ರಾಕುಲ್ ಪ್ರೀತ್’ನಿಂದ ನಾಗಾರ್ಜುನ್ ವರೆಗೂ ಟಾಲಿವುಡ್’ನ ಈ ಸೆಲೆಬ್ರೀಟಿಗಳು ಲಕ್ಸುರಿ ರೆಸ್ಟೋರೆಂಟ್ ಮಾಲೀಕರು

Published : Feb 19, 2025, 01:39 PM ISTUpdated : Feb 19, 2025, 02:15 PM IST

ರುಚಿ ರುಚಿಯಾದ ತಿಂಡಿಗಳನ್ನು ನೀಡುವ, ಹಾಗೂ ಅದ್ಭುತವಾದ ಜಾಗದಲ್ಲಿ ನೆಲೆಯಾಗಿರುವ ದುಬಾರಿ ರೆಸ್ಟೋರೆಂಟ್ ಗಳ ಮಾಲೀಕರು ಟಾಲಿವುಡ್’ನ ಈ ಸೆಲೆಬ್ರಿಟಿಗಳು.   

PREV
19
ರಾಕುಲ್ ಪ್ರೀತ್’ನಿಂದ ನಾಗಾರ್ಜುನ್ ವರೆಗೂ ಟಾಲಿವುಡ್’ನ ಈ ಸೆಲೆಬ್ರೀಟಿಗಳು ಲಕ್ಸುರಿ ರೆಸ್ಟೋರೆಂಟ್ ಮಾಲೀಕರು

ಸ್ಟಾರ್ ನಟರು ಎಂದ ಮೇಲೆ ಅವರ ಬಳಿ ಸಾಕಷ್ಟು ಹಣ ಇದ್ದೇ ಇರುತ್ತೆ. ಹಲವು ನಟ-ನಟಿಯರು ವಿವಿಧ ರೀತಿಯಲ್ಲಿ ಅವುಗಳನ್ನು ಇನ್’ವೆಸ್ಟ್ ಮಾಡುತ್ತಾರೆ. ತೆಲುಗು ಚಿತ್ರರಂಗದ ಹೆಚ್ಚಿನ ತಾರೆಯರು ಹೈದರಾಬಾದಿನಲ್ಲಿ ತಮ್ಮದೇ ಆದ ರೆಸ್ಟೋರೆಂಟ್ ಗಳನ್ನು ಕೂಡ ಹೊಂದಿದ್ದಾರೆ. ಆ ನಟರು ಯಾರು ನೋಡೋಣ. 
 

29

ರಾಕುಲ್ ಪ್ರೀತ್
ಕನ್ನಡದ ಗಿಲ್ಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ತೆಲುಗು ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದು, ಸದ್ಯ ಹಿಂದಿ, ತಮಿಳು, ತೆಲುಗು ಸೇರಿ ಬಹುಭಾಷೆಯಲ್ಲಿ ಗುರುತಿಸಿಕೊಂಡಿರುವ ನಟಿ ರಾಕುಲ್ ಪ್ರೀತ್ ಮಾಧಾಪುರ್ ನಲ್ಲಿ ‘ಆರಂಭಮ್’ (Arambham) ಎನ್ನುವ ಹೆಸರಿನಲ್ಲಿ ರೆಸ್ಟೋರೆಂಟ್ ತೆರೆದಿದ್ದಾರೆ. 

39

ನಾಗ ಚೈತನ್ಯ
ತೆಲುಗು ಚಿತ್ರರಂಗದ ಮತ್ತೊಬ್ಬ ಸ್ಟಾರ್ ನಟ ನಾಗ ಚೈತನ್ಯ ಕೂಡ ಹೈದರಾಬಾದಿನ ಜುಬ್ಲಿ ಹಿಲ್ಸ್ ನಲ್ಲಿ ಶೋಯು (Shoyu) ಎನ್ನುವ ಹೆಸರಿನ ರೆಸ್ಟೋರೆಂಟ್ ಹೊಂದಿದ್ದಾರೆ. 

