ಮಾತುಗಳ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ತಮ್ಮ ಮುಂದಿನ ಚಿತ್ರವನ್ನು ಅಲ್ಲು ಅರ್ಜುನ್ ಜೊತೆ ಮಾಡಬೇಕಿತ್ತು. ಪುರಾಣಗಳ ಹಿನ್ನೆಲೆಯಲ್ಲಿ ಒಂದು ದೊಡ್ಡ ಪ್ಯಾನ್ ಇಂಡಿಯಾ ಚಿತ್ರವನ್ನು ತ್ರಿವಿಕ್ರಮ್ ಪ್ಲಾನ್ ಮಾಡಿದ್ದರು. ಈ ಚಿತ್ರಕ್ಕೆ 500 ಕೋಟಿಗಿಂತ ಹೆಚ್ಚು ಬಜೆಟ್ ಬೇಕಾಗಬಹುದು, ಅಲ್ಲು ಅರ್ಜುನ್ ಸುಬ್ರಹ್ಮಣ್ಯ ಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿ ಬಂದಿತ್ತು. ಆದರೆ ಅಲ್ಲು ಅರ್ಜುನ್ ಗೆ ಮತ್ತೊಂದು ಕಡೆ ಡೈರೆಕ್ಟರ್ ಅಟ್ಲಿಯವರ ಜೊತೆ ಕಮಿಟ್ಮೆಂಟ್ ಇದೆ.