ಹೌದು ಟಾಲಿವುಡ್‌ನಲ್ಲಿ ನಟ ಭೂಷಣ, ಅಂದಗಾಡು, ಸೊಗ್ಗಾಡು, ಹೀಗೆ ಅನೇಕ ಬಿರುದುಗಳ ಜೊತೆಗೆ ಲೇಡಿ ಫಾಲೋಯಿಂಗ್ ಹೆಚ್ಚಾಗಿ ಹೊಂದಿದ್ದ ಹೀರೋ ಅಂದಿನ ಕಾಲದಲ್ಲಿ ಶೋಭನ್ ಬಾಬು ಮಾತ್ರ. ಅವರ ಅಂದಕ್ಕೆ, ನಟನೆಗೆ ಅಂದಿನವರು ಫಿದಾ ಆಗಿ ಹೋಗುತ್ತಿದ್ದರಂತೆ. ಅಷ್ಟೇ ಅಲ್ಲ ಅಂದಿನ ಲೇಡಿ ಫ್ಯಾನ್ಸ್ ಜೊತೆಗೆ ಅವರೊಂದಿಗೆ ನಟಿಸುವ ಲೇಡಿ ಸ್ಟಾರ್‌ಗಳು ಕೂಡ ಶೋಭನ್ ಬಾಬು ಅವರನ್ನು ತಮ್ಮ ಕನಸಿನ ರಾಜನಂತೆ ಊಹಿಸಿಕೊಳ್ಳುತ್ತಿದ್ದರಂತೆ. ಅಷ್ಟು ಹೆಸರು ಸಂಪಾದಿಸಿಕೊಂಡಿದ್ದರು ಶೋಭನ್ ಬಾಬು.