ಬಾಯ್‌ಫ್ರೆಂಡ್‌ ಜೊತೆ ಮುದ್ದುಮಗನ ಫೋಟೋ ಶೇರ್ ಮಾಡಿದ ಇಲಿಯಾನ

First Published | Sep 1, 2024, 4:36 PM IST

ತಮ್ಮ ಖಾಸಗಿ ಬದುಕನ್ನು ಲೈಮ್ ಲೈಟ್‌ನಿಂದ ಬಹಳ ದೂರವೇ ಇಟ್ಟಿರುವಂತಹ ನಟಿ ಇಲಿಯಾನಾ ಡಿ ಕ್ರೂಜ್ ಈಗ ತಮ್ಮ ಪತಿ ಹಾಗೂ ಮುದ್ದು ಮಗನ ಸುಂದರ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

ತಮ್ಮ ಪತಿ ಮೈಕ್ ಡೊಲನ್ ಜೊತೆ ಮದುವೆಯ ಫೋಟೋವನ್ನಾಗಲಿ ಇಲಿಯಾನಾ ಇಲ್ಲಿಯವರೆಗೂ ಎಲ್ಲೂ ಶೇರ್ ಮಾಡಿಕೊಂಡಿಲ್ಲ. ಅದಕ್ಕೂ ಮೊದಲು ಅವರು ತಾನು ಒಬ್ಬರೊಂದಿಗೆ ಪ್ರೇಮ ಸಂಬಂಧದಲ್ಲಿದ್ದೇನೆ ಎಂಬ ವಿಚಾರವನ್ನು ಕೂಡ ಯಾರಿಗೂ ಹೇಳಿರಲಿಲ್ಲ. 

ಇದರಿಂದಲೇ ಕಳೆದ ವರ್ಷ ಅವರು ಏಪ್ರಿಲ್‌ನಲ್ಲಿ ಒಮ್ಮಿಂದೊಮ್ಮೆಲೇ ತಾನು ಗರ್ಭಿಣಿ ಎಂಬ ವಿಚಾರವನ್ನು ಘೋಷಿಸಿಕೊಂಡಾಗ ಅಭಿಮಾನಿಗಳು ಸೇರಿದಂತೆ ಎಲ್ಲರೂ ಶಾಕ್‌ ಆಗಿದ್ದರು.

Tap to resize

ಇದಾದ ನಂತರ ಕಳೆದ ವರ್ಷ ಆಗಸ್ಟ್‌ನಲ್ಲಿ ನಟಿ ಮಗನನ್ನು ಬರ ಮಾಡಿಕೊಂಡಿದ್ದು, ಮಗನಿಗೆ ಕೋವಾ ಫೀನಿಕ್ಸ್ ಡೋಲನ್ ಎಂದು ಹೆಸರಿಟ್ಟಿದ್ದಾರೆ ಈ ಪೋರ್ಚಗೀಸ್ ನಟಿ.

ಇತ್ತ ಇಲಿಯಾನಾ ತಾನು ಗರ್ಭಿಣಿ ಎಂದು ಘೋಷಿಸುತ್ತಿದ್ದಂತೆ ಆಕೆಯ ಅಭಿಮಾನಿಗಳಿಗೆ ಆಕೆಯ ಮಗುವಿನ ಅಪ್ಪ ಯಾರು ಎಂಬ ಕುತೂಹಲ ಶುರುವಾಗಿತ್ತು. ಅಲ್ಲದೇ ಒಬ್ಬರು ಮೈಕ್ ಡೊಲನ್ ಆಕೆಯ ಬಾಯ್‌ಫ್ರೆಂಡ್ ಎಂಬುದನ್ನು ಪತ್ತೆಯೂ ಮಾಡಿ ಬಿಟ್ಟಿದ್ದರು. 

ಈಗ ಇಲಿಯಾನಾ ಮಗನೊಂದಿಗೆ ತಾಯ್ತನದ ಅನುಭೂತಿಯನ್ನು ಅನುಭವಿಸುತ್ತಿದ್ದು, ಮಗನ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಈ ಬಾರಿ ಮಾತ್ರ ಅವರು ಇನ್ನು ವಿಶೇಷ ಎಂಬಂತೆ ಅಪ್ಪ ಮಗನ ಫೋಟೋ ಶೇರ್ ಮಾಡಿದ್ದು, ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. 

ಅಪ್ಪ ಮೈಕ್ ಡೊಲನ್ ಜೊತೆ ಕೋವಾ ಫೀನಿಕ್ಸ್ ಹಾಗೂ ನಟಿ ಇಲಿಯಾನಾ ಇರುವ ಫೋಟೋ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ ಮಗು ಕೋವಾ  ಅಪ್ಪ ಅಮ್ಮನೊಂದಿಗೆ ಇರುವುದನ್ನು ಕಾಣಬಹುದಾಗಿದೆ. ಸಮಯ ಎಷ್ಟು ವೇಗವಾಗಿ ಸಾಗುತ್ತಿದೆ. ಸಮಯ ಎಲ್ಲಿಗೆ ಹೋಗುತ್ತಿದೆ, ಅದರಂತೆ ನನ್ನ ಮಗನಿಗೆ ಒಂದು ತುಂಬಿದೆ ಎಂದು ಅವರು ಬರೆದುಕೊಂಡಿದ್ದಾರೆ. 

ಗರ್ಭಿಣಿಯಾದ ನಂತರದ ಸಂದರ್ಶನವೊಂದರಲ್ಲಿ ಇಲಿಯಾನ ತಮ್ಮ ಮದುವೆಯನ್ನು ಖಚಿತಪಡಿಸಿದ್ದರು. ಅಲ್ಲದೇ ತಮ್ಮ ಇನಿಯನ ಬಗ್ಗೆ ಮಾತನಾಡಿದ್ದರು. ಆತ ನನ್ನನ್ನು ನನ್ನ ಕೆಟ್ಟ ಸಮಯದಲ್ಲಿ ನೋಡಿದ, ಅದು ನನ್ನ ಜೀವನದ ಬಹಳ ಕೆಟ್ಟ ಸಮಯವಾಗಿತ್ತು. ಜೊತೆಗೆ ಆತ ನನ್ನ ಬದುಕಿನ ಒಳ್ಳೆಯ ಸಮಯವನ್ನು ನೋಡಿದ್ದಾನೆ. ಆತ ನಾವು ಭೇಟಿಯಾದ ಮೊದಲ ದಿನದಿಂದಲೂ ಒಂದೇ ರೀತಿ ಇದ್ದಾನೆ. ಅದೇ ಪ್ರೀತಿ ಅದೇ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ ಇಲಿಯಾನಾ

Latest Videos

click me!