ಅಂಬಾನಿ ಮನೆ ಕಾರ್ಯಕ್ರಮದಲ್ಲಿ ಕುಣಿದಿದ್ದಕ್ಕೆ ಶಾರೂಖ್, ಸಲ್ಮಾನ್, ಆಮೀರ್ ಚಾರ್ಜ್ ಮಾಡಿದ್ದೆಷ್ಟು?

First Published | Mar 6, 2024, 10:57 AM IST

ಆಮೀರ್ ಖಾನ್, ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೇ ಒಂದೇ ವೇದಿಕೆಯಲ್ಲಿ ಕುಣಿಯುವುದು ಅಸಾಧ್ಯವೆಂದೇ ಭಾವಿಸಲಾಗಿತ್ತು. ಆದರೆ, ಇದು ಅಂಬಾನಿ ಕುಟುಂಬದ ಕಾರ್ಯಕ್ರಮದಲ್ಲಿ ನೆರವೇರಿದೆ. ಇದಕ್ಕಾಗಿ ಈ ಖಾನ್‌ತ್ರಯರು ಚಾರ್ಜ್ ಮಾಡಿದ್ದೆಷ್ಟು?

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ವಿವಾಹಪೂರ್ವ ಕಾರ್ಯಕ್ರಮವು ಅದರ ಅದ್ಧೂರಿತನ, ಖರ್ಚು, ಸೆಲೆಬ್ರಿಟಿ ಅತಿಥಿಗಳು, ಅವರ ಫ್ಯಾಶನ್ ಹೀಗೆ ಹಲವಾರು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. 

3 ದಿನಗಳ ಕಾರ್ಯಕ್ರಮವು ಸಾಕಷ್ಟು ಹಿಂದೆಂದೂ ಕಂಡಿಲ್ಲದನ್ನು ಕಂಡಿತು. ಅದರಲ್ಲಿ ರಿಹಾನಾ ಭಾರತದಲ್ಲಿ ಮೊದಲ ಬಾರಿ ಪರ್ಫಾಮ್ ಮಾಡಿದ್ದರಿಂದ ಹಿಡಿದು ಬಾಲಿವುಡ್‌ನ ಮೂವರು ಖಾನ್‌ಗಳು ಒಟ್ಟಿಗೆ ಕುಣಿವವರೆಗೆ ಹಲವು ವಿಷಯಗಳು ಸೇರಿವೆ. 

Tap to resize

ಆಮೀರ್ ಖಾನ್, ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೇ ಒಂದೇ ವೇದಿಕೆಯಲ್ಲಿ ಕುಣಿಯುವುದು ಅಸಾಧ್ಯವೆಂದೇ ಭಾವಿಸಲಾಗಿತ್ತು.  ಈ ಬಗ್ಗೆ ಸ್ವತಃ ಖಾನ್‌ತ್ರಯರಿಗೇ ನಂಬಿಕೆ ಇರಲಿಲ್ಲ. ಆದರೆ, ಅಂಬಾನಿ ಈ ಮೂವರನ್ನೂ ಒಂದೇ ವೇದಿಕೆಗೆ ಒಟ್ಟಿಗೇ ತಂದಿದ್ದಾರೆ. 

ಈ ಮೂರೂ ಜನ ಒಟ್ಟಿಗೇ ಕುಣಿದಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಲ್ಲಿಯೇ ಪರ್ಫಾಮೆನ್ಸ್ ಕೊಟ್ಟರೂ ಬಿಟ್ಟಿಯಾಗಿಯಂತೂ ಕೊಡುವುದಿಲ್ಲ. ಅಂತೆಯೇ ಈ ಮೂವರು ಖಾನ್‌ಗಳು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಕುಣಿಯಲು ಪಡೆದ ಸಂಭಾವನೆ ಎಷ್ಟು?

ಮೂರು ದಿನಗಳ ಪೂರ್ವ ವಿವಾಹ ಸಮಾರಂಭದ ಅತ್ಯಂತ ವೈರಲ್ ವೀಡಿಯೊಗಳಲ್ಲಿ ಒಂದೆಂದರೆ ಮೂವರು ಖಾನ್‌ಗಳು ಒಟ್ಟಿಗೇ ಕುಣಿದಿದ್ದು. ಆರ್‌ಆರ್‌ಆರ್ ಚಿತ್ರದ 'ನಾಟು ನಾಟು' ಹಾಡಿಗೆ ಸ್ಟೆಪ್ಸ್ ಹಾಕಲು ಹೋಗಿ ಅದು ಬಾರದೆ ಕಡೆಗೆ ತಮ್ಮದೇ ಸಿಗ್ನೇಚರ್ ಸ್ಟೆಪ್ಸ್ಗಳನ್ನು ಹಾಕಿದರು ಮೂವರು ಖಾನ್‌ಗಳು. 

ವೈಯಕ್ತಿಕ ಸಂಭಾವನೆ
ಸಲ್ಮಾನ್ ಖಾನ್ ಸಾಮಾನ್ಯವಾಗಿ ಕೇವಲ ಒಂದೆರಡು ನಿಮಿಷಗಳ ಕಾಲ ಮದುವೆಯಲ್ಲಿ ಪ್ರದರ್ಶನ ನೀಡಲು 3ರಿಂದ 5 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಎಂದು ವರದಿಗಳು ಬಹಿರಂಗಪಡಿಸಿವೆ.

ಶಾರುಖ್ ಖಾನ್ ಅದಕ್ಕಾಗಿ 3 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ ಎಂದು ಹೇಳಲಾಗುತ್ತದೆ.  ಅಮೀರ್ ಖಾನ್ ಮದುವೆಗಳಲ್ಲಿ ಪ್ರದರ್ಶನ ನೀಡದಿರುವ ತಮ್ಮ ನಿಲುವನ್ನು ಯಾವಾಗಲೂ ಉಳಿಸಿಕೊಂಡಿದ್ದಾರೆ. ಆದರೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗಾಗಿ ಈ ಶಪಥ ಮುರಿದಿದ್ದಾರೆ.

ಒಂದು ಪೈಸೆಯೂ ಪಡೆದಿಲ್ಲ
ಆದಾಗ್ಯೂ, ಈ ಮೂವರೂ ಮದುವೆಯ ಪೂರ್ವ ಆಚರಣೆಗಳಲ್ಲಿ ಪ್ರದರ್ಶನ ನೀಡಲು ಒಂದು ಪೈಸೆಯನ್ನೂ ವಿಧಿಸಿಲ್ಲ ಎಂದು ವರದಿಗಳು ಸೂಚಿಸುತ್ತವೆ.

ಈ ಮೂವರು ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದೊಂದಿಗೆ ವೈಯಕ್ತಿಕ ಮತ್ತು ನಿಕಟ ಸಂಬಂಧವನ್ನು ಹೊಂದಿದ್ದಾರೆ ಮತ್ತು ಆದ್ದರಿಂದ ಪ್ರೀತಿಯಿಂದ ಪ್ರದರ್ಶನ ನೀಡಿದರು ಮತ್ತು ಒಂದು ರೂಪಾಯಿಯನ್ನು ವಿಧಿಸಲಿಲ್ಲ.

Latest Videos

click me!