ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಕಾರಣ ಬಿಚ್ಚಿಟ್ಟ ತುಷಾರ್‌ ಕಪೂರ್‌

First Published Apr 9, 2020, 3:51 PM IST

ಬಿಟೌನ್‌ನಲ್ಲಿ ಸಿಂಗಲ್‌ ಪೆರೆಂಟ್‌ಗಳಿಗೇನು ಕೊರತೆಯಿಲ್ಲ. ಸಿಂಗಲ್‌ ಆಗಿ ಮಕ್ಕಳನ್ನು ಸಾಕಿದ ಹಾಗೂ ಸಾಕುತ್ತಿರುವ ಹಲವು ಸ್ಟಾರ್‌ಗಳ ಉದಾರಣೆಗಳಿವೆ. ಮೊದಲೆಲ್ಲಾ ಮಗುವನ್ನು ದತ್ತು ತೆಗೆದು ಕೊಳ್ಳುತ್ತಿದ್ದವರು ಈಗ ಒಂದು ಹೆಜ್ಜೆ ಮುಂದೆ ಹೋಗಿ ಬಾಡಿಗೆ ತಾಯಿಯ ಮೂಲಕ ತಮ್ಮ ಮಗುವನ್ನು ಪಡೆಯುವ ವಿಧಾನಕ್ಕೆ ಮೊರೆ ಹೋಗುತ್ತಿದ್ದಾರೆ. ಫೇಮಸ್‌ ನಟ ಜೀತೇಂದ್ರರ ಮಗ ತುಷಾರ್‌ ಕಪೂರ್‌ ಹೀಗೆ ಬಾಡಿಗೆ ತಾಯಿಯ ಮೂಲಕ ಮಗು ಪಡೆದು ಸಿಂಗಲ್‌ ಪೆರೆಂಟ್‌ ಗುಂಪಿಗೆ ಸೇರಿರುವ ಬಾಲಿವುಡ್‌ನ ಸೆಲೆಬ್ರೆಟಿಗಳಲ್ಲಿ ಒಬ್ಬರು. ಇತ್ತೀಚೆಗೆ ದತ್ತು ತೆಗದುಕೊಳ್ಳವ ಬದಲು ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ವಿಧಾನವನ್ನೇ ಆಯ್ಕೆ ಮಾಡಿಕೊಂಡ ಕಾರಣವನ್ನು ಹಂಚಿಕೊಂಡಿದ್ದಾರೆ.

2016ರಲ್ಲಿ ಬಾಡಿಗೆ ತಾಯಿಯ ಮೂಲಕ ಮಗ ಲಕ್ಷ್ಯನನ್ನು ಪಡೆದ ತುಷಾರ್‌ ಕಪೂರ್‌.
undefined
ಆಡಾಪ್ಷನ್‌ ಬದಲು ಸೆರೊಗೆಸಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಬಹಿರಂಗ ಪಡಿಸಿದ ನಟ.
undefined
ಬಾಡಿಗೆ ತಾಯ್ತನದಿಂದ ಮಗು ಪಡೆಯಲು ಕಾರಣ ತಮ್ಮದೇ ಮಗು ಬೇಕೆಂಬ ಆಸೆ ಅಂತೆ.
undefined
ಮುಂದಿನ ದಿನಗಳಲ್ಲಿ ಮಗುವನ್ನು ದತ್ತು ತೆಗೆದು ಕೊಳ್ಳಲೂ ಬಹುದು. ಆದರೆ ಸದ್ಯಕ್ಕೆ ಯಾವುದೇ ಪ್ಲಾನ್‌ ಇಲ್ಲವೆಂದ ತುಷಾರ್‌.
undefined
ಜನರು ಮದುವೆಯಾಗಿ ಮಕ್ಕಳು ಪಡೆಯುಬಹುದಾದರೆ ಸಿಂಗಲ್‌ ಫಾದರ್‌ ಆಗುವುದರಲ್ಲಿ ನನಗೆ ಯಾವುದೇ ತೊಂದರೆ ಕಾಣಲಿಲ್ಲ, ಎಂದಿದ್ದಾರೆ ಬಾಲಿವುಡ್‌ನ ಈ ನಟ.
undefined
ಸಿಂಗಲ್‌ ಪೇರೆಂಟ್ ಆಗಲು ನಿರ್ಧರಿಸಿದಾಗ ಜನ ಮಗುವನ್ನು ದತ್ತು ತೆಗೆದುಕೊ ಎಂದು ಸಲಹೆ ನೀಡಿದರು, ಇಡೀ ಪ್ರಪಂಚವೇ ಸ್ವಂತ ಮಗುವನ್ನು ಹೊಂದುತ್ತಿರುವಾಗ, ನನಗೇಕೆ ಸಾಧ್ಯವಿಲ್ಲ ಎಂದು ನಾನು ಕೇಳುತ್ತೇನೆ ಎಂದಿದ್ದಾರೆ ಇವರು.
undefined
35 ವರ್ಷದಲ್ಲಿ ಅಪ್ಪನಾಗಲು ನಿರ್ಧರಿಸಿದಾಗ ಅವರು ಸ್ಟ್ರಾಂಗ್‌ ಪೇರೆಂಟಲ್‌ ಇನ್‌ಸ್ಟಿಂಕ್ಟ್‌ ಹೊಂದಿದ್ದರು ಎಂದು ಹೇಳಿಕೊಂಡಿದ್ದಾರೆ.
undefined
ಮದುವೆ ಕಾಯುತ್ತದೆ ಆದರೆ ಮಗುವನ್ನು ನೊಡಿಕೊಳ್ಳಲು ಮತ್ತು ಒಳ್ಳೆ ಭವಿಷ್ಯ ನೀಡಲು ಮೊದಲು ಅಪ್ಪನಾಗುವುದು ಮುಖ್ಯವಾಗಿತ್ತು ಎಂದಿದ್ದಾರೆ.
undefined
ಆ ಸಮಯದಲ್ಲಿ ತುಂಬಾ ಉತ್ಸುಕ ಜೊತೆಗೆ ನರ್ವಸ್‌ ಆಗಿದ್ದ ಕಾರಣದಿಂದ ಪ್ರಕ್ರಿಯೆ ಶುರುವಾಗಲು ಸಮಯ ತೆಗೆದು ಕೊಂಡಿತ್ತು ಎನ್ನುತ್ತಾರೆ ತುಷಾರ್‌.
undefined
ತುಷಾರ್‌ ಸಹೋದರಿ, ನಿರ್ದೇಶಕಿ ಏಕ್ತಾ ಕಪೂರ್‌ ಕೂಡ ಮಗು ಪಡೆದಿರುವುದು ಸೆರೊಗೆಸಿಯಿಂದ.
undefined
click me!