Kangana Ranaut: ಎಲ್ಲದರ ಬಗ್ಗೆ ಯಾಕೆ ಮಾತಾಡ್ತೀನಿ ಅಂತೀರಲ್ಲ, ಇದು ನನ್ನ ಉತ್ತರ ಎಂದ ನಟಿ

Published : Nov 10, 2021, 11:42 AM ISTUpdated : Nov 10, 2021, 12:26 PM IST

ಯಾಕಪ್ಪಾ ಎಲ್ಲದರ ಬಗ್ಗೆ ಮಾತಾಡ್ತೀರಿ, ಇದು ನಿಮ್ಮ ಕೆಲಸ ಅಲ್ಲ ಎನ್ನುವವರಿಗೆ ಕಂಗನಾ(Kangana)ಉತ್ತರ ನಾನ್ಯಾಕೆ ಎಲ್ಲದರ ಬಗ್ಗೆ ಮಾತಾಡ್ತಿನಿ ಎಂದು ಕೇಳೋದರಿಗೆ ನನ್ನ ಪ್ರಶಸ್ತಿಯೇ ಉತ್ತರ ಎಂದ ನಟಿ

PREV
16
Kangana Ranaut: ಎಲ್ಲದರ ಬಗ್ಗೆ ಯಾಕೆ ಮಾತಾಡ್ತೀನಿ ಅಂತೀರಲ್ಲ, ಇದು ನನ್ನ ಉತ್ತರ ಎಂದ ನಟಿ

ಕಂಗನಾ ಅವರು ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಆಗಾಗ್ಗೆ ತಮ್ಮ ಅಭಿಪ್ರಾಯವನ್ನು ಹೇಗೆ, ಯಾಕೆ ನೀಡುತ್ತಾರೆ ಎಂಬುದು ಎಲ್ಲರ ಪ್ರಶ್ನೆ. ಇದಕ್ಕೆ ಕಂಗನಾ ಈಗ ಉತ್ತರ ಕೊಟ್ಟಿದ್ದಾರೆ.

26

ದೇಶದ ಯಾವುದೇ ಮೂಲೆಯಲ್ಲಿ ಏನೇ ಬೆಳವಣಿಗೆಯಾಗಲಿ ನಟಿ ಕಂಗನಾ ಅದಕ್ಕೆ ಮೊದಲು ಪ್ರತಿಕ್ರಿಯಿಸುತ್ತಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಹಲವು ಸಲ ಭಾರೀ ಟೀಕೆ, ಟ್ರೋಲ್ ನಡೆಯುತ್ತದೆ.

36

ಇಷ್ಟೆಲ್ಲ ಮಾಡುವುದರಿಂದ ನನಗೆ ಏನು ಸಿಗುತ್ತದೆ ಎಂದು ಜನರು ನನ್ನನ್ನು ಆಗಾಗ್ಗೆ ಕೇಳುತ್ತಾರೆ. ನಾನು ಇದನ್ನೆಲ್ಲಾ ಏಕೆ ಮಾಡುತ್ತೇನೆ? ಇದು ನಿಮ್ಮ ಕೆಲಸವಲ್ಲ ಎನ್ನುತ್ತಾರೆ ಎಂದಿದ್ದಾರೆ.

46

ಹಾಗಾಗಿ ಅಂತವರಿಗೆ ಈ ಪ್ರಶಸ್ತಿ ನನ್ನ ಉತ್ತರ. ಪದ್ಮಶ್ರೀ ರೂಪದಲ್ಲಿ ನನಗೆ ಸಿಕ್ಕಿರುವ ಅಂಗೀಕಾರ ಬಹಳಷ್ಟು ಜನರ ಬಾಯಿ ಮುಚ್ಚಿಸುತ್ತದೆ ಎಂದು ಕಂಗನಾ ಹೇಳಿದ್ದಾರೆ.

56

ಪದ್ಮಶ್ರೀ ಪ್ರಶಸ್ತಿ ಪಡೆದ ಹಿನ್ನೆಲೆ ವಿಡಿಯೋ ಶೇರ್ ಮಾಡಿದ್ದ ನಟಿ ಈ ವಿಚಾರಗಳನ್ನು ತಮ್ಮ ಫಾಲೋವರ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ

66

ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಕಂಗನಾಗೆ ಈಗ ಪದ್ಮಶ್ರಿಯೂ ದೊರೆತಿದೆ. ಏನೇ ವಿವಾದಾತ್ಮಕ ಹೇಳಿಕೆ ಕೊಟ್ಟರೂ ಕಂಗನಾ ಅಭಿನಯವನ್ನು ಮಾತ್ರ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ

 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories