ಈ ಸೆಲೆಬ್ರಿಟಿ ಜೋಡಿಗಳ ವಯಸ್ಸಿನ ಅಂತರ ಕೇಳಿದ್ರೆ ಶಾಕ್ ಆಗ್ತೀರಿ!

Published : Mar 19, 2025, 04:32 PM ISTUpdated : Mar 20, 2025, 04:50 PM IST

ಸಿನಿಮಾರಂಗದಲ್ಲಿ ಹೆಸರು ಮಾಡಿದ ಸೆಲೆಬ್ರಿಟಿ ಜೋಡಿಗಳ, ವಯಸ್ಸಿನ ಅಂತರದ ಬಗ್ಗೆ ಅವಾಗವಾಗ ಚರ್ಚೆ ನಡೆಯುತ್ತಲೇ ಇರುತ್ತೆ. ಇಲ್ಲಿದೆ ನೋಡಿ ನಿಮ್ಮ ಫೇವರಿಟ್ ಜೋಡಿಯ ನಡುವಿನ ವಯಸ್ಸಿನ ಅಂತರ.   

PREV
111
ಈ ಸೆಲೆಬ್ರಿಟಿ ಜೋಡಿಗಳ ವಯಸ್ಸಿನ ಅಂತರ ಕೇಳಿದ್ರೆ ಶಾಕ್ ಆಗ್ತೀರಿ!

ಈ ಸೆಲೆಬ್ರೆಟಿ ಜೋಡಿಗಳ ನಡುವಿನ ವಯಸ್ಸಿನ ಅಂತರ ಒಂದೆರಡು ಅಲ್ಲ, ಕೆಲವು ಸೆಲೆಬ್ರಿಟಿಗಳಲ್ಲಿ ಹೆಂಡ್ತಿ ಗಂಡನಿಗಿಂತ ದೊಡ್ಡವರಾಗಿದ್ದರೆ, ಇನ್ನೂ ಕೆಲವರಲ್ಲಿ ಗಂಡ ಹೆಂಡತಿಗಿಂತ 6 ವರ್ಷಕ್ಕಿಂತಲೂ ಹೆಚ್ಚಾಗಿದೆ. ನಿಮ್ಮ ಫೇವರಿಟ್ ಸೆಲೆಬ್ರಿಟಿಗಳ ನಡುವಿನ ವಯಸ್ಸಿನ ಅಂತರ ಎಷ್ಟಿದೆ ನೋಡೋಣ. 
 

211

ಅಭಿಷೇಕ್ ಬಚ್ಚನ್ - ಐಶ್ವರ್ಯ ರೈ (Aishwarya Rai-Abhishek Bachchan)
ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಅವರಿಗಿಂತ ಹಿರಿಯರು. ಅಭಿಷೇಕ್ ಗೆ 49 ವರ್ಷ ವಯಸ್ಸಾಗಿದ್ರೆ, ಅವರ ಪತ್ನಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈಗೆ 51 ವರ್ಷ ವಯಸ್ಸಾಗಿದೆ. 

311

ಕಿಯಾರ ಆಡ್ವಾನಿ - ಸಿದ್ದಾರ್ಥ್ ಮಲ್ಹೋತ್ರಾ (Kiara Advani - Siddarth Malhotra)
ಬಾಲಿವುಡ್ ನ ಸದ್ಯದ ಮೋಸ್ಟ್ ಫೇವರಿಟ್ ಸೆಲೆಬ್ರಿಟಿ ಜೋಡಿಗಳು ಸಿದ್ಧಾರ್ಥ್ ಮತ್ತು ಕಿಯಾರ. ಅಂದ ಹಾಗೆ ಸಿದ್ದಾರ್ಥ್ ಮಲ್ಹೋತ್ರಾಗೆ 40 ವರ್ಷ ವಯಸ್ಸಾಗಿದ್ರೆ, ಕಿಯಾರ ಅಡ್ವಾನಿಗೆ 33 ವರ್ಷ. 

411

ಅಮಿತಾಬ್ ಬಚ್ಚನ್ -ಜಯಾ ಬಚ್ಚನ್ (Amitab Bachchan - Jaya Bachchan)
ಬಾಲಿವುಡ್ ನ ಹಿರಿಯ ಜೋಡಿಗಳಾದ ಅಮಿತಾಬ್ ಬಚ್ಚನ್ ಹಾಗೂ ಜಯಾ ಜಚ್ಚನ್ ಇವರಿಬ್ಬರ ಮಧ್ಯೆ 6 ವರ್ಷ ವಯಸ್ಸಿನ ಅಂತರವಿದೆ. ಬಚ್ಚನ್ ಗೆ 82 ಹಾಗೂ ಜಯಾಗೆ 76 ವರ್ಷ ವಯಸ್ಸು. 
 

511

ಟ್ವಿಂಕಲ್ ಖನ್ನಾ -ಅಕ್ಷಯ್ ಕುಮಾರ್ (Twinkle Khanna - Akshay Kumar)
ಅಕ್ಷಯ್ ಕುಮಾರ್ ಅವರಿಗೆ 57 ವರ್ಷವಾಗಿದ್ರೆ, ಅವರ ಪತ್ನಿ ಟ್ವಿಂಕಲ್ ಖನ್ನಾಗೆ 51 ವರ್ಷ ವಯಸ್ಸಾಗಿದೆ. ಆದ್ರೂ ಬೆಸ್ಟ್ ಜೋಡಿಯಾಗಿದ್ದಾರೆ ಇವರು. 
 

