ನಾಗ ಚೈತನ್ಯ ಅಮ್ಮ ಲಕ್ಷ್ಮಿಯಂತೆ ಮಾಜಿ ಪತ್ನಿ ಸಮಂತಾ ಎರಡನೇ ಮದುವೆಯಾಗ್ತಾರಾ?

First Published | Sep 2, 2024, 3:51 PM IST

ನಟ ನಾಗ ಚೈತನ್ಯ ತಾಯಿ ಲಕ್ಷ್ಮಿ, ನಾಗಾರ್ಜುನ ಅವರಿಂದ ಡಿವೋರ್ಸ್ ಪಡೆದ ನಂತರ ಯಾರನ್ನು ಎರಡನೇ ಮದುವೆ ಆದ್ರು? ಮಾಜಿ ಅತ್ತೆ ಸಾಗಿದ ದಾರಿಯಲ್ಲಿಯೇ ಇದೀಗ ಸಮಂತಾ ಸಹ ಮುಂದುವರಿಯುತ್ತಾರಾ?  

ನಾಗ ಚೈತನ್ಯ, ಲಕ್ಷ್ಮಿ

ಟಾಲಿವುಡ್‌ನಲ್ಲಿ ಸ್ಟಾರ್ ಹೀರೋ ಆಗಿ ಮಿಂಚುತ್ತಿದ್ದಾರೆ ಕಿಂಗ್  ನಾಗಾರ್ಜುನ. ಅವರ ಪುತ್ರ ನಾಗ ಚೈತನ್ಯ ಕೂಡ ಸಿನಿಮಾಗಳಲ್ಲಿ ಹೀರೋ ಆಗಿಯೇ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಯಶಸ್ವಿ ನಟರಾಗಿ ಮಿಂಚುತ್ತಿರುವ ಈ ಇಬ್ಬರಿಗೂ ವೈಯಕ್ತಿಕ ಜೀವನ ಅಂದುಕೊಂಡಂತೆ ಇಲ್ಲ. ನಾಗಾರ್ಜುನರಂತೆಯೇ ಅವರ ಪುತ್ರ ನಾಗ ಚೈತನ್ಯ ಅವರ ಮೊದಲ ಮದುವೆಯೂ ವಿಚ್ಛೇದನದಲ್ಲಿ ಕೊನೆಗೊಂಡಿತು. ಇದೀಗ ಮಗನ ಎರಡನೇ ಮದುವೆ ಹೊತ್ತಿನಲ್ಲಿ ಮತ್ತೊಂದು ಮದ್ವೆಯಾಗಿರುವ ಸುದ್ದಿ ಸದ್ದು ಮಾಡುತ್ತಿದೆ.

ತಾಯಿಯೊಂದಿಗೆ ನಾಗ ಚೈತನ್ಯ

ಸಮಂತಾ ಜೊತೆ  ವಿಚ್ಛೇದನ ಪಡೆದ ನಂತರ ನಾಗ ಚೈತನ್ಯ ನಟಿ ಶೋಭಿತಾ ಧೂಳಿಪಾಲ ಅವರನ್ನು ಪ್ರೀತಿಸುತ್ತಿದ್ದು, ನಿಶ್ಚಿತಾರ್ಥವೂ ಆಗಿದೆ. ನಾಗ ಚೈತನ್ಯ, ನಾಗಾರ್ಜುನ ಅವರ ಮೊದಲ ಪತ್ನಿಯ ಪುತ್ರ. ನಾಗಾರ್ಜುನ ಮೊದಲು ಲಕ್ಷ್ಮಿ ಅವರನ್ನು ವಿವಾಹವಾಗಿದ್ದರು ತೆಲುಗು ಸ್ಟಾರ್ ನಟ. ಅವರಿಗೆ ಜನಿಸಿದ ಪುತ್ರ ನಾಗ ಚೈತನ್ಯ. 1990 ರಲ್ಲಿ ಲಕ್ಷ್ಮಿ ಅವರೊಂದಿಗೆ ವಿಚ್ಛೇದನ ಪಡೆದು, ಬೇರ್ಪಟ್ಟರು ನಾಗಾರ್ಜುನ.

Tap to resize

ನಾಗ ಚೈತನ್ಯ ತಾಯಿ ಲಕ್ಷ್ಮಿ

ಲಕ್ಷ್ಮಿ ಅವರನ್ನು ಬಿಟ್ಟ ನಂತರ ನಟ ನಾಗಾರ್ಜುನ ನಟಿ ಅಮಲಾ ಅವರನ್ನು ಎರಡನೇ ಮದುವೆಯಾದರು. ನಾಗಾರ್ಜುನರಂತೆಯೇ ಅವರ ಮೊದಲ ಪತ್ನಿ ಲಕ್ಷ್ಮಿ ಕೂಡ ವಿಚ್ಛೇದನದ ನಂತರ ಪುನರ್ವಿವಾಹವಾಗಿದ್ದಾರೆ. ಶ್ರೀರಾಮ್ ಮೋಟಾರ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಶರತ್ ವಿಜಯರಾಘವನ್ ಅವರನ್ನು ಅವರು ಎರಡನೇ ಮದುವೆಯಾಗಿದ್ದಾರಂತೆ. ವಿವಾಹದ ನಂತರ ಲಕ್ಷ್ಮಿ ತಮ್ಮ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆನ್ನಲಾಗುತ್ತಿದೆ.

ಲಕ್ಷ್ಮಿ ತಮ್ಮ ಎರಡನೇ ಪತಿಯೊಂದಿಗೆ

ಅಷ್ಟೇ ಅಲ್ಲದೆ ಲಕ್ಷ್ಮಿ ಎರಡನೇ ಮದುವೆ ಇಷ್ಟವಿಲ್ಲದ ಕಾರಣ ನಟ ನಾಗ ಚೈತನ್ಯ ತಮ್ಮ ತಾಯಿಯನ್ನು ಬಿಟ್ಟು ತಂದೆಯೊಂದಿಗೆ ವಾಸಿಸುತ್ತಿದ್ದಾರೆ ಎಂಬೊಂದು ಗಾಳಿ ಸುದ್ದಿ ಹರಡಿತ್ತು. ಆದರೆ ಅವೆಲ್ಲವೂ ಸುಳ್ಳು ಎಂದು ಇತ್ತೀಚೆಗೆ ನಡೆದ ನಾಗ ಚೈತನ್ಯ - ಶೋಭಿತಾ ನಿಶ್ಚಿತಾರ್ಥದಲ್ಲಿ ಪ್ರೂವ್ ಆಗಿದೆ. ಈ ನಿಶ್ಚಿತಾರ್ಥಕ್ಕೆ ತಮ್ಮ ಎರಡನೇ ಪತಿಯೊಂದಿಗೆ ಬಂದು ತಮ್ಮ ಪುತ್ರನನ್ನು ಆಶೀರ್ವದಿಸಿದರು ಲಕ್ಷ್ಮಿ.

Latest Videos

click me!