ಇತ್ತೀಚೆಗೆ ನಡೆದ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಪಾರ್ಟಿಗೆ ಭರ್ಜರಿ ಸೀಟುಗಳು ಲಭಿಸಿದ್ದು, ಕೇಂದ್ರದಲ್ಲಿ ಮೋದಿ ಸರಕಾರಕ್ಕೆ, ರಾಜ್ಯದಲ್ಲಿ ಚಂದ್ರಬಾಬು ನೇತೃತ್ವದ ಸರಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್, ರಾಜಶೇಖರ ರೆಡ್ಡಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದು, ಪವನ್ ಕಲ್ಯಾಣ್ ವಿರೋಧಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದು ಆಂಧ್ರದಲ್ಲಿ ಫ್ಯಾನ್ಸ್ ವಾರ್‌ಗೆ ಸಾಕ್ಷಿಯಾಗಿತ್ತು. ಅದಕ್ಕೆ ಕುಮ್ಮಕ್ಕು ನೀಡುವಂತೆ ಬೆಂಗಳೂರಿನಲ್ಲಿ ಪವನ್ ಕಲ್ಯಾಣ್ ನೀಡಿದ ಹೇಳಿಕೆ, ಉರಿಯುವ ಬೆಂಕಿಗೆ ತುಪ್ಪು ಸುರಿದಂತಾಗಿತ್ತು. ಈ ಎಲ್ಲ ಗೋಜಿನ ನಡುವೆಯೇ ಪವನ್‌ಗೆ ಅಲ್ಲು ಹುಟ್ಟುಹಬ್ಬದ ಶುಭ ಕೋರಿದ್ದು, ಸ್ಥಿತಿಯನ್ನು ತುಸು ತಿಳಿಗೊಳಿಸಿದೆ.