ದೀಪಿಕಾ ಪಡುಕೋಣೆ ನಗ್ತಿದ್ಲು, ಇದ್ದಕ್ಕಿದ್ದಂತೆ ಅಳ್ತಿದ್ಲು.. ಪತ್ನಿ ಹೀಗೇಕಾಡ್ತಿದ್ಳು ಎಂದು ಹೇಳಿದ ರಣವೀರ್ ಸಿಂಗ್

Published : Mar 05, 2024, 04:05 PM IST

ಬಾಲಿವುಡ್‌ನ ಟಾಪ್ ನಟಿ ದೀಪಿಕಾ ಪಡುಕೋಣೆ ಬಗ್ಗೆ ಪತಿ ರಣವೀರ್ ಸಿಂಗ್ ಒಂದು ವಿಷಯ ಹೊರ ಹಾಕಿದ್ದಾರೆ. ಆಕೆ ಜೋರಾಗಿ ನಗುತ್ತಲೇ ಇದ್ದಕ್ಕಿದ್ದಂತೆ ಅಳ್ತಿದ್ದಳು ಎಂದು. ಡಿಂಪಲ್ ದೀಪ್ಸ್ ಈ ರೀತಿ ಆಡಿದ್ದು ಯಾವಾಗ? 

PREV
110
ದೀಪಿಕಾ ಪಡುಕೋಣೆ ನಗ್ತಿದ್ಲು, ಇದ್ದಕ್ಕಿದ್ದಂತೆ ಅಳ್ತಿದ್ಲು.. ಪತ್ನಿ ಹೀಗೇಕಾಡ್ತಿದ್ಳು ಎಂದು ಹೇಳಿದ ರಣವೀರ್ ಸಿಂಗ್

ಬಾಲಿವುಡ್ ‌ನ ಸ್ಟಾರ್ ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ. ಇತ್ತೀಚೆಗಷ್ಟೇ ನಟಿ ಗರ್ಭಿಣಿ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ನಡುವೆ ರಣವೀರ್ ಸಿಂಗ್, 'ದೀಪಿಕಾ ನಗುತ್ತಿದ್ದಳು, ಅಳುತ್ತಿದ್ದಳು' ಎಂದು ಹೇಳಿದ್ದಾರೆ.

210

ಓಹ್, ಪ್ರಗ್ನೆನ್ಸಿ ಅಂದಾಗ ಈ ರೀತಿ ಮೂಡ್ ಸ್ವಿಂಗ್ಸ್ ಇರುತ್ತೆ. ಅದೇ ಇರಬೇಕು ಎಂದು ನೀವಂದುಕೊಂಡಿರಬಹುದು. ಆದರೆ, ವಿಷಯ ಅದಲ್ಲ. ದೀಪಿಕಾ ಪಡುಕೋಣೆ ಈ ರೀತಿ ವರ್ತಿಸಿದ್ದು ಯಾವಾಗ, ಏಕೆ ಎಲ್ಲವನ್ನೂ ರಣವೀರ್ ವಿವರಿಸಿದ್ದಾರೆ. 
 

310

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಬಾಲಿವುಡ್‌ನಲ್ಲಿ ಕಳೆದ ವರ್ಷಾಂತ್ಯದಲ್ಲಿ ತೆರೆ ಕಂಡು ಗೆಲುವು ಕಂಡ ಚಿತ್ರ. ಇದರಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದಾರೆ.

410

ಈ ಚಿತ್ರದ ಯಶಸ್ಸಿನ ಪಾರ್ಟಿಯಲ್ಲಿ ಮುಂಬೈನಲ್ಲಿ  ಎಲ್ಲರೂ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಣವೀರ್ ಸಿಂಗ್ ತಮ್ಮ ಪತ್ನಿ ದೀಪಿಕಾಗೆ  'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಬಹಳ ಇಷ್ಟವಾಗಿದೆ ಎಂದರು. 

510

ಮುಂದುವರಿದು, ತಾವು ಈ ಚಿತ್ರ ತೋರಿಸಲು ದೀಪಿಕಾಳನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿ ಕಡೆಯ ಸಾಲಿನಲ್ಲಿ ಕುಳಿತಿದ್ದುದಾಗಿ ಹೇಳಿದ್ದಾರೆ.

610

ತಾವು ಈ ಸಿನಿಮಾವನ್ನು ಮೊದಲೇ ನೋಡಿದ್ದರೂ, ಚಿತ್ರ ನೋಡುವಾಗ ದೀಪಿಕಾ ರಿಯಾಕ್ಷನ್ ಹೇಗಿರುತ್ತದೆ ಎಂದು ನೋಡಬೇಕೆಂದೇ ನಟ ಆಕೆಯನ್ನು ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದರಂತೆ.

 

710

ಈ ಸಂದರ್ಭದಲ್ಲಿ ದೀಪಿಕಾ ಚಿತ್ರವನ್ನು ಎಂಜಾಯ್ ಮಾಡುತ್ತಿದ್ದರಂತೆ. 'ಅವಳು ನಗುತ್ತಿದ್ದಳು, ಅಳುತ್ತಿದ್ದಳು, ಅವಳು ಚಪ್ಪಾಳೆ ತಟ್ಟುತ್ತಿದ್ದಳು, ಶಿಳ್ಳೆ ಹೊಡೆಯುತ್ತಿದ್ದಳು ಮತ್ತು ಆಗಾಗ್ಗೆ ನನ್ನ ಕಡೆಗೆ ತಿರುಗುತ್ತಿದ್ದಳು' ಎಂದಿದ್ದಾರೆ.

810

ನಾನು ಅವಳೊಂದಿಗೆ ಕುಳಿತು ನನ್ನದೇ ಚಿತ್ರ ನೋಡಿದ ಈ ಅತ್ಯುತ್ತಮ ಅನುಭವವನ್ನು ಹೊಂದಿದ್ದೇನೆ. ಅವಳು ನನ್ನ ಬಗ್ಗೆ ತುಂಬಾ ಹೆಮ್ಮೆ ಪಡುತ್ತಾಳೆ ಮತ್ತು ನನಗೆ ಸಂತೋಷವಾಗಿದೆ ಎಂದು ರಣವೀರ್ ಹೇಳಿದ್ದಾರೆ. 

910

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರವು ಪ್ರಸ್ತುತ ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ.  ಭಾರತದಲ್ಲಿ ಮೊದಲ ದಿನದಲ್ಲಿ ಆಲಿಯಾ-ರಣ್‌ವೀರ್ ಅಭಿನಯದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 11.10 ಕೋಟಿ ರೂ. ಕಲೆಕ್ಷನ್ ಮಾಡಿದೆ. 

 

1010

ಏತನ್ಮಧ್ಯೆ, ದೀಪಿಕಾ ಮುಂದಿನ ವೈಜ್ಞಾನಿಕ ಆಕ್ಷನ್ ಚಿತ್ರ 'ಕಲ್ಕಿ 2898 AD' ನಲ್ಲಿ ಪ್ರಭಾಸ್ ಎದುರು ಕಾಣಿಸಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಜನವರಿ 12, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Read more Photos on
click me!

Recommended Stories