49

ವಿಜಯ್ ದೇವರಕೊಂಡ ಮತ್ತು ಆನಂದ್ ದೇವರಕೊಂಡ
ತೆಲುಗು ಚಿತ್ರರಂಗದ ಈ ಅಣ್ಣ ತಮ್ಮಂದಿರ ಜೋಡಿ ಕಾಜಗುಡ್ಡದಲ್ಲಿ ಗುಡ್ ವೈಬ್ಸ್ ಓನ್ಲಿ ಕೆಫೆ (Good Vibes Only Cafe) ಎನ್ನುವ ರೆಸ್ಟೋರೆಂಟ್ ಹೊಂದಿದ್ದಾರೆ. 

59

ಮಹೇಶ್ ಬಾಬು - ನಮೃತಾ ಶಿರೋಡ್ಕರ್
ಟಾಲಿವುಡ್ ನ ಈ ಸೆಲೆಬ್ರಿಟಿ ಜೋಡಿಗಳು ಸಹ ತಮ್ಮದೇ ಆದ ರೆಸ್ಟೋರೆಂಟ್ ನಡೆಸುತ್ತಿದ್ದು, ಇದು ಬಂಜಾರ ಹಿಲ್ಸ್ ನಲ್ಲಿದೆ. ಈ ಜೋಡಿಯ ಮಾಲೀಕತ್ವದ ರೆಸ್ಟೋರೆಂಟ್  ಹೆಸರು  AN ರೆಸ್ಟೋರೆಂಟ್ (AN Restaurant)  . 
 

69

ಅಕ್ಕಿನೇನಿ ನಾಗಾರ್ಜುನ್
ಕೇವಲ ಮಗ ಮಾತ್ರ ಅಲ್ಲ, ನಾಗ ಚೈತನ್ಯ ತಂದೆ ಸೂಪರ್ ಸ್ಟಾರ್ ನಾಗಾರ್ಜುನ ಕೂಡ ಹೈದರಾಬಾದಿನ ಜುಬ್ಲಿ ಹಿಲ್ಸ್ ನಲ್ಲಿ N ಗ್ರಿಲ್ & N  ಏಶಿಯನ್ (N Grill & N Asian) ಎನ್ನುವ ರೆಸ್ಟೋರೆಂಟ್ ಹೊಂದಿದ್ದಾರೆ. 

79

ಅಲ್ಲು ಅರ್ಜುನ್
ಪುಷ್ಪಾ ಸ್ಟಾರ್ ಅಲ್ಲು ಅರ್ಜುನ್ ಕೂಡ ಜುಬ್ಲಿ ಹಿಲ್ಸ್ ನಲ್ಲಿ ಬಫೆಲ್ಲೋ ವೈಲ್ಡ್ ವಿಂಗ್ಸ್ (Buffalo Wild Wings)  ಎನ್ನುವ ಈಟರಿಯ ಮಾಲಿಕರಾಗಿದ್ದಾರೆ. 

89

ಸಂದೀಪ್ ಕಿಶನ್
ತೆಲುಗು ನಟ ಸಂದೀಪ್ ಕಿಶನ್ ಜುಬ್ಲಿ ಹಿಲ್ಸ್ ನಲ್ಲಿ ವಿವಾಹ ಭೋಜನಂಭು (Vivaha Bhojanambu) ಎನ್ನುವ ಆಥೆಂಟಿಕ್ ತೆಲುಗು ಕುಸಿನ್ಸ್ ಹೊಂದಿರುವ ರೆಸ್ಟೋರೆಂಟ್ ತೆರೆದಿದ್ದಾರೆ. 

99

ರಾಣಾ ದಗ್ಗುಭಾಟಿ
ದಗ್ಗುಭಾಟಿ ಮನೆತನದ ಕುಡಿ ರಾಣಾ ದಗ್ಗುಭಾಟಿ ಕೂಡ ಒಂದು ಲಕ್ಸುರಿ ರೆಸ್ಟೋರೆಂಟ್ ಮಾಲೀಕರಾಗಿದ್ದು, ಇವರ ಒಡೆತನದ ಸಾಂಕ್ಚುರಿ ಬಾರ್ ಆಂಡ್ ಕಿಚನ್ (Sanctuary Bar & Kitchen) ಜುಬ್ಲಿ ಹಿಲ್ಸ್ ನಲ್ಲಿದೆ. 

Read more Photos on
click me!

Recommended Stories