ತೆಲುಗು ಎವರ್‌ಗ್ರೀನ್ ನಟಿ ಸೌಂದರ್ಯ. ಅದ್ಭುತ ನಟಿಯನ್ನ ತೆಲುಗು ಚಿತ್ರರಂಗ ಬೇಗನೆ ಕಳೆದುಕೊಂಡಿದೆ. ಕೇವಲ 12 ವರ್ಷಗಳಲ್ಲಿ ಅದ್ಭುತಗಳನ್ನೇ ಮಾಡಿದ್ರು. ಆಗಿನ ಸ್ಟಾರ್ ಹೀರೋಗಳ ಜೊತೆ ನಟಿಸಿದ್ರು. ಅಮಿತಾಬ್ ಬಚ್ಚನ್ ನಿಂದ ಚಿರಂಜೀವಿ, ಬಾಲಯ್ಯ, ನಾಗಾರ್ಜುನ, ವೆಂಕಟೇಶ್, ಜಗಪತಿಬಾಬು, ರಾಜಶೇಖರ್, ಶ್ರೀಕಾಂತ್, ಜೆಡಿ ಚಕ್ರವರ್ತಿ, ರಾಜೇಂದ್ರ ಪ್ರಸಾದ್, ರಜನಿಕಾಂತ್, ಕಮಲ್ ಹೀಗೆ ಎಲ್ಲರ ಜೊತೆಗೂ ನಟಿಸಿದ್ರು. ಆ ಕಾಲದ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ರು.