ವೈರಲ್‌ಗಾಗಿ ಬಾಯ್‌ಫ್ರೆಂಡ್ ಜೊತೆಗಿನ ಖುಲ್ಲಂ ಖುಲ್ಲಾ ವಿಡಿಯೋ ಲೀಕ್ ಮಾಡಿದ ರೀಲ್ಸ್ ರಾಣಿ!

First Published | Nov 13, 2024, 2:56 PM IST

ನಟಿಯರ ಖಾಸಗಿ ವಿಡಿಯೋ ಲೀಕ್ ಪ್ರಕರಣಗಳು ಭಾರಿ ಕೋಲಾಹಲ ಸೃಷ್ಟಿಸಿದೆ. ಇದರ ನಡುವೆ ತಾನ ಜನಪ್ರಿಯಳಾಗಬೇಕು ಎಂದು ಖ್ಯಾತ ರೀಲ್ಸ್ ತಾರೆ ಬಾಯ್‌ಫ್ರೆಂಡ್ ಜೊತೆಗಿನ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದ್ದಾಳೆ.
 

ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ದಿನಬೆಳಗಾಗುವುದರೊಳಗೆ ಸ್ಟಾರ್ ಆಗಲು ಬಯಸುವವರ ಸಂಖ್ಯೆ ಹೆಚ್ಚು. ಇದಕ್ಕಾಗಿ ಭಿನ್ನ ಸರ್ಕಸ್ ಮಾಡುತ್ತಾರೆ. ಅದ್ಯಾವ ಮಟ್ಟಕ್ಕೂ ಇಳಿಯುತ್ತಾರೆ. ಒಟ್ಟು ವೈರಲ್ ಆಗಬೇಕು, ಫೇಮಸ್ ಆಗಬೇಕು. ತನ್ನ ವಿಡಿಯೋ ಜಗತ್ತು ನೋಡಬೇಕು ಅನ್ನೋ ಗೀಳು ಹಲವರಿಗಿದೆ. ಹೀಗೆ ಖ್ಯಾತ ರೀಲ್ಸ್ ತಾರೆ ಜನಪ್ರಿಯಳಾಗಲು ಬಾಯ್‌ಫ್ರೆಂಡ್ ಜೊತೆಗಿರುವ ತನ್ನದೇ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದ ಘಟನೆ ನಡೆದಿದೆ.

ಪಾಕಿಸ್ತಾನದ ಟಿಕ್‌ಟಾಕ್ ತಾರೆ ಮಿನಾಹಿಲ್ ಮಲಿಕ್ ಖಾಸಗಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದೆ. ಮಿನಾಹಿಲ್ ಮಲಿಕ್ ಪಾಕಿಸ್ತಾನದಲ್ಲಿ ಜನಪ್ರಿಯಳಾಗಿದ್ದಾಳೆ. ಆದರೆ ತನ್ನ ರೇಂಜ್ ಹೆಚ್ಚಿಸಲು ಹಲವು ಸರ್ಕಸ್ ಮಾಡಿದ್ದಾಳೆ. ಬೋಲ್ಡ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾಳೆ. ಆದರೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಪಾಕಿಸ್ತಾನ ಪಡ್ಡೆ ಹುಡುಗರು ಮಾತನಾಡಿಕೊಳ್ಳಲಿಲ್ಲ. 

