದ ನಾವು ಭಿನ್ನ ಫ್ಯಾಶನ್ ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ. 

99

27 ವರ್ಷದ ಊರ್ಫಿ ಜಾವೇದ್ ನಟಿ ಮತ್ತು ಮಾಡೆಲ್. 'ಬಡೆ ಭಯ್ಯಾ ಕಿ ದುಲ್ಹನಿಯಾ'ದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಕಮ್ ನಟಿಯಾಗಿರುವ ಉರ್ಫಿ ಸದಾ ಒಂದಲ್ಲ ಒಂದು ಫ್ಯಾಶನ್ ಮೂಲಕ ಸುದ್ದಿಯಾಗುತ್ತಾರೆ. 

Read more Photos on
click me!

Recommended Stories