ಶಾರುಖ್ ಪುತ್ರ ಆರ್ಯನ್ ಅನುಸರಿಸುವ ಧರ್ಮ ಯಾವುದು? ಬಹಿರಂಗ ಪಡಿಸಿದ ಗೌರಿ ಖಾನ್!

First Published | Oct 12, 2024, 7:42 PM IST

ಬಾಲಿವುಡ್ ಸೆಲೆಬ್ರೆಟಿ ದಂಪತಿಗಳ ಪೈಕಿ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಹಿಂದೂ ಮುಸ್ಲಿಮ್. ಆದರೆ ಮಗ ಆರ್ಯನ್ ಖಾನ್ ಅನುಸರಿಸುವ ಧರ್ಮ ಯಾವುದು? ಈ ಕುರಿತು ಸ್ವತಃ ಗೌರಿ ಖಾನ್ ಬಹಿರಂಗಪಡಿಸಿದ್ದಾರೆ.

ದೀಪಾವಳಿ ಆಗಿರಲಿ, ಈದ್ ಆಗಿರಲಿ ಬಾಲಿವುಡ್ ನಟ ಶಾರುಖ್ ಖಾನ್ ಮನೆಯಲ್ಲಿ ಅಷ್ಟೇ ಸಂಭ್ರಮ. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಸೆಲೆಬ್ರೆಟಿ ದಂಪತಿಯ ಧರ್ಮ ಬೇರೆ ಯಾಗಿದ್ದರೂ ಸಂಭ್ರಮ ಒಂದೆ. ಇವರಿಬ್ಬರ ಲವ್ ಸ್ಟೋರಿ ಯಾವ ಸಿನಿಮಾಗಿಂತ ಕಡಿಮೆ ಇಲ್ಲ. ಶಾರುಖ್ ಮನೆಯಲ್ಲಿ ಧರ್ಮದ ಕಟ್ಟುಪಾಡುಗಳಿಲ್ಲ. ಎಲ್ಲರು ಸ್ವತಂತ್ರರು. ಹೀಗಿರುವಾಗ ಇದೀಗ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಪುತ್ರ ಆರ್ಯನ್ ಖಾನ್ ಯಾವ ಧರ್ಮ ಪಾಲಿಸುತ್ತಾರೆ ಅನ್ನೋ ಕುತೂಹಲಕ್ಕೆ ಗೌರಿ ಉತ್ತರ ನೀಡಿದ್ದಾರೆ.

ಅಪ್ಪ ಮುಸ್ಲಿಂ, ತಾಯಿ ಹಿಂದೂ, ಹೀಗಾಗಿ ಮಗ ಆರ್ಯನ್ ಖಾನ್ ಯಾವ ಧರ್ಮ ಪಾಲಿಸುತ್ತಾರೆ ಅನ್ನೋ ಕುತೂಹಲ ಗೌಪ್ಯವಾಗಿ ಉಳಿದಿಲ್ಲ. ಈ ಕುರಿತು ಗೌರಿ ಖಾನ್ ಸ್ಪಷ್ಟನೆ ನೀಡಿದ್ದಾರೆ. ಆರ್ಯನ್ ಖಾನ್ ತಂದೆ ಶಾರುಖ್‌ಗೆ ಹೆಚ್ಚು ಆತ್ಮೀಯ. ಶಾರುಖ್ ಪ್ರತಿ ಹೆಜ್ಜೆಯನ್ನು ಪಾಲಿಸುತ್ತಾನೆ. ಶಾರುಖ್ ಧರ್ಮವನ್ನೇ ಆರ್ಯನ್ ಖಾನ್ ಅನುಸರಿಸುತ್ತಾನೆ ಎಂದು ಗೌರಿ ಖಾನ್ ಹೇಳಿದ್ದಾರೆ.

Tap to resize

ಆರ್ಯನ್ ಖಾನ್ ಮುಸ್ಲಿಮ್ ಧರ್ಮ ಪಾಲಿಸುತ್ತಾರೆ ಎಂದು ಗೌರಿ ಖಾನ್ ಸ್ಪಷ್ಟಪಡಿಸಿದ್ದಾರೆ. ಮನೆಯಲ್ಲಿ ಯಾರು ಯಾವ ಧರ್ಮ ಪಾಲಿಸಬೇಕು ಎಂದು ಯಾವುದೇ ಒತ್ತಾಯವಿಲ್ಲ. ವಿಶೇಷ ಮಕ್ಕಳಿಗೆ ಯಾವುದೇ ಧರ್ಮವಿಲ್ಲ ಎಂದು ಶಾರುಖ್ ಪದೇ ಪದೇ ಹೇಳುತ್ತಾರೆ ಎಂದು ಗೌರಿ ಖಾನ್ ಹೇಳಿದ್ದಾರೆ.

ನಾನು ಶಾರುಖ್ ಖಾನ್ ಧರ್ಮವನ್ನು ಗೌರವಿಸುತ್ತೇನೆ. ಹಾಗಂತ ನಾನು ಮತಾಂತರಗೊಂಡಿಲ್ಲ. ಶಾರುಖ್ ನನ್ನ ಧರ್ಮವನ್ನು ಗೌರವಿಸುತ್ತಾರೆ. ನಾವು ಜೊತೆಯಾಗಿ ಎರಡೂ ಧರ್ಮದ ಹಬ್ಬ ಆಚರಿಸುತ್ತೇವೆ. ಮನೆಯ ಗುಡಿಯಲ್ಲಿ ಖುರಾನ್ ಇಡಲಾಗಿದೆ. ಧರ್ಮಗಳ ಕುರಿತು ನಿಬಂಧನೆಗಳಿಲ್ಲ. ಎಲ್ಲರೂ ಸ್ವತಂತ್ರರು ಎಂದು ಗೌರಿ ಖಾನ್ ಹೇಳಿದ್ದಾರೆ. 

ಇದೇ ವೇಳೆ ಆರ್ಯನ್ ಖಾನ್ ಬಾಲಿವುಡ್‌ಗೆ ಎಂಟ್ರಿ ಕೊಡುವ ಕುರಿತು ಗೌರಿ ಖಾನ್ ಮಾತನಾಡಿದ್ದಾರೆ. ಆರ್ಯನ್ ಖಾನ್ ನಟನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಆರ್ಯನ್ ಸದ್ಯ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾನೆ. ಆರ್ಯನ್ ಖಾನ್ ನಿರ್ದೇಶನದ ವೆಬ್ ಸೀರಿಸ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಗೌರಿ ಖಾನ್ ಹೇಳಿದ್ದಾರೆ.

Latest Videos

click me!