ಅಲ್ಲು ಅರ್ಜುನ್ ಮೊದಲ ಬಾರಿಗೆ ಡಬಲ್ ರೋಲ್ನಲ್ಲಿ: ಸ್ಟಾರ್ ನಟರು, ಯುವ ನಟರು ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಡಬಲ್ ರೋಲ್ನಲ್ಲಿ ನಟಿಸಿದ್ದಾರೆ. ಆದರೆ ಟಾಲಿವುಡ್‌ನಲ್ಲಿ ಇದುವರೆಗೆ ಡಬಲ್ ರೋಲ್ನಲ್ಲಿ ಕಾಣಿಸಿಕೊಳ್ಳದ ಏಕೈಕ ನಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಅಟ್ಲಿ ನಿರ್ದೇಶನದ ಪ್ಯಾನ್ ವರ್ಲ್ಡ್ ಸಿನಿಮಾದಲ್ಲಿ ಅಲ್ಲು ಅರ್ಜುನ್ ಡಬಲ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಲ್ಕು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಕೂಡ ಇದೆ. ಆದರೆ ಇದು ನಿಜವೋ ಸುಳ್ಳೋ ಎಂಬುದು ಅಧಿಕೃತವಾಗಿ ಘೋಷಣೆಯಾದ ನಂತರವಷ್ಟೇ ತಿಳಿಯುತ್ತದೆ. ಶೀಘ್ರದಲ್ಲೇ ಐಕಾನ್ ಸ್ಟಾರ್ ಅಭಿಮಾನಿಗಳು ಬನ್ನಿಯನ್ನು ಡಬಲ್ ರೋಲ್ನಲ್ಲಿ ನೋಡಿ ಸಂಭ್ರಮಿಸಲಿದ್ದಾರೆ.