Tap to resize

ಎಲ್ಲರ ಬಾಯಲ್ಲೂ, ಎಲ್ಲರ ಮನದಲ್ಲೂ ತಾನಿರಬೇಕು ಎಂದು ಮಿನಾಹಿಲ್ ಮಲಿಕ್ ಹೊಸ ಸಾಹಸ ಮಾಡಿದ್ದಾಳೆ. ಬಾಯ್‌ಫ್ರೆಂಡ್ ಜೊತೆ ಕಳೆದ ಖಾಸಗಿ ಕ್ಷಣಗಳ ವಿಡಿಯೋವನ್ನು  ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾಳೆ ಅನ್ನೋ ಆರೋಪ ಕೇಳಿಬಂದಿದೆ. ಈ ಕುರಿತ ಪಾಕಿಸ್ತಾನದ ಮತ್ತೊರ್ವ ನಟಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಮಿನಾಹಿಲ್ ಮಲಿಕ್ ತನ್ನದೇ ವಿಡಿಯೋಗಳನ್ನು ಲೀಕ್ ಮಾಡಿ ಜನಪ್ರಿಯರಾಗಲು ಬಯಸಿದ್ದಾರೆ. ಇದು ಅವರ ತಂತ್ರ ಎಂದು ಪಾಕಿಸ್ತಾನದ ನಟಿ ಮಿಶಿ ಖಾನ್ ಆರೋಪಿಸಿದ್ದಾರೆ. ಇಂತಹ ಐಡಿಯಾಗಳನ್ನು ಬಾಲಿವುಡ್ ನಟಿಯರಿಂದ ಪಡೆದಿದ್ದಾರೆ. ಉದ್ದೇಶಪೂರ್ವಕವಾಗಿ ಈ ವಿಡಿಯೋ ಲೀಕ್ ಮಾಡಿ ಪಾಕಿಸ್ತಾನದಲ್ಲಿ ಸೆನ್ಸೇಶನ್ ಆಗಲು ಬಯಸಿದ್ದಾರೆ ಎಂದು ಮಿಶಿ ಖಾನ್ ಆರೋಪಿಸಿದ್ದಾರೆ.
 

ಖಾಸಗಿ ವಿಡಿಯೋಗಳು ಭಾರಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಮಿನಾಹಿಲ್ ಮಲಿಕ್ ಎಚ್ಚೆತ್ತುಕೊಂಡಿದ್ದಾರೆ. ವಿಡಿಯೋ ವಿರುದ್ದ ಭಾರಿ ಆಕ್ರೋಶಗಗಳು ವ್ಯಕ್ತವಾಗಿತ್ತು. ಹೀಗಾಗಿ ಸ್ಪಷ್ಟನೆ ನೀಡಿರುವ ಮನಾಹಿಲ್ ಮಲಿಕ್, ಇದು ನಕಲಿ ವಿಡಿಯೋ. ಕಿಡಿಗೇಡಿಗಳು ಹೆಸರು ಕೆಡಿಸಲು ಮಾಡಿದ ವಿಡಿಯೋ ಇದಾಗಿದೆ. ಮಾರ್ಫಿಂಗ್ ಮಾಡಿ ವಿಡಿಯೋ ಹರಿಬಿಡಲಾಗಿದೆ ಎಂದು ಮಲಿಕ್ ಹೇಳಿದ್ದಾರೆ.

ಇದೀಗ ಗೂಗಲ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಜನ ಪಾಕಿಸ್ತಾನಿ ಟಿಕ್‌ಟಾಕ್ ವೈರಲ್ ವಿಡಿಯೋ ಎಂದು ಸರ್ಚ್ ಮಾಡುತ್ತಿದ್ದಾರೆ. ಬಹುತೇಕ ಜಾಲತಾಣಗಳಲ್ಲಿ ಮಿನಾಹಿಲ್ ಮಲಿಕ್ ಟ್ರೆಂಡ್ ಆಗಿದ್ದಾರೆ. ಇದೀಗ ಮಲಿಕ್ ಹಳೇ ವಿಡಿಯೋಗಳು ಕೂಡ ವೈರಲ್ ಆಗುತ್ತಿದೆ. 

ಮಿನಾಹಿಲ್ ಮಲಿಕ್ ಡ್ಯಾನ್ಸ್ ವಿಡಿಯೋ ಮೂಲಕ ಜನಪ್ರಿಯರಾಗಿದ್ದಾರೆ. ಜನಪ್ರಿಯ ಹಾಡುಗಳಿಗೆ ಲಿಪ್‌ಸಿಂಕ್ ಮಾಡಿ ಡ್ಯಾನ್ಸ್ ಮಾಡುತ್ತಲೆ ಮಿಲಿಯನ್ ಅಭಿಮಾನಿಗಳನ್ನು ಗಳಿಸಿದ್ದಾರೆ. ಪ್ರತಿ ದಿನ ಹೊಸ ಹೊಸ ಡ್ಯಾನ್ಸ್ ಹಾಗೂ ಇತರ ರೀಲ್ಸ್ ವಿಡಿಯೋಗಳನ್ನು ಹಾಕಿ ಅಭಿಮಾನಿಗಳ ಮೋಡಿ ಮಾಡುತ್ತಲೇ ಇರುತ್ತಾರೆ. ಇದರ ನಡುವೆ ವಿವಾದವೊಂದು ಸೃಷ್ಟಿಯಾಗಿದೆ.

Latest Videos

click me!