ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ಕೆಲವು ತಿಂಗಳುಗಳಿಂದ ತುಂಬಾನೇ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಅವಾರ್ಡ್ ಕಾರ್ಯಕ್ರಮಗಳ ಔಟ್‌ಫಿಟ್ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಇತ್ತೀಚಿಗೆ ಮುಂಬೈನಲ್ಲಿ ನಡೆದ ಕ್ರಿಟಿಕ್ ಚಾಯ್ಸ್ ಫಿಲ್ಮಂ ಅವಾರ್ಡ್ ಕಾರ್ಯಕ್ರಮದಲ್ಲಿ ಸಮಂತಾ ಭಾಗಿಯಾಗಿದ್ದರು. ಈ ವೇಳೆ ಗ್ರೀನ್ ಆ್ಯಂಡ್ ಬ್ಲ್ಯಾಕ್ ಸ್ಯಾಟಿನ್ ಗೌನ್ ಧರಿಸಿದ್ದಾರೆ.
ಸೌತ್ ಇಂಡಿಯಾ ಅವಾರ್ಡ್ ಕಾರ್ಯಕ್ರಮದ ಅಂದ್ರೆ ಮೈ ತುಂಬಿಕೊಳ್ಳುವಂಥ ಗೌನ್ ಅಥವಾ ಸೀರೆಯಲ್ಲಿ ಮಿಂಚುತ್ತಿದ್ದ ಚೆಲುವೆ, ಬಿ-ಟೌನ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಬಾಡಿ ಶೇಪ್ ಕಾಣುವಂತೆ ಸ್ಯಾಟಿನ್ ಗೌನ್ ಧರಿಸಿದ್ದು ಅನೇಕರಿಗೆ ಶಾಕ್ ಅಗಿದೆ.
ಇದು ನನಗೆ ಇಷ್ಟವಾದ ಲುಕ್. ಕ್ರಿಟಿಕ್ ಚಾಯ್ಸ್ ಕಾರ್ಯಕ್ರಮಕ್ಕೆ ಪ್ರೀತಮ್ ಡಿಸೈನ್ ಮಾಡಿರುವ ಉಡುಪು ಧರಿಸಿರುವೆ, ಕೇಶ ವಿನ್ಯಾಸ ರೋಹಿತ್ ಮತ್ತು ಮೇಕಪ್‌ನ ಅವನಿ ರಂಬಿಯಾ ಮಾಡಿದ್ದಾರೆ ಎಂದು ಸಮಂತಾ ಬರೆದುಕೊಂಡಿದ್ದಾರೆ.
ಇದು ಬ್ಲ್ಯಾಕ್, ಲೈಟ್ ಗ್ರೀನ್ ಮತ್ತು ಡಾರ್ಕ್ ಗ್ರೀನ್ ಕಾಂಬಿನೇಷನ್ ಡ್ರೆಸ್ ಆಗಿದ್ದು ಚಿಮ್ಕಾರಿಯಲ್ಲಿ ಹೂವಿನ ಡಿಸೈನ್ ಮಾಡಿದ್ದಾರೆ. ಯಾವುದೇ ರೀತಿ ಆಭರಣ ಧರಿಸಿಲ್ಲ. ಆದರೆ ಎತ್ತರವಾದ ಹೀಲ್ಸ್ ಹಾಕಿ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿದ್ದಾರೆ.
ಅವಾರ್ಡ್ ಕಾರ್ಯಕ್ರಮದಿಂದ ಹೈದರಾಬಾದ್‌ಗೆ ಹಿಂದಿರುವಾಗ ಟಾಮ್ ಬಾಯಿ ರೀತಿ ಮಾರ್ಡನ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸಮಂತಾಳನ್ನು ಪ್ಯಾಪರಾಜಿಗಳು ಸೆರೆ ಹಿಡಿದಿದ್ದಾರೆ.
ಸಮಂತಾ ಜೀ ನಿಮಗೆ ಹಿಂದಿ ಬರುತ್ತಾ? ಎಂದು ಕೇಳಿದಾಗ ಹು ಎಂದು ತಲೆ ಆಡಿಸಿ ಸ್ವಲ್ಪ ಸ್ವಲ್ಪ ಎಂದಿದ್ದಾರೆ. ಸಮಂತಾ innocenceಗೆ ಎಲ್ಲರೂ ಫಿದಾ ಆಗಿದ್ದಾರೆ.