Sai Pallavi: ಕೂದಲು ಉದುರದಿರಲಿ ಎಂದು ದಿನವೂ ದೇವ್ರಿಗೆ ಪ್ರಾರ್ಥಿಸ್ತಾರೆ ಪ್ರೇಮಂ ನಟಿ

Published : Oct 09, 2021, 11:12 AM ISTUpdated : Oct 09, 2021, 05:16 PM IST

ಸಹಜ ಸುಂದರಿ ಸಾಯಿ ಪಲ್ಲವಿಗೆ ನೀಳ ಕೇಶ ರಾಶಿಯೇ ಸೌಂದರ್ಯ ನ್ಯಾಚುರಲ್ ಬ್ಯೂಟಿಯ ಹೇರ್ ಕೇರ್ ಸೀಕ್ರೆಟ್ ಗೊತ್ತಾ ?

PREV
18
Sai Pallavi: ಕೂದಲು ಉದುರದಿರಲಿ ಎಂದು ದಿನವೂ ದೇವ್ರಿಗೆ ಪ್ರಾರ್ಥಿಸ್ತಾರೆ ಪ್ರೇಮಂ ನಟಿ

ನಟನೆ ಮಾತ್ರವಲ್ಲದೆ ನಟಿ ಸಾಯಿ ಪಲ್ಲವಿ ತನ್ನ ಸಹಜ ಸೌಂದರ್ಯದಿಂದಲೇ ಫೇಮಸ್. ನಟಿಯ ನ್ಯಾಚುರಲ್ ತ್ವಚೆ, ಲಾಂಗ್ ಹೇರ್ ಸಖತ್ ಎಟ್ರಾಕ್ಟಿವ್. ಮುದ್ದು ಮುಖದ ಚೆಲುವೆಗೆ ಲಾಂಗ್ ಹೇರ್ ಹೆಚ್ಚಿಗೆ ಮೆರುಗು.

28

ನೀಳ ಗುಂಗುರು ಕೂದಲಿನ(Curly hair) ನಟಿಗೆ ಸಿನಿಮಾಗಳಲ್ಲಿ(Cinema) ಅವರ ಕೂದಲೂ(Hair) ಒಂದು ಪ್ಲಸ್ ಪಾಯಿಂಟ್. ನಟಿಯ(Actress) ಪರ್ಸನಾಲಿಟಿಯಲ್ಲಿ(Personality) ಅವರ ಸುಂದರ ಕೂದಲಿನ ಪಾತ್ರ ದೊಡ್ಡದು.

38

ಹಳ್ಳಿಯ ಮೂಲದ ನಟಿ ಸಾವಯವ ಬದುಕನ್ನು ಅನುಸರಿಸುತ್ತಾರೆ. ತ್ವಚೆಯ ಆರೈಕೆ, ಸೌಂದರ್ಯ ಎಲ್ಲದರಲ್ಲಿಯೂ ನಟಿಗೆ ನೈಸರ್ಗಿಕ ಮಾರ್ಗಗಗಳ ಕುರಿತು ಹೆಚ್ಚಿನ ಅಕ್ಕರೆ. ಹಾಗಾಗಿಯೇ ನಟಿ ರಾಸಾಯನಿಕ ಸೌಂದರ್ಯ ವರ್ಧಕ, ಪ್ರಾಡಕ್ಟ್‌ಗಳನ್ನು ಹೆಚ್ಚಾಗಿ ಅವಾಯ್ಡ್ ಮಾಡುತ್ತಾರೆ.

48

ಸಂದರ್ಶನವೊಂದರಲ್ಲಿ ಮಾತನಾಡಿದ ಸಾಯಿ ಪಲ್ಲವಿ ತನ್ನ ನೀಳ ಕೂದಲಿನ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಕೂದಲಿನ ಆರೋಗ್ಯದಲ್ಲಿ ಮೊದಲ ಸೀಕ್ರೆಟ್ ಆರೋಗ್ಯಕರ ಆಹಾರ ಎಂದು ಹೇಳಿದ್ದಾರೆ.

58

ಪ್ರತಿ ಮೂರು ದಿನಗಳಿಗೊಮ್ಮೆ ನಟಿ ತಲೆ ಸ್ನಾನ ಮಾಡುವುದಾಗಿ ಹೇಳಿದ್ದಾರೆ. ಅವಳ ಕೂದಲು ಉದುರದಂತೆ ಪ್ರತಿದಿನ ಪ್ರಾರ್ಥಿಸುತ್ತಾರಂತೆ ಸಾಯಿ ಪಲ್ಲವಿ. ಅಲೋವೆರಾ ಸಾಯಿ ಪಲ್ಲವಿಯ ಬೆಸ್ಟ್ ಫ್ರೆಂಡ್.

'ಲವ್‌ಸ್ಟೋರಿ' ಸಿನಿಮಾ ಮಾಡಿದ್ರು ಇದುವರೆಗೂ ಕಿಸ್ಸಿಂಗ್ ಸೀನ್ ಮಾಡಿಲ್ಲ ಸಾಯಿ ಪಲ್ಲವಿ

68

ನಟಿ ತನ್ನ ಕೂದಲಿಗೆ ಅಲೋ ವೆರಾ ಬಳಸುತ್ತಾರೆ. ಕೂದಲನ್ನು ಉದ್ದ ಮತ್ತು ಆರೋಗ್ಯವಾಗಿಡಲು ನೈಸರ್ಗಿಕ ಕೂದಲ ರಕ್ಷಣೆಯ ವಿಧಾನಗಳನ್ನು ಅನುಸರಿಸುವುದಾಗಿ ಹೇಳಿದ್ದಾರೆ.

78

ಸಾವಯವ ಉತ್ಪನ್ನಗಳನ್ನು ಬಳಸುವುದು, ಅಲೋವೆರಾವನ್ನು ಬಳಸುವುದು ಹಾಗೂ ತ್ವಚೆ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಆರೋಗ್ಯಕರ ಆಹಾರಕ್ರಮ ಅನುಸರಿಸುತ್ತಾರೆ ಎಂಬುದನ್ನು ನಟಿ ಹೇಳಿದ್ದಾರೆ.

88

ಸಾಯಿ ಪಲ್ಲವಿ ಇತ್ತೀಚೆಗೆ ಲವ್ ಸ್ಟೋರಿ 2021 ರಲ್ಲಿ ಕಾಣಿಸಿಕೊಂಡಿದ್ದರು. ನಟಿ ಸಮಂತಾ ರುತ್ ಪ್ರಭು ಅವರ ಮಾಜಿ ಪತಿ ನಾಗ ಚೈತನ್ಯ ಜೊತೆ ನಟಿಸಿದ್ದಾರೆ. ಸಿನಿಮಾ ಉತ್ತಮ ವಿಮರ್ಶೆ ಪಡೆದಿದೆ. ಪ್ರೇಕ್ಷಕರು ಚಿತ್ರದಲ್ಲಿ ಆಕೆಯ ಪಾತ್ರವನ್ನು ಇಷ್ಟಪಟ್ಟಿದ್ದಾರೆ.

click me!

Recommended Stories