ಪ್ರತಿಭಾವಂತ ನಟಿ ಮತ್ತು ಗಾಯಕಿ ಶ್ರುತಿ ಹಾಸನ್ 'ಸಲಾರ್' ಸಿನಿಮಾದಲ್ಲಿ ಆದ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟಿ ತಮ್ಮ ಫ್ಯಾಷನ್ ಆಯ್ಕೆಗಳಿಂದ ಯಾವಾಗಲು ಸುದ್ದಿಯಲ್ಲಿರುತ್ತಾರೆ.
ಟಾಲಿವುಡ್ ಸ್ಟಾರ್ ಹೀರೋಯಿನ್ ಶ್ರುತಿ ಹಾಸನ್ ತನ್ನ ಬ್ಯೂಟಿ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಗೋಲ್ಡ್ ಅಂಡ್ ಸಿಲ್ವರ್ ಮಿಕ್ಸಿಂಗ್ ಸೀರೆಯುಟ್ಟು, ಫುಲ್ ಹ್ಯಾಂಡ್ಸ್ ಬ್ಲೌಸ್ ತೊಟ್ಟಿದ್ದ ಶ್ರುತಿ ಹಾಸನ್, ಮುಡಿಗೆ ಚೆಂದದ ಹೂವು ಮುಡಿದು ಗೊಂಬೆಯಂತೆ ಕಾಣ್ತಿದ್ದಾರೆ.
ಶ್ರುತಿ ಹಾಸನ್ ಟ್ರೆಡಿಷನಲ್ ಲುಕ್‌ನಲ್ಲಿ ಬಾಲಿವುಡ್‌ನ ಎವರ್ ಗ್ರೀನ್ ಬ್ಯೂಟಿ ರೇಖಾ, ಕಮಲ್ ಹಾಸನ್ ಪತ್ನಿ ಸಾರಿಕಾ ರೀತಿ ಕಾಣಿಸಿಕೊಂಡಿದ್ದಾರೆ. ಆದರೆ ಶ್ರುತಿ ಹಾಸನ್ ಇಂಡಸ್ಟ್ರಿಯಲ್ಲಿ ತನಗೆ ಇಷ್ಟವಾದ ಸಿನಿಮಾಗಳನ್ನು ಮಾಡುತ್ತಿದ್ದರೂ. ಇದೀಗ ಸಿನಿಮಾಗಳ ಆಯ್ಕೆಯಲ್ಲಿ ಕೊಂಚ ಯೋಚನೆ ಮಾಡ್ತಿದ್ದಾರೆ.
ಶ್ರುತಿ ಹಾಸನ್ ಫೋಟೋಗಳಿಗೆ ಲೈಕ್ಗಳ ಸುರಿಮಳೆಯಾಗಿದೆ. ಜೊತೆಗೆ ನೆಟ್ಟಿಗರು, ಟ್ರೆಡಿಷನಲ್ ಲುಕ್ ಸೂಪರ್, ಈ ಬದಲಾವಣೆಗೆ ಕಾರಣವೇನು, ಬ್ಯೂಟಿಫುಲ್, ನಿಮ್ಮ ತಾಯಿ ಸಾರಿಕಾ ತರಹ ಕಾಣ್ತಿದ್ದೀರಾ ಅಂತೆಲ್ಲಾ ತರೇಹವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಟಾಲಿವುಡ್ ಬಿಗ್ ಸ್ಟಾರ್‌ಗಳಾದ ಬಾಲಯ್ಯ ಮತ್ತು ಚಿರು ಜೊತೆ ಟಾಲಿವುಡ್‌ನಲ್ಲಿ ಎರಡು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹಾಸನ್ ಇದೀಗ ಟ್ರೆಡಿಷನಲ್ ಲುಕ್‌ನಿಂದ ಸೋಶಿಯಲ್ ಮೀಡಿಯಾ ಶೇಕ್ ಮಾಡಿದ್ದಾರೆ.
ಟಾಲಿವುಡ್‌ನ ನಂಬರ್ ಒನ್ ನಾಯಕಿಯಾಗಿ ಮಿಂಚಿದ್ದ ಶ್ರುತಿ ಹಾಸನ್, ಈಗ ಸ್ವಲ್ಪ ಗ್ಯಾಪ್ ನಂತರ ತೆಲುಗಿನಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ರವಿತೇಜ ಎದುರು ಕ್ರ್ಯಾಕ್ ಚಿತ್ರದಲ್ಲಿ ನಟಿಸಿ ಶ್ರುತಿ ಹಾಸನ್ ಹಿಟ್ ಆಗಿದ್ದರು.
ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಹೆಸರು ಮಾಡಿದ್ದಾರೆ. ದೊಡ್ಡ ಸ್ಟಾರ್ಗಳ ಜೊತೆ ಸ್ಕ್ರೀನ್ ಶೇರ್ ಮಾಡುತ್ತಾ, ಬಾಯ್ಫ್ರೆಂಡ್ ಜೊತೆ ತನಗೆ ಇಷ್ಟ ಬಂದಂತೆ ಜೀವನ ನಡೆಸುತ್ತಿರುವ ಇವರು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.