ರಿಂಕಿ ಖನ್ನಾ ಕೊನೆಯ ಬಾರಿಗೆ 'ಚಮೇಲಿ' ಚಿತ್ರದಲ್ಲಿ ಕಾಣಿಸಿಕೊಂಡರು. ಫೆಬ್ರವರಿ 2003 ರಲ್ಲಿ ಉದ್ಯಮಿ ಸಮೀರ್ ಸರನ್ ಮದುವೆಯಾದರು. ನಂತರ, ರಿಂಕಿ ಬಾಲಿವುಡ್‌ನಿಂದ ಸಂಪೂರ್ಣವಾಗಿ ಹೊರಗುಳಿದರು.
ಮದುವೆಯ ನಂತರ, ರಿಂಕಿ ಲಂಡನ್‌ನಲ್ಲಿ ನೆಲೆಸಿದರು. ಅಕ್ಟೋಬರ್ 2004 ರಲ್ಲಿ, ಮಗಳು ನವೋಮಿಕಾಗೆ ಹಾಗೂ ನಂತರ 2013 ರಲ್ಲಿ ಮಗನಿಗೆ ಜನ್ಮ ನೀಡಿದರು.
1999 ರಲ್ಲಿ ಪ್ಯಾರ್ ಮೆ ಕಭಿ ಕಭಿ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಿಂಕಿ ಈ ಸಿನಿಮಾಕ್ಕಾಗಿ ಬೆಸ್ಟ್ ಫಿಮೇಲ್ ಡೆಬ್ಯೂ ಝೀ ಸಿನಿ ಅವಾರ್ಡ್ ಪಡೆದರು. ನಂತರ ಗೋವಿಂದ ಮತ್ತು ಸೋನಾಲಿ ಬೇಂದ್ರೆ ಅವರ 'ಜಿಸ್ ದೇಶ್ ಮೇ ಗಂಗಾ ರೇಹ್ತಾ ಹೈ' ಸಿನಿಮಾದಲ್ಲಿ ಸಪೊರ್ಟಿಂಗ್ ರೋಲ್‌ನಲ್ಲಿ ಕಾಣಿಸಿಕೊಂಡರು.
ಮುಜೆ ಕುಚ್ ಕೆಹ್ನಾ ಹೈ' ಚಿತ್ರದಲ್ಲಿ ಪೋಷಕ ಪಾತ್ರವನ್ನೂ ನಿರ್ವಹಿಸಿದ್ದಾರೆ. 2003 ರಲ್ಲಿ, ಕೊನೆಯದಾಗಿ ಚಮೇಲಿ ಚಿತ್ರದಲ್ಲಿ ಕೆಲಸ ಮಾಡಿದರು. ನಂತರ ರಿಂಕಿ ಖನ್ನಾ ಕೇವಲ ಸಿನಿಮಾದಿಂದ ದೂರವಿರುವುದು ಮಾತ್ರವಲ್ಲ, ಎಲ್ಲಿ ಕಾಣಿಸಿಕೊಳ್ಳಲೂ ಇಲ್ಲ.
ರಿಂಕಿಯ ವೈಯಕ್ತಿಕ ಜೀವನದ ಬಗ್ಗೆ ಎಲ್ಲೂ ಮಾಹಿತಿ ಲಭ್ಯವಿಲ್ಲ. ಅಷ್ಟೇ ಅಲ್ಲ, ಸೋಶಿಯಲ್ ಮೀಡಿಯಾ ಮೂಲಕ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕವೂ ಹೊಂದಿಲ್ಲ.
ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೊದಲು ರಿಂಕಿಯಹೆಸರು ರಿಂಕಲ್ ಎಂದಾಗಿತ್ತು. ರಾಜೇಶ್ ಖನ್ನಾ ತನ್ನ ಮಕ್ಕಳಿಗೆ ಟ್ವಿಂಕಲ್ ಮತ್ತು ರಿಂಕಲ್ ಎಂದು ಹೆಸರಿಸಿದರು. ರಿಂಕಲ್ ನಂತರ ಸಿನಿಮಾಕ್ಕಾಗಿ ಹೆಸರನ್ನು ರಿಂಕಿ ಎಂದು ಬದಲಾಯಿಸಿದರು.
ಕಳೆದ ವರ್ಷ, ರಿಂಕಿ ಖನ್ನಾ ಮಗಳು ನವೋಮಿಕಾ ಸರನ್, ಡಿಂಪಲ್ ಕಪಾಡಿಯಾ ಮತ್ತು ಟ್ವಿಂಕಲ್ ಖನ್ನಾ ಅವರೊಂದಿಗೆ ಕಾಣಿಸಿಕೊಂಡರು. ಮಗಳಿಗೆ 16 ವರ್ಷ ಹಾಗೂ ಮಗನಿಗೆ 7 ವರ್ಷ.
ರಿಂಕಿಯ ಮಗಳು ನವೋಮಿಕಾ ಸರನ್ ಚಿಕ್ಕಮ್ಮ ಟ್ವಿಂಕಲ್ ಖನ್ನಾ ಮತ್ತು ನಾನಿ ಡಿಂಪಲ್ ಕಪಾಡಿಯಾ ಅವರೊಂದಿಗೆ.
ಸಿನಿ ಕೆರಿಯರ್‌ನಲ್ಲಿ ರಿಂಕಿ ಖನ್ನಾ , ಪ್ಯಾರ್ ಮೇ ಕಭಿ ಕಭಿ, ಜಿಸ್ ದೇಶ್ ಮೇ ಗಂಗಾ ರೇಹ್ತಾ ಹೈ, ಮಜ್ನು, ಯೆ ಹೈ ಜಲ್ವಾ, ಪ್ರಾನ್ ಜಯೆ ಪರ್ ಶಾನ್ ನಾ ಜಯೆ, ಝಂಕರ್ ಬೀಟ್ಸ್ ಮತ್ತು ಜಾಸ್ಮಿನ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.