ಟಾಕ್ಸಿಕ್ ಸಿನಿಮಾ ಕಾಸ್ಟ್ ಬಹಿರಂಗ: ಯಶ್ ಜೊತೆಗೆ ಐವರು ಸ್ಟಾರ್ ಹೀರೋಯಿನ್ಸ್

Published : Aug 21, 2025, 10:20 AM IST

ಸೂಪರ್‌ ಹೀರೋ ಸಿನಿಮಾಗಳಲ್ಲಿ ನಾಯಕಿಯರನ್ನು ಗೊಂಬೆಗಳಂತೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಯಾಗಿ ‘ಟಾಕ್ಸಿಕ್‌’ ಹೊಸ ಮಾದರಿ ನಿರ್ಮಿಸಲು ಮುಂದಾಗಿದೆ.

PREV
16

ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾಕ್ಕೆ ರುಕ್ಮಿಣಿ ವಸಂತ್‌ ಎಂಟ್ರಿ ಕೊಟ್ಟದ್ದು ಸುದ್ದಿಯಾದ ಬೆನ್ನಲ್ಲೇ, ಈ ಸಿನಿಮಾಕ್ಕೆ ಐವರು ನಾಯಕಿಯರು ಎಂಬ ವಿಚಾರ ಬಹಿರಂಗಗೊಂಡಿದೆ.

26

ಸೂಪರ್‌ ಹೀರೋ ಸಿನಿಮಾಗಳಲ್ಲಿ ನಾಯಕಿಯರನ್ನು ಗೊಂಬೆಗಳಂತೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಯಾಗಿ ‘ಟಾಕ್ಸಿಕ್‌’ ಹೊಸ ಮಾದರಿ ನಿರ್ಮಿಸಲು ಮುಂದಾಗಿದೆ.

36

ಭಾರತೀಯ ಚಿತ್ರರಂಗದ ಪ್ರಸಿದ್ಧ ಐವರು ನಾಯಕಿಯರನ್ನು ಈ ಚಿತ್ರಕ್ಕೆ ಸೇರ್ಪಡೆಗೊಳಿಸಲಾಗಿದ್ದು, ಐದೂ ಪಾತ್ರಗಳೂ ಪ್ರಬಲವಾಗಿವೆ ಎನ್ನಲಾಗಿದೆ. ರುಕ್ಮಿಣಿ ವಸಂತ್‌, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ, ಹ್ಯೂಮಾ ಖುರೇಷಿ ನಾಯಕಿಯರಾಗಿ ಅಭಿನಯ ಮೆರೆಯಲಿದ್ದಾರೆ.

46

ಕನ್ನಡದ ಹುಡುಗಿ ರುಕ್ಮಿಣಿ ವಸಂತ್‌ ಈ ಸಿನಿಮಾದ ನಿರ್ಣಾಯಕ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಅವರ ಪಾತ್ರ ಆ್ಯಕ್ಷನ್‌ ಹಾಗೂ ಡ್ರಾಮಾಗಳಿಂದ ತುಂಬಿರಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಹುನಿರೀಕ್ಷಿತ ಚಿತ್ರ ಮಾರ್ಚ್‌ 19, 2026ಕ್ಕೆ ತೆರೆ ಕಾಣಲಿದೆ.

56

ವೆಂಕಟ್ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ.

66

ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಚಿತ್ರೀಕರಿಸಲಾಗಿದ್ದು, ಬಹು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಟಾಕ್ಸಿಕ್ ಚಿತ್ರಕ್ಕೆ ರಾಜೀವ್ ರೈ ಅವರ ಛಾಯಾಗ್ರಹಣವಿದೆ. ಮುಂದಿನ ವರ್ಷ ಮಾರ್ಚ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Read more Photos on
click me!

Recommended Stories