ರಾಜಮೌಳಿ ಪ್ಯಾನ್ ವರ್ಲ್ಡ್ ಸಿನಿಮಾ ಇಂದ ಮಹೇಶ್ ಬಾಬು ಲುಕ್ ಲೀಕ್ ಆಗಿದೆ. ಜಿಮ್ ನಲ್ಲಿ ಮಹೇಶ್ ಬಾಬು ವರ್ಕೌಟ್ ಮಾಡ್ತಿರುವಾಗ ಸೀಕ್ರೆಟ್ ಆಗಿ ತೆಗೆದ ವಿಡಿಯೋ ಒಂದು ಹೊರಗೆ ಬಂದಿದೆ. ಈ ಲುಕ್ ನಲ್ಲಿ ಮಹೇಶ್ ಬಾಬು ಅವರನ್ನ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅವರ ಹೇರ್ ಸ್ಟೈಲ್, ಬಾಡಿ ಎಲ್ಲ ಟ್ರಾನ್ಸ್ ಫಾರ್ಮೇಷನ್ ಆಗಿದೆ. ಮುಖ್ಯವಾಗಿ ಹೇರ್ ಸ್ಟೈಲ್ ನೋಡಿದ್ರೆ ಸಿಂಹ ತರ ಕಾಣ್ತಿದೆ. ಸಿಂಹಕ್ಕೆ ಜೂಲು ಹೇಗಿರುತ್ತೋ ಹಾಗೆ ಇದೆ. ಜೂಲು ಬಿಟ್ಕೊಂಡು ಸಿಂಹ ಹೆಂಗ್ ನಡಿತದೋ ಹಾಗೆ ಮಹೇಶ್ ಬಾಬು ಅತ್ತಿತ್ತ ನಡೆದಿದ್ದಾರೆ. ಇದನ್ನ ನೋಡಿ ಖುಷ್ ಆಗ್ತಿದ್ದಾರೆ ಫ್ಯಾನ್ಸ್.