611

ಆಲಿಯಾ ಭಟ್ -ರಣಬೀರ್ ಕಪೂರ್ (Alia Bhatt -Ranbir Kapoor)
ಈ ಮುದ್ದಾದ ಜೋಡಿಯ ಮಧ್ಯೆ ಸುಮಾರು 10 ವರ್ಷ ವಯಸ್ಸಿನ ಅಂತರವಿದೆ. ಆಲಿಯಾ ಭಟ್ ಗೆ 32 ವರ್ಷವಾಗಿದ್ದು, ರಣಬೀರ್ ಕಪೂರ್ ಗೆ 42 ವರ್ಷವಾಗಿದೆ. 

711

ಸೈಫ್ ಆಲಿ ಖಾನ್ -ಕರೀನಾ ಕಪೂರ್ (Saif Ali Khan - Kareen Kapoor)
ಈ ಜೋಡಿಯ ಮಧ್ಯೆ ಕೂಡ 10 ವರ್ಷದ ವಯಸ್ಸಿನ ಅಂತರವಿದೆ. ಸೈಫ್ ಆಲಿ ಖಾನ್ ವಯಸ್ಸು 54 ಹಾಗೂ ಕರೀನಾ ಕಪೂರ್ ವಯಸ್ಸು 44 ಆಗಿದೆ. ಸೈಫ್ ಮದುವೆಯಲ್ಲಿ ಕರೀನಾ 15 ವರ್ಷದ ಪುಟ್ಟ ಹುಡುಗಿಯಾಗಿದ್ದಳು. 

811

ಕತ್ರೀನಾ ಕೈಫ್ - ವಿಕ್ಕಿ ಕೌಶಲ್  (Katrina Kaif - Vicky Kaushal)
ಬಾಲಿವುಡ್ ನ ಕ್ಯೂಟ್ ಜೋಡಿಗಳ ಮಧ್ಯೆ ಕೂಡ ತುಂಬಾನೆ ವಯಸ್ಸಿನ ಅಂತರವಿದೆ. ಇವರಲ್ಲಿ ಕತ್ರೀನಾ ಕೈಫ್ ಹಿರಿಯರು. ಕತ್ರೀನಾಗೆ 41 ವರ್ಷ ವಯಸ್ಸಾಗಿದ್ರೆ, ವಿಕ್ಕಿ ಕೌಶಲ್ ವಯಸ್ಸು 36. 
 

911

 ಜೆನಿಲಿಯಾ - ರಿತೇಶ್ (Genelia D'souza - Riteish Deshmukh)
ಮೋಸ್ಟ್ ಲವ್ಡ್ ಜೋಡಿ ಅಂದ್ರೆ ರಿತೇಶ್ ದೇಶ್ ಮುಖ್ ಮತ್ತು ಜೆನಿಲಿಯಾ ಡಿಸೋಜಾ. ಮೇಡ್ ಫಾರ್ ಈಚ್ ಅದರ್ ಜೋಡಿ ಇವರು. ಜೆನಿಲಿಯಾಗೆ 37 ವರ್ಷ, ರಿತೇಶ್ ಅವರಿಗಿಂತ 9 ವರ್ಷ ಹಿರಿಯರಾಗಿದ್ದು, ಅವರಿಗೆ 46 ವರ್ಷ ವಯಸ್ಸು. 

1011

ಪ್ರಿಯಾಂಕ ಚೋಪ್ರಾ -ನಿಕ್ ಜೋನಸ್ (Priyanka Chopra - Nick Jonas)
ಬಾಲಿವುಡ್ -ಹಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾಗೆ 42 ವರ್ಷ ಹಾಗೂ ಅವರ ಪತಿ ನಿಕ್ ಜೋನಸ್ ಗೆ ಈವಾಗ ಕೇವಲ 32 ವರ್ಷ. ಇಬ್ಬರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 10 ವರ್ಷ. 

1111

ರಾಧಿಕಾ ಪಂಡಿತ್ - ಯಶ್ (Yash - Radhika Pandit)
ಇಷ್ಟೇಲ್ಲಾ ಜೋಡಿಗಳ ಬಗ್ಗೆ ಹೇಳಿದ ಮೇಲೆ ನಮ್ಮ ಕರ್ನಾಟಕದ ಫೇವರಿಟ್ ಜೋಡಿ ಬಗ್ಗೆ ಹೇಳದೇ ಇದ್ದರೆ ಹೇಗೆ ಅಲ್ವಾ? ಎಲ್ಲರಿಗೂ ಗೊತ್ತಿರುವ ಹಾಗೆ ರಾಧಿಕಾ ಪಂಡಿತ್ ಯಶ್ ಅವರಿಗಿಂತ ದೊಡ್ಡವರು. ಯಶ್ ಗೆ 39 ವರ್ಷ ವಯಸ್ಸು, ರಾಧಿಕಾಗೆ 41 ವರ್ಷ ವಯಸ್ಸಾಗಿದೆ. 

click me!

Recommended